Karnataka Times
Trending Stories, Viral News, Gossips & Everything in Kannada

Post Office Agent: ನೀವು ಅಂಚೆ ಕಚೇರಿಯ ಏಜೆಂಟ್ ಆಗಿ ಕಾರ್ಯನಿರ್ವಹಿಸಬೇಕೇ? ಹಾಗಾದ್ರೆ ಇಲ್ಲಿದೆ ನೋಡಿ ಸಂಪೂರ್ಣ ವಿವರ!

advertisement

ಇಂದು ಸಾಕಷ್ಟು ಯುವಕ ಯುವತಿಯರು ಉದ್ಯೋಗದ ಹುಡುಕಾಟದಲ್ಲಿ ಇದ್ದಾರೆ. ಅದರಲ್ಲೂ ತಮಗೆ ಸರ್ಕಾರಿ ಉದ್ಯೋಗ ಹಾಗೂ ಪರ್ಮನೆಂಟ್ ಕೆಲಸ ಸಿಕ್ಕರೆ ಎಷ್ಟು ಚೆನ್ನಾಗಿರುತ್ತೆ ಎಂದು ಭಾವಿಸುವವರೇ ಜಾಸ್ತಿ. ಹಾಗೆ ನೀವು ಕೂಡ ಉತ್ತಮ ಉದ್ಯೋಗವನ್ನು ಹುಡುಕುತ್ತಿದ್ದರೆ ಅಂಚೆ ಕಚೇರಿಯಲ್ಲಿ ಕೆಲಸ ಮಾಡಲು ಅವಕಾಶ ಇದೆ ನೋಡಿ.

ಹೌದು, ಉಳಿತಾಯ ಖಾತೆ ಅಥವಾ ಅಂಚೆ ಜೀವವಿಮೆ ಯೋಜನೆ (Post Office Life Insurance Scheme) ಯನ್ನು ಉತ್ತೇಜಿಸುತ್ತಿರುವ ಅಂಚೆ ಇಲಾಖೆ ಈಗ ಈ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವ ಸಲುವಾಗಿ ಪ್ರತಿ ಅಂಚೆ ಕಚೇರಿಯ ಉಪ ವಿಭಾಗದಲ್ಲಿ ಕನಿಷ್ಠ 20 ಯುವಕರನ್ನು ಕಮಿಷನ್ ಗಳನ್ನಾಗಿ ನೇಮಿಸಿಕೊಳ್ಳುತ್ತಿದೆ. ಅಂಚೆ ಕಚೇರಿಯ ಜೀವವೆಮೆ ಹಾಗೂ ಉಳಿತಾಯ ಯೋಜನೆಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ಏಜೆಂಟ್ಗಳ ಕೆಲಸವಾಗಿರುತ್ತದೆ.

ಅಂಚೆ ಕಚೇರಿಯ ಏಜೆಂಟ್ (Post Office Agent) ಕೆಲಸಕ್ಕೆ ಸೇರುವುದು ಹೇಗೆ?

 

advertisement

 

ಕಮಿಷನ್ ಏಜೆಂಟರು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವಂತೆ ಜನರನ್ನು ಪ್ರೇರೇಪಿಸಬೇಕು. ಈ ರೀತಿ ಮಾಡಿದರೆ PLI and SAS ಸಂಬಂಧಿಸಿದ ಜನರಿಗೆ ಉತ್ತಮ ಕಮಿಷನ್ ಅನ್ನು ಪೋಸ್ಟ್ ಆಫೀಸ್ ನೀಡುತ್ತದೆ.

ಅಂಚೆ ಕಚೇರಿಯ ಅಧಿಕೃತ ವೆಬ್ಸೈಟ್ https://www.indiapost.gov.in/ ಇಲ್ಲಿ ನೀವು ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ನಿರುದ್ಯೋಗಿಗಳಿಗೆ ಪೋಸ್ಟ್ ಆಫೀಸ್ ಏಜೆಂಟ್ (Post Office Agent) ಕೆಲಸ ಹೆಚ್ಚು ಆರ್ಥಿಕವಾಗಿ ಅನುಕೂಲವಾಗಬಹುದು. ಯಾಕಂದರೆ ಹೆಚ್ಚು ಹೆಚ್ಚು ಉಳಿತಾಯ ಖಾತೆ ಹಾಗೂ ವಿಮೆ ಪಾಲಿಸಿ ಮಾಡಿಸಿದರೆ ಅಂತವರಿಗೆ ಹೆಚ್ಚಿನ ಬೋನಸ್ ಹಾಗೂ ಇತರ ಪ್ರಯೋಜನಗಳನ್ನು ಕೂಡ ನೀಡಲಾಗುವುದು.

ಅಂಚೆ ಇಲಾಖೆಯಿಂದ ಠೇವಣಿ ಇರಿಸುವುದು ಹಾಗೂ ಆ ಹಣವನ್ನು ಹಿಂದೆ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಏಜೆಂಟ್ ಗಳು ಮಾಡುತ್ತಾರೆ. ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅಂಚೆ ಕಚೇರಿ ತನ್ನ ಪ್ರಮುಖ ಯೋಜನೆಗಳ ಮೂಲಕ ಜನರಲ್ಲಿ ಹೆಚ್ಚು ನಂಬಿಕೆ ಗಳಿಸಿಕೊಂಡಿದೆ. ಅಣ್ಣ ಇನ್ನಷ್ಟು ಹೆಚ್ಚಿಸುವ ಸಲುವಾಗಿ ಯುವಕರನ್ನ ಕಮಿಷನ್ ಏಜೆಂಟ್ ಗಳನ್ನು ಆಗಿ ನೇಮಿಸಿಕೊಳ್ಳಲಾಗುತ್ತಿದೆ. ಇನ್ನು ಏಜೆಂಟ್ ಗಳಿಗೆ 20% ನಷ್ಟು ಕಮಿಷನ್ ಸಿಗುತ್ತದೆ. ಹಾಗಾಗಿ ಯಾವುದೇ ಯುವಕರು ಉತ್ತಮ ಕೆಲಸವನ್ನು ಹುಡುಕುತ್ತಿದ್ದರೆ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಬಹುದು ಆಸಕ್ತಿ ಇದ್ದರೆ ಇಂದೇ ಅರ್ಜಿ ಸಲ್ಲಿಸಿ.

advertisement

Leave A Reply

Your email address will not be published.