Karnataka Times
Trending Stories, Viral News, Gossips & Everything in Kannada

Tata Punch EV: ಮಿಡಲ್ ಕ್ಲಾಸ್ ಜನರ ನೆಚ್ಚಿನ ಕಾರು ಬಿಡುಗಡೆ ಮಾಡಿದ ಟಾಟಾ! 27Km ಮೈಲೇಜ್.

advertisement

ಕಾರುಗಳ ತಯಾರಿಯಲ್ಲಿ ಭಾರತದಲ್ಲಿ ಟಾಟಾ ಮೋಟಾರ್ಸ್ (Tata Motors) ಅಗ್ರ ಸ್ಥಾನದಲ್ಲಿದೆ. ಟಾಟಾದ ಪ್ರಮುಖ ಇವಿಗಳು ಭಾರತದ ರಸ್ತೆಯಲ್ಲಿ ತಮ್ಮ ರಾಜ್ಯಭಾರ ಮಾಡುತ್ತಿವೆ. ಇದೀಗ ತನ್ನ ಇವಿ ಫೋರ್ಟ್‌ಪೋಲಿಯೋವನ್ನು ಇನ್ನಷ್ಟು ವಿಸ್ತರಿಸುವತ್ತ ಹೆಜ್ಜೆ ಇಟ್ಟಿರುವ ಟಾಟಾ (Tata) ಸಂಸ್ಥೆ ಬಹುನಿರೀಕ್ಷಿತ ಪಂಚ್ ಇವಿಯನ್ನು ಬಿಡುಗಡೆ ಮಾಡಿದೆ. ಹೊಸ ಎಲೆಕ್ಟ್ರಿಕ್ ಎಸ್‌ಯುವಿಯ ಎಕ್ಸ್‌ಶೋರೂಮ್ ಬೆಲೆ, ರೇಂಜ್, ವೈಶಿಷ್ಟ್ಯಗಳು ಸೇರಿದಂತೆ ಉಪಯುಕ್ತ ಮಾಹಿತಿಯನ್ನು ನೀಡಲಾಗಿದೆ.

Tata Punch EV ಎಕ್ಸ್‌ಶೋರೂಮ್ ಬೆಲೆ:

 

 

ಭಾರತದ ವಾಹನ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಟಾಟಾ ಪಂಚ್ ಇವಿ (Tata Punch EV) ಯ ಎಕ್ಸ್‌ಶೋರೂಮ್ ಬೆಲೆ 10.99 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಹಾಗೂ ಇದರ ಟಾಪ್ ಸ್ಪೆಸಿಫಿಕೇಷನ್‌ ರೂಪಾಂತರದ ಎಕ್ಸ್‌ಶೋರೂಮ್ ಬೆಲೆ 14.49 ಲಕ್ಷ ರೂಪಾಯಿ ತನಕ ಇದೆ. ಇನ್ನು ಜನವರಿ 22 ರಿಂದ ಈ ಎಲೆಕ್ಟ್ರಿಕ್ ಎಸ್‌ಯುವಿಯ ಡೆಲಿವರಿ ಆರಂಭವಾಗಲಿದೆ. ಈಗಾಗಲೇ ಈ ಎಸ್‌ಯುವಿ ದೇಶಾದ್ಯಂತ ಇರುವ ಶೋರೂಮ್‌ಗಳಿಗೆ ರವಾನೆಯಾಗುತ್ತಿದೆ.

Tata Punch EV ವೇರಿಯೆಂಟ್ ಹಾಗೂ ಎಕ್ಸ್‌ಶೋರೂಮ್ ಬೆಲೆ ಇಂತಿದೆ:

Punch EV Smart – 10.99 ಲಕ್ಷ ರೂಪಾಯಿ
Punch EV Smart Plus – 11.49 ಲಕ್ಷ ರೂಪಾಯಿ
Punch EV Adventure – 11.90 ಲಕ್ಷ ರೂಪಾಯಿ
Punch EV Adventure Long Range- 12.99 ಲಕ್ಷ ರೂಪಾಯಿ
Punch EV Empowered – 12.79 ಲಕ್ಷ ರೂಪಾಯಿ
Punch EV Empowered Long Range – 13.99 ಲಕ್ಷ ರೂಪಾಯಿ
Punch EV Empowered Plus- 13.29 ಲಕ್ಷ ರೂಪಾಯಿ
Punch EV Empowered Plus Long Range – 14.49 ಲಕ್ಷ ರೂಪಾಯಿ

Tata Punch EV ರೇಂಜ್:

 

advertisement

 

ಇನ್ನು ಹೊಸ ಪಂಚ್ ಇವಿಯ (Tata Punch EV) ರೇಂಜ್ ಬಗ್ಗೆ ನೋಡುವುದಾದರೆ, ಸ್ಟ್ಯಾಂಡರ್ಡ್‌ ಪಂಚ್ ಇವಿ, 25 kWh ಬ್ಯಾಟರಿ ಪ್ಯಾಕ್‌ ಹೊಂದಿದ್ದು, ಇದು 315 ಕಿಲೋಮೀಟರ್‌ನಷ್ಟು ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಇನ್ನೊಂದು 35 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿರುವ ಪಂಚ್ ಇವಿ ಲಾಂಗ್ ರೇಂಜ್ ರೂಪಾಂತರವು 421 ಕಿಲೋ ಮೀಟರ್‌ನಷ್ಟು ರೇಂಜ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಪಂಚ್ ಇವಿ ಟಾಟಾ ಮೋಟಾರ್ಸ್‌ನ ನಾಲ್ಕನೇ ಎಲೆಕ್ಟ್ರಿಕ್ ವಾಹನವಾಗಿದೆ.

ಟಾಟಾ ಪಂಚ್ ಕಾರ್ಯಕ್ಷಮತೆ ಹೇಗಿದೆ?

ಇನ್ನು ಪಂಚ್ ಇವಿ (Tata Punch EV) ಯ ಕಾರ್ಯಕ್ಷಮತೆಯ ಬಗ್ಗೆ ನೋಡುವುದಾದರೆ, ಮಧ್ಯಮ ಶ್ರೇಣಿಯ ಆವೃತ್ತಿಯು 80 ಬಿಎಚ್‌ಪಿ ಶಕ್ತಿ ಹಾಗೂ 114 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದ್ದರೆ, ಲಾಂಗ್ ರೇಂಜ್ ಆವೃತ್ತಿಯು 120 ಬಿಎಚ್‌ಪಿ ಶಕ್ತಿ ಹಾಗೂ 190 ಎನ್‌ಎಂ ಟಾರ್ಕ್‌ನ ಉತ್ಪಾದಿಸುತ್ತದೆ. ಪಂಚ್ ಇವಿಯನ್ನು 7.2 kW ಫಾಸ್ಟ್ ಹೋಮ್ ಚಾರ್ಜರ್ ಸೇರಿದಂತೆ ಎರಡು ಚಾರ್ಜಿಂಗ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. 50 kW DC ಫಾಸ್ಟ್ ಚಾರ್ಜರ್‌ಗಳನ್ನು ಬಳಸುವಾಗ ಪಂಚ್ ಇವಿ ಒಂದು ಗಂಟೆಯೊಳಗೆ 10% ರಿಂದ 80% ವರೆಗೆ ಚಾರ್ಜ್ ಮಾಡಬಹುದು ಎಂದು ಟಾಟಾ ಮೋಟಾರ್ಸ್‌ ಹೇಳಿದೆ.

ಈ ಕಾರಿನ ವಿಶಿಷ್ಟತೆಗಳೇನು?

ಇನ್ನು ಅಡ್ವೆಂಚರ್, ಎಂಪವರ್ಡ್ ಹಾಗೂ ಎಂಪವರ್ಡ್‌ ಪ್ಲಸ್‌ನಲ್ಲಿ ಸನ್‌ರೂಫ್‌ ಕೂಡಾ ಇರಲಿದೆ. ಆದರೆ, ಇದಕ್ಕೆ ಹೆಚ್ಚುವರಿ 50 ಸಾವಿರ ರೂಪಾಯಿ ಪಾವತಿಸಬೇಕಾಗುತ್ತದೆ. ಇನ್ನು ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ ಪಂಚ್ ಇವಿ ಅದರ ಐಸಿಇ ಹಾಗೂ ಸಿಎನ್‌ಜಿ ಮಾದರಿಗಿಂತ ಹೆಚ್ಚಿನ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ ಗ್ರಾಹಕರಿಗೆ ಸಿಗಲಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಹಾಗೂ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಅವಳಿ 10.25-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಚಾರ್ಜಿಂಗ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ ಪ್ಲೇ, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್‌, ಎರಡು-ಸ್ಪೋಕ್ ಸ್ಟೀರಿಂಗ್ ವೀಲ್ ಜೊತೆಗೆ ಪ್ರಕಾಶಿತ ಟಾಟಾ ಲೋಗೋ ಸೇರಿ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇನ್ನು ಸುರಕ್ಷತಾ ವೈಶಿಷ್ಟ್ಯಗಳಲ್ಲಿಎಲ್ಲಾ ರೂಪಾಂತರಗಳಲ್ಲಿ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ, ರೋಲ್-ಓವರ್ ಮಿಟಿಗೇಶನ್, ಬ್ರೇಕ್ ಡಿಸ್ಕ್ ವೈಪಿಂಗ್ ಸೇರಿ ಹಲವು ವೈಶಿಷ್ಟ್ಯಗಳಿವೆ.

ಈ ಕಾರನ್ನು ಬುಕ್ಕಿಂಗ್ ಮಾಡೋದು ಹೇಗೆ?

ಕಂಪನಿಯ Gen-2 EV ಆರ್ಕಿಟೆಕ್ಚರ್‌ನಲ್ಲಿ ನಿರ್ಮಿಸಲಾದ ಮೊದಲ ವಾಹನ ಇದಾಗಿದ್ದು, ಈ ಎಲೆಕ್ಟ್ರಿಕ್ ಎಸ್‌ಯುವಿಗಾಗಿ ಬುಕ್ಕಿಂಗ್‌ಗಳು ಈಗಾಗಲೇ ಆರಂಭಗೊಂಡಿದೆ. ಆಸಕ್ತ ಗ್ರಾಹಕರು ಅಧಿಕೃತ ವೆಬ್‌ಸೈಟ್ ಅಥವಾ ಕಂಪನಿ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ 21,000 ರೂಪಾಯಿ ಟೋಕನ್ ಮೊತ್ತವನ್ನು ಪಾವತಿಸಿ ಹೊಸ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಪಂಚ್ ಇವಿ ಎಸ್‌ಯುವಿ ಭಾರತದಲ್ಲಿ ಪ್ರಮುಖವಾಗಿ ಸಿಟ್ರೊಯೆನ್ eC3ಗೆ ನೇರ ಸ್ಪರ್ಧೆಯೊಡ್ಡಲಿದೆ. ಇದರೊಂದಿಗೆ ಎಂಜಿ ಕಾಮೆಟ್ ಇವಿಗೂ ಇದು ಪೈಪೋಟಿ ನೀಡಲಿದೆ.

advertisement

Leave A Reply

Your email address will not be published.