Karnataka Times
Trending Stories, Viral News, Gossips & Everything in Kannada

Helmet Rules: ಹೆಲ್ಮೆಟ್ ಧರಿಸಿದ್ದರೂ ಬೀಳುತ್ತೆ 2,000ರೂಪಾಯಿ ದಂಡ, ಹೊಸ ನಿಯಮ ಜಾರಿಗೆ!

advertisement

ಭಾರತದ ಸಂಚಾರ ನಿಯಮ ಆಡಳಿತ ವ್ಯವಸ್ಥೆಗೆ ಅನುಗುಣವಾಗಿ ಆಗಾಗ ಬದಲಾಗುತ್ತಲೇ ಇರುತ್ತದೆ. ವಾಹನಗಳ ಓಡಾಟಕ್ಕೆ ಸಂಬಂಧಿಸಿದಂತೆ ಅನೇಕ ನಿಯಮ ಚಾಲ್ತಿಯಲ್ಲಿದ್ದು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (Helmet) ಧರಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಅದೇ ರೀತಿ ನಿಯಮ ಪಾಲಿಸದೇ ಇದ್ದರೆ ದಂಡವನ್ನು ಕೂಡ ಪಾವತಿಸಬೇಕಿದೆ. ದ್ವಿಚಕ್ರ ವಾಹನ ಸವಾರರಿಗೆ ಅಪಘಾತ ಸಂದರ್ಭದಲ್ಲಿ ರಕ್ಷಣೆ ಇದರ ಮೂಲ ಉದ್ದೇಶವಾಗಿದ್ದು ಇನ್ನು ಮುಂದೆ ಹೆಲ್ಮೆಟ್ ಧರಿಸಿದ್ರು ಫೈನ್ ಕಟ್ಟಬೇಕಾಗುವ ಸಾಧ್ಯತೆ ಸಹ ಬರಬಹುದು.

ಸುರಕ್ಷತೆ ಉದ್ದೇಶ:

ಬೈಕ್, ಸ್ಕೂಟಿ ವಾಹನ ಸವಾರರಿಗೆ ಹೆಲ್ಮೆಟ್ (Helmet) ಧರಿಸಬೇಕು ಎಂಬ ನಿಯಮ ಇದ್ದ ಕಾರಣಕ್ಕಾಗಿ ರೋಡ್ ಬದಿಯಲ್ಲಿ ಸಿಗುವ ಕಡಿಮೆ ಗುಣಮಟ್ಟದ ಹೆಲ್ಮೆಟ್ ಧರಿಸಿ ಫೈನ್ ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅಪಘಾತ ನಡೆದರೆ ಸಾವು ನೋವು ಆಗುವ ಸಾಧ್ಯತೆ ಇದೆ. ಹಾಗಾಗಿ 2000 ಸಾವಿರ ಉಳಿಸಲು ಹೋಗಿ 300 ರೂಪಾಯಿ ಹೆಲ್ಮೆಟ್ ಧರಿಸಿ ಸುರಕ್ಷತಾ ಕ್ರಮ ಇಲ್ಲದಿದ್ದರೆ ಫೈನ್ ಕಟ್ಟಬೇಕಾಗುತ್ತದೆ.

ದಂಡ ಗ್ಯಾರೆಂಟಿ:

 

advertisement

 

ಅನೇಕ ಬಾರಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿದ್ದರೂ ಸಂಚಾರ ನಿಯಮಗಳಾದ ಸಿಗ್ನಲ್ ಜಂಪ್, ಓವರ್ ಸ್ಪೀಡ್ ಚಲಾಯಿಸುವುದು, ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ, ಕುಡಿದು ವಾಹನ ಬಳಸುವುದು ಇನ್ನಿತರ ವಿಚಾರಗಳಿಗೆ ಸಂಚಾರ ನಿಯಮ ಜಾರಿಯಾಗಿತ್ತು. ಅದರ ಪ್ರಕಾರ 500 ರೂಪಾಯಿ ಯಿಂದ 10,000 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತಿತ್ತು. ಅದೇ ರೀತಿ ಹೆಲ್ಮೆಟ್ ನಲ್ಲಿ ISI ಇರುವ ಜೊತೆಗೆ ಸುರಕ್ಷಿತವಾಗಿ ಇರಬೇಕು. ಹೆಸರಿಗೆ ಮಾತ್ರ ಹೆಲ್ಮೇಟ್ ಆಗಿರದೆ ನಿಮ್ಮ ಶಿರ ರಕ್ಷಣೆಗೆ ಅದು ಬದ್ದವಾಗಬೇಕಿದೆ.

ನಮ್ಮ ಕರ್ತವ್ಯ:

ಹೆಲ್ಮೆಟ್ ಧರಿಸಿದರೂ ಇತರ ಸಂಚಾರ ನಿಯಮ ಉಲ್ಲಂಘನೆ ಆದರೆ ಅದು ವಾಹನ ಸವಾರರದ್ದೇ ತಪ್ಪು ಅದಕ್ಕಾಗಿ ಸರಕಾರ ಸಂಚಾರ ನಿಯಮಗಳನ್ನು ಬದಿಗೆ ತಳ್ಳುವವರ ವಿರುದ್ಧ ದಂಡದ ನಿಯಮ ಜಾರಿಗೆ ತರಲು ಮುಂದಾಗಿದೆ. ಎಷ್ಟೋ ಬಾರಿ ವಾಹನ ಚಲಾಯಿಸುವಾಗ ಪಾದಾಚಾರಿಗಳಿಗೆ, ನಿಂತ ವಾಹನಕ್ಕೆ ಢಿಕ್ಕಿ ಹೊಡೆದು ಸಹ ಅಪಘಾತ ಆಗುತ್ತದೆ. ಆಗ ಹೊಣೆ ವಾಹನ ಸವಾರರದ್ದು ಅದಕ್ಕಾಗಿ ಸಂಚಾರ ನಿಯಮ ಕಟ್ಟು ನಿಟ್ಟಿನ ಪಾಲನೆ ಆಗುವ ಹಾಗೆ ನೋಡಿಕೊಳ್ಳಲು ಸರಕಾರ ಮುಂದಾಗಿದ್ದು ನಿಯಮ ಪಾಲನೆ ಪ್ರತಿ ನಾಗರಿಕರ ಆದ್ಯ ಕರ್ತವ್ಯ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ವಾಹನ ಸವಾರರು ಯಾರೇ ಇರಲಿ ರಸ್ತೆಯಲ್ಲಿ ಓಡಾಡುವಾಗ ನಿಯಮ ಪಾಲನೆ ಮಾಡಿ, ಹಾಗೂ ಈ ಬಗ್ಗೆ ನಿಮ್ಮ ಸ್ನೇಹಿತರಿಗೆ , ಕುಟುಂಬ ವರ್ಗದವರಿಗೆ ನಿಯಮ ಪಾಲನೆಗೆ ನೀವು ಮನವೊಲಿಸಬಹುದು. ಇಲ್ಲವಾದರೆ ದಂಡಕ್ಕಿಂತ ಅತ್ಯಮೂಲ್ಯ ಜೀವ ಹಾನಿಯಾದರೆ ಬಳಿಕ ಕೊರಗಿ ಏನು ಪ್ರಯೋಜನವಾಗದು. ಹಾಗಾಗಿ ಈ ಬಗ್ಗೆ ಗಮನ ಹರಿಸಬೇಕಾದ ಅಗತ್ಯತೆ ಇಂದಿನ ಸಮಾಜಕ್ಕೆ ಇದೆ.

advertisement

Leave A Reply

Your email address will not be published.