Karnataka Times
Trending Stories, Viral News, Gossips & Everything in Kannada

FASTag KYC: ಫಾಸ್ಟ್ ಟ್ಯಾಗ್ ಕೆವೈಸಿ ನವೀಕರಣ ದಿನಾಂಕ ವಿಸ್ತರಣೆ, ಕೊನೆಯ ದಿನಾಂಕ ಯಾವಾಗ ತಿಳಿಯಿರಿ!

advertisement

ಟೋಲ್ ಗೇಟ್ ಮೂಲಕ ಪ್ರಯಾಣ ಮಾಡುವುದಿದ್ದರೆ ಪ್ರತಿಯೊಂದು ಗಾಡಿಗೂ ಫಾಸ್ಟ್ ಟ್ಯಾಗ್ (FASTag) ಅಳವಡಿಸಿರುವುದು ಕಡ್ಡಾಯವಾಗಿದೆ. ಇದೀಗ ಪ್ರತಿ ವಾಹನಕ್ಕೂ ” ಒಂದು ವಾಹನ ಒಂದು ಫಾಸ್ಟ್ ಟ್ಯಾಗ್” ಎನ್ನುವ ಉಪಕ್ರಮದ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ (NHAI) ಫಾಸ್ಟ್ ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗಿದೆ. ಈ ಫಸ್ಟ್ ಟ್ಯಾಗ್ ಅನ್ನು ಬೇರೆ ಯಾವುದೇ ವಾಹನಕ್ಕೆ ಬಳಸಲಾಗುವುದಿಲ್ಲ. ಒಂದು ವಾಹನಕ್ಕೆ ಒಂದು ಮಾತ್ರ ಬಳಕೆ ಮಾಡಬೇಕು.

FASTag KYC ನವೀಕರಣಕ್ಕೆ ಗಡವು ವಿಸ್ತರಣೆ:

 

 

ಪೇಟಿಎಂ ಬಳಕೆದಾರರಿಗೆ ಇದು ವಿಶೇಷವಾದ ಸೂಚನೆ ಆಗಿದೆ. ಇದೀಗ ಫಾಸ್ಟ್ ಟ್ಯಾಗ್ ಗಡುವನ್ನು ವಿಸ್ತರಣೆ ಮಾಡಿದೆ. ಮಾರ್ಚ್ 31ರವರೆಗೆ ಈ ಗಡುವು ವಿಸ್ತರಣೆ ಆಗಿದೆ.

ಹೌದು, NHAI ಫಾಸ್ಟ್ ಟ್ಯಾಗ್ ಕೆ ವೈ ಸಿ (FASTag KYC) ನವೀಕರಣಕ್ಕೆ ಈ ಹಿಂದೆ ಫೆಬ್ರುವರಿ 29 ಕೊನೆಯ ದಿನಾಂಕವಾಗಿತ್ತು. ಈಗ ಅದನ್ನು ಮಾರ್ಚ್ 31ರವರೆಗೆ ವಿಸ್ತರಿಸಿದೆ. ಅಂದರೆ ಬಳಕೆದಾರರಿಗೆ ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ. ಆರ್ ಬಿ ಐ, Paytm ಮೇಲೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಪೇಟಿಎಂ ಮೂಲಕ ಫಾಸ್ಟ್ ಟ್ಯಾಗ್ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಸಂಭವನೀಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಈ ಗುಡುಗು ವಿಸ್ತರಣೆ ಮಾಡಲಾಗಿದೆ ಎಂದು NHAI ಮಾಹಿತಿ ನೀಡಿದೆ.

FASTag KYC ಮಾಡಿಸಲು ಬೇಕಾಗಿರುವ ದಾಖಲೆಗಳು:

  • Vehicle Registration Certificate of Vehicle Owner
  • Driving License
  • Aadhaar Card
  • PAN Card
  • Voter ID
  • Address Proof
  • Passport Size Photo

advertisement

FASTag KYC ನವೀಕರಿಸುವುದು ಎಲ್ಲಿ?

ನೀವು ಫಾಸ್ಟಾಗ್ (FASTag) ಅನ್ನು ಯಾವ ಬ್ಯಾಂಕ್ ಗೆ ಲಿಂಕ್ ಮಾಡಿಕೊಂಡಿರುತ್ತೀರೋ ಅದೇ ಬ್ಯಾಂಕ್ ನ ವೆಬ್ಸೈಟ್ಗೆ ಹೋಗಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗ್ ಇನ್ ಆಗಿ. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಸಂಖ್ಯೆ ಕಳುಹಿಸಲಾಗುವ ಓಟಿಪಿಯನ್ನು ನಮೂದಿಸಬೇಕು.

ಈಗ ಮೈ ಪ್ರೊಫೈಲ್ ವಿಭಾಗಕ್ಕೆ ಹೋಗಿ ಕೆವೈಸಿ ಎನ್ನುವ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಬಳಿಕ ಕೆ ವೈ ಸಿ ನವೀಕರಣಕ್ಕೆ ಅಗತ್ಯ ಇರುವ ಮಾಹಿತಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿ. ಇಷ್ಟು ಮಾಡಿದ್ರೆ ನಿಮ್ಮ ಕೆವೈಸಿ ನವೀಕರಣಕ್ಕೆ ಅರ್ಜಿ ಸಲ್ಲಿಕೆ ಆಗುತ್ತದೆ.

FASTag ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಮೊದಲಿಗೆ https://fastag.ihmcl.com ವೆಬ್ಸೈಟ್ ಗೆ ತೆರಳಿ. ಮೊಬೈಲ್ ಸಂಖ್ಯೆನ ನಮೂದಿಸಿ ಅದಕ್ಕೆ ಓಟಿಪಿ ಬರುತ್ತದೆ ಅದನ್ನು ಕೂಡ ನಮೂದಿಸಿ ಲಾಗಿನ್ ಆಗಿ. ಬಳಿಕ ಮೈ ಪ್ರೊಫೈಲ್ ವಿಭಾಗಕ್ಕೆ ಹೋಗಿ ಅಲ್ಲಿ ಕಾಣಿಸುವ ಕೆ ವೈ ಸಿ ಸ್ಟೇಟಸ್ ಎನ್ನುವ ಆಯ್ಕೆ ಮಾಡಿ. ಹೀಗೆ ಮಾಡುವುದರಿಂದ ನೀವು ನಿಮ್ಮ ಕೆವೈಸಿ ನವೀಕರಣದ ಸ್ಥಿತಿ ತಿಳಿದುಕೊಳ್ಳಬಹುದು.

ಆಫ್ ಲೈನ್ ಮೂಲಕ ಕೆವೈಸಿ ಅಪ್ಡೇಟ್ ಮಾಡುವುದು ಹೇಗೆ?

ಇದಕ್ಕೆ ನೀವು ನಿಮ್ಮ ಬ್ಯಾಂಕ್ ಶಾಖೆಗೆ ಹೋಗಬೇಕು. ಅಲ್ಲಿ ಫಾಸ್ಟ್ ಟ್ಯಾಗ್ ಕೆವೈಸಿ (FASTag KYC) ನವೀಕರಣಕ್ಕಾಗಿ ಫಾರ್ಮ್ ಒಂದನ್ನು ಭರ್ತಿ ಮಾಡಬೇಕು. ಇದಕ್ಕೆ ಅಗತ್ಯ ಇರುವ ದಾಖಲೆಗಳನ್ನು ಸಲ್ಲಿಸಿ. ಈಗ ನಿಮ್ಮ ಕೆವೈಸಿ ವಿವರಗಳನ್ನು ಪರಿಶೀಲಿಸಿ ಫಾಸ್ಟ್ ಟ್ಯಾಗ್ ನವೀಕರಣಗೊಳಿಸಿಕೊಡಲಾಗುತ್ತದೆ.

advertisement

Leave A Reply

Your email address will not be published.