Karnataka Times
Trending Stories, Viral News, Gossips & Everything in Kannada

DK Suresh: ರಾಜ್ಯದ ಮಹಿಳೆಯರ ಖಾತೆಗೆ 4 ಸಾವಿರ ರೂ ಜಮೆ ಮಾಡುತ್ತೇವೆ; ಸಂಸದ ಡಿ.ಕೆ. ಸುರೇಶ್

advertisement

ರಾಜ್ಯದ ಗ್ಯಾರಂಟಿ ಯೋಜನೆಗಳು ಈಗಾಗಲೇ ಅಭಿವೃದ್ಧಿಯ ಹಂತದಲ್ಲಿದೆ.ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿಯೋಜನೆ, ಅನ್ನಭಾಗ್ಯ, ಶಕ್ತಿ ಯೋಜನೆ ಎಲ್ಲ ಸೌಲಭ್ಯವು ಜಾರಿಗೆ ಬಂದಿದ್ದು ಹಲವು ಬಡವರ್ಗದ ಜನತೆ ಸಹಾಯ ಪಡೆಯುತ್ತಿದೆ. ಈಗಾಗಲೇ ಈ ಬಗ್ಗೆ ವಿಪಕ್ಷಗಳು ಟೀಕೆಗಳನ್ನು ಮಾಡಿದ್ದು ಕಾಂಗ್ರೆಸ್ ನಾಯಕರು ಕೂಡ ಈ ಬಗ್ಗೆ ಉತ್ತರ ನೀಡಿದ್ದರು. ಇದೀಗ ಸಂಸದ ಡಿ‌, ಕೆ ಸುರೇಶ್ ಅವರು ಮಹೀಳೆಯರಿಗೆ ನಾಲ್ಕು ಸಾವಿರ ಹಣ ಜಮೆ ಮಾಡುತ್ತೇವೆ ಎನ್ನುವ ಹೇಳಿಕೆ ಎಲ್ಲೆಡೆ ವೈರಲ್ ಆಗಿದೆ.

ರಾಜ್ಯದ ತೆರಿಗೆ ಹಣ ನಮ್ಮ ರಾಜ್ಯಕೆ ನೀಡಲಿ:

 

 

ಕುದೂರುನಲ್ಲಿ ಕಾಂಗ್ರೆಸ್ ಆಯೋಜನೆ ಮಾಡಿದ್ದ ಹೋಬಳಿ ಮಟ್ಟದ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ (DK Suresh) ನಮ್ಮ ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ. ನಮ್ಮ ತೆರಿಗೆ ಹಣವನ್ನು ವಾಪಸ್ ನೀಡಲಿ, ಮಹಿಳೆಯರಿಗೆ ಈಗಿರುವ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ 2000 ರೂ. ಜೊತೆಗೆ ಮತ್ತೆ ಎರಡು ಸಾವಿರ ಸೇರಿಸಿ ಒಟ್ಟು 4000 ರೂ. ಕೊಡುತ್ತೇವೆ ಎಂದು ಹೇಳಿದರು.

advertisement

ಗ್ಯಾರಂಟಿ ಯೋಜನೆಗಳ ಸಫಲತೆ:

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರವು ಮಹೀಳೆಯರಿಗೆ ಹೆಚ್ಚು ಆದ್ಯತೆ ನೀಡಿದೆ. ಶಕ್ತಿ ಯೋಜನೆ (Shakti Yojana) ಯಡಿ ದಿನ ನಿತ್ಯ 30 ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 200 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಎಲ್ಲಾ ಗ್ಯಾರಂಟಿ ಯೋಜನೆಗಳ ಬಳಕೆ ಜನತೆಗೆ ಖುಷಿ ಕೊಟ್ಟಿದೆ ಎಂದರು.

ನಮ್ಮ ರಾಜ್ಯ ಅಭಿವೃದ್ಧಿ ಯಾಗಲಿ:

ನಮ್ಮ ರಾಜ್ಯದ ತೆರಿಗೆ ಹಣವನ್ನು ಉತ್ತರಪ್ರದೇಶ, ಬಿಹಾರ, ಒರಿಸ್ಸಾಗೆ ತೆಗೆದುಕೊಂಡು ಹೋದರೆ ನಮ್ಮ ರಾಜ್ಯ ಅಭಿವೃದ್ಧಿ ಯಾಗುವುದು ಬೇಡವೆ? ನಮ್ಮ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯಿಂದ ಬಡ ವರ್ಗದ ಜನತೆಗೆ ಸಹಾಯ ವಾಗುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿ ದ್ದಾರೆ. ನಮ್ಮ ತೆರಿಗೆ ಹಣದ ಪಾಲು ನಮ್ಮ ರಾಜ್ಯಕ್ಕೆ ಸರಿಯಾಗಿ ಕೊಡದೆ ಇದ್ದಾಗ ದಕ್ಷಿಣ ಭಾರತಕ್ಕೆ ಮಲತಾಯಿ ಧೋರಣೆ ಮಾಡುತ್ತಿದ್ದೀರಿ ಎಂದರು.

advertisement

Leave A Reply

Your email address will not be published.