Karnataka Times
Trending Stories, Viral News, Gossips & Everything in Kannada

Visa Free Countries: ಭಾರತೀಯರು ಈಗ 62 ದೇಶಗಳಿಗೆ ವೀಸಾ ರಹಿತ ಪ್ರಯಾಣ ಬೆಳೆಸಬಹುದು! ಸಿಹಿಸುದ್ದಿ

advertisement

ಜಗತ್ತಿನ ಬಲಶಾಲಿ ಹಾಗೂ ದೊಡ್ಡ ರಾಷ್ಟ್ರಗಳ ಪಾಸ್ ಪೋರ್ಟ್ (Passport) ಹೊಂದಿರುವುದು ಎಂದರೆ ಒಂದು ರೀತಿಯ ಹೆಮ್ಮೆ ಎನ್ನಬಹುದು. ಇಂತಹ ಪಾಸ್ಪೋರ್ಟ್ ಇದ್ದಲ್ಲಿ ಹಲವಾರು ದೇಶಗಳಿಗೆ ವೀಸಾ ಇಲ್ಲದೆ ನೇರವಾದ ಎಂಟ್ರಿ ಸಿಗಲಿದೆ. ಭಾರತದ ಪಾಸ್ಪೋರ್ಟ್ ಇದ್ದಲ್ಲಿ ಕೂಡ ಹಲವಾರು ದೇಶಗಳಿಗೆ ಇದೇ ತರಹದ ವೀಸಾ (Visa) ಇರದ ಎಂಟ್ರಿ ಸಾಧ್ಯತೆ ಇದೆ ಹಾಗೂ ಈಗ ಇಂತಹ ದೇಶಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.

ಭಾರತದ ಪಾಸ್ಪೋರ್ಟ್ ಈಗ 62 ದೇಶಗಳಿಗೆ ವೀಸಾ ಇರದ ಎಂಟ್ರಿಯನ್ನು ನೀಡಲಿದೆ. ಇಂತಹ ವೀಸಾ ರಹಿತ (Visa Free) ಹೆಚ್ಚಿನ ದೇಶಗಳ ಪ್ರಯಾಣ ಸಾಧ್ಯತೆ ಇರುವ ದೇಶಗಳ ಪಟ್ಟಿಯಲ್ಲಿ ಈಗ ಭಾರತ ಎಂಬತ್ತನೇ ಸ್ಥಾನದಲ್ಲಿ ಇದೆ.

ಹೆಚ್ಚಿನ ದೇಶಗಳಿಗೆ ವೀಸಾ (Visa) ಇರದ ಎಂಟ್ರಿ ಎಂದರೆ ಜನರಿಗೆ ಓಡಾಡಲು ಇರುವ ಸ್ವಾತಂತ್ರ್ಯ ಎಂಬುದಾಗಿದೆ. ಯಾವುದೇ ಬಗೆಯ ಚಿಂತೆ ಇಲ್ಲದೆ ಅಥವಾ ವೀಸಾ ಮತ್ತಿತರ ಪ್ರೋಸೆಸ್ ನ ಅಗತ್ಯ ಇಲ್ಲದೆ ಹೆಚ್ಚಿನ ದೇಶಗಳಿಗೆ ಭೇಟಿ ನೀಡುವ ಅವಕಾಶ ಸಿಕ್ಕಾಗ ಹೆಚ್ಚಿನ ದೇಶಗಳನ್ನು ನೋಡಬಹುದು ಎನ್ನುವುದಾಗಿದೆ.

ಈ ಬಾರಿಯ ಇಂಡೆಕ್ಸ್ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸಿಂಗಾಪುರ್ ಮತ್ತು ಸ್ಪೇನ್ ನ ಜನರು ಅತಿ ಹೆಚ್ಚು ದೇಶಗಳನ್ನು ವೀಸಾ ಇಲ್ಲದೆ ಸುತ್ತಾಡಬಹುದು ಎಂದು ಹೇಳಿದೆ. ಈ ಎಲ್ಲಾ ದೇಶಗಳ ಜನರು 194 ದೇಶಗಳಿಗೆ ವೀಸಾ ರಹಿತವಾದ ಪ್ರಯಾಣ (Visa Free Countries) ಮಾಡಬಹುದಾಗಿದೆ.

advertisement

ಈ ರೀತಿಯ ವೀಸಾ ರಹಿತ ಎಂಟ್ರಿಗಳನ್ನು ರಾಂಕ್ ಮಾಡುವ ಹೆನ್ಲೆ ಪಾಸ್ಪೋರ್ಟ್ ಇಂಡೆಕ್ಸ್ ಜಗತ್ತಿನಾದ್ಯಂತ ಹೆಚ್ಚು ಪರಿಗಣಿಸಲಾಗುವ ಒಂದು ಇಂಡೆಕ್ಸ್ ಆಗಿದ್ದು ಈ ಇಂಡೆಕ್ಸ್ ನಲ್ಲಿ ರಾಂಕಿಂಗ್ ಪಡೆಯುವುದು ಎಂದರೆ ಆ ದೇಶಗಳಿಗೆ ಒಂದು ಬಗೆಯ ಹಿರಿಮೆ ಇದ್ದಂತೆ. ಜಪಾನ್ (Japan) ಮತ್ತು ಸಿಂಗಾಪುರ್ (Singapore) ಬಹಳಷ್ಟು ವರ್ಷಗಳಿಂದ ಈ ಇಂಡೆಕ್ಸ್ ನಲ್ಲಿ ಉತ್ತಮವಾದ ಸ್ಕೋರ್ ಅನ್ನು ಪಡೆಯುತ್ತಲೇ ಇವೆ.

ಈಗ ಭಾರತ ವೀಸಾ ರಹಿತವಾದ ಪ್ರಯಾಣ ಬೆಳೆಸಬಹುದಾದ ದೇಶಗಳೆಂದರೆ:

 

 

  • ಅಂಗೋಲ
  • ಬಾರ್ಬಡೋಸ್
  • ಭೂತಾನ್
  • ಬಲಿವಿಯ
  • ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಗಳು
  • ಬುರುಂಡಿ
  • ಕಾಂಬೋಡಿಯ
  • ಕೇಪ್ ವರ್ಡೆ ಐಲ್ಯಾಂಡ್
  • ಕೊಮೊರೊ ಐಲ್ಯಾಂಡ್ಸ್
  • ಕುಕ್ ಐಲ್ಯಾಂಡ್
  • ಜಿಬೌತಿ
  • ಡೊಮಿನಿಕಾ
  • ಎಲ್ ಸಲ್ವಾಡೋರ್
  • ಇಥಿಯೋಪಿಯಾ
  • ಫಿಜಿ
  • ಕ್ಯಾಬನ್
  • ಗ್ರೇನಾಡ
  • ಜಿನಿಯಾ ಬಿಸೌ
  • ಹೈಟೀ
  • ಇಂಡೋನೇಷ್ಯಾ
  • ಇರಾನ್
  • ಜಮೈಕಾ
  • ಕಝಕ್ ಸ್ತಾನ್
  • ಕೀನ್ಯಾ
  • ಕಿರಿಬಾತಿ
  • ಲೌಸ್
  • ಮೆಕಾವ್
  • ಮಡಗಾಸ್ಕರ್
  • ಮಲೇಶಿಯಾ
  • ಮಾಲ್ಡೀವ್ಸ್
  • ಮಾರ್ಷಲ್ ಐಲ್ಯಾಂಡ್
  • ಮೋರಿಷಿಯಸ್
  • ಮೈಕ್ರೋಸಿಯ
  • ಮೌಂಟೇ ರಾಟ್
  • ಮುಜಾಂಬಿಕ್ಯೂ
  • ಮಯನ್ಮಾರ್
  • ನೇಪಾಳ್
  • ನಿವು
  • ಓಮನ್
  • ಪಲಾವ್ ಐಲ್ಯಾಂಡ್
  • ಕತಾರ್
  • ರುವಾಂಡ
  • ಸಮೋವಾ
  • ಸೇನೆಗಲ್
  • ಸೋಮಾಲಿಯಾ
  • ಶ್ರೀಲಂಕಾ
  • ಸೈನ್ಟ್ ಕಿಡ್ಸ್ ಅಂಡ್ ನೇವಿಸ್
  • ಸೈಂಟ್ ಲೂಸಿಯಾ
  • ಸೈನ್ಟ್ ವಿನ್ಸೆಂಟ್
  • ತಂಝಾನೀಯ
  • ಥೈಲ್ಯಾಂಡ್
  • ಟೈಮೋರ್
  • ಟೋಮೋ
  • ಟ್ರಿನಿಡಾಡ್ ಮತ್ತು ಟೊಬಾಗೊ
  • ಟ್ಯುನಿಷಿಯಾ
  • ತುವಾಲು
  • ವನೌಟು
  • ಝಿಂಬಾವ್ವೆ
  • ಗ್ರೇನಾಡ

advertisement

Leave A Reply

Your email address will not be published.