Karnataka Times
Trending Stories, Viral News, Gossips & Everything in Kannada

Court: ಹೆಂಡತಿಗೆ ಇನ್ಮೇಲೆ ಈ ಹೆಸರಿನಿಂದ ಕರೆಯುವಂತಿಲ್ಲ! ಬೆಳ್ಳಂಬೆಳಿಗ್ಗೆ ಕೋರ್ಟ್ ನೇರ ಆದೇಶ

advertisement

ನಾಲಿಗೆಗೆ ಮೂಳೆಯಿಲ್ಲ ಎಂದು ಬೇಕಾ ಬಿಟ್ಟಿ ಮಾತನಾಡಿದರೆ ಮಾತನಾಡಿದ ತಪ್ಪಿನ ಪರಿಣಾಮ ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗಬಹುದು. ಇಂತಹದ್ದೆ ಒಂದು ಘಟನೆ ನಡೆದಿದ್ದು ಪತ್ನಿಯನ್ನು ನಿಂಧಿಸಿದ್ದ ವ್ಯಕ್ತಿಗೆ ಭಾರಿ ಮಟ್ಟದಲ್ಲಿ ಶಿಕ್ಷೆ ನೀಡಲಾಗಿದ್ದ ಪ್ರಕರಣವೊಂದು ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಬಾಯಿಗೆ ಬಂದಂತೆ ಹೆಸರಿಟ್ಟು ಕರೆಯುವ ದಂಪತಿಗಳಿಗೆ ಈ ಒಂದು ಪ್ರಕರಣ ನಿಜಕ್ಕೂ ತಕ್ಕ ಪಾಠವೇ ಅಗಿರಲಿದೆ.

ಯಾವುದು ಈ ಪ್ರಕರಣ

1994ರಲ್ಲಿ ವಿವಾಹವಾಗಿದ್ದ ಜೋಡಿಯೊಂದು ಸಂಬಂಧದಲ್ಲಿ ಹೊಂದಾಣಿಕೆ ಬಾರದೇ 2008ರಲ್ಲಿ ವೈಯಕ್ತಿಕ ಕಾರಣಗಳಿಂದ ಪರಸ್ಪರ ದೂರ ಆಗಿ ಇದ್ದಾರೆ. ಪತ್ನಿ ಮುಂಬೈ ನಲ್ಲಿ ನೆಲೆಸಿದ್ದರೆ ಪತಿಯಾದವರು ಅಮೇರಿಕಾದಲ್ಲೆ ವಾಸ್ತವ್ಯ ಮಾಡಿದ್ದಾರೆ. ಈ ಮೂಲಕ ಅಮೇರಿಕಾದಿಂದಲೇ ವಿಚ್ಛೇದನ (Divorce) ಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೆ ಮುಂಬೈನಲ್ಲಿ ವಾಸ್ತವ್ಯ ಇದ್ದ ಪತ್ನಿ ಆತನ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾಳೆ.

Image Source: iStock

ಅಮೇರಿಕಾದಲ್ಲಿ ಅಸ್ತು

advertisement

ಈ ವಿಚಾರಣೆಗೆ ಸಂಬಂಧಿಸಿದಂತೆ ಅಮೇರಿಕಾ ನ್ಯಾಯಾಲಯವು 2018ರಲ್ಲಿ ಇಬ್ಬರು ವಿಚ್ಛೇದನ ಪಡೆಯಲು ಸಮ್ಮತಿ ನೀಡಿದೆ. ಆದರೆ ಆಕೆ ಈತನ ವಿರುದ್ಧ ಮುಂಬೈ ಕೋರ್ಟ್ (Mumbai Court)  ನಲ್ಲಿ ಕೇಸ್ ನೀಡಿದ್ದಾಳೆ ಅದರಲ್ಲಿ ತನ್ನ ಪತಿಯಿಂದ ತನಗೆ ಮಾನಸಿಕ ಹಿಂಸೆ ಆದ ಬಗ್ಗೆ ತಿಳಿಸಿದ್ದಾರೆ. ತಾವಿಬ್ಬರು ನೇಪಾಳಕ್ಕೆ ಹನಿಮೂನ್ ಹೋಗಿದ್ದಾಗ ಅಲ್ಲಿ ಆತ ತನ್ನನ್ನು ಸೆಕೆಂಡ್ ಹ್ಯಾಂಡ್ ಎಂದು ಗೇಲಿ ಮಾಡಿ ಅವಮಾನಿಸಿದ್ದಾರೆ ಎಂದು ಆತನ ವಿರುದ್ಧ ಮುಂಬೈ ಕೋರ್ಟ್ ಗೆ ಸಲ್ಲಿಕೆ ಮಾಡಿದ್ದಾಳೆ.

ಮೊದಲೇ ಮದುವೆಯಾಗಿತ್ತಾ?

ಪತಿ ತನಗೆ ಸೆಕೆಂಡ್ ಹ್ಯಾಂಡ್ ಎಂದು ಕರೆದದ್ದು ಇದು ಮಾನಸಿಕ ಹಿಂಸೆ ಆಗಿದೆ. ತನಗೆ ಈ ಹಿಂದೆ ಬೇರೊಬ್ಬವ್ಯಕ್ತಿಯ ಜೊತೆ ಮದುವೆ ನಿಶ್ಚಯವಾಗಿತ್ತು ಆದರೆ ಅದು ಮುರಿದು ಬಿದ್ದಿದೆ. ಈ ವಿಚಾರ ಮೊದಲೇ ತಿಳಿಸಿದ್ದರೂ ಆತ ಒಪ್ಪಿಯೇ ಮದುವೆ ಆಗಿದ್ದಾನೆ. ಈ ನಿಶ್ಚಿತಾರ್ಥ ಮುಂದಿಟ್ಟುಕೊಂಡೆ ನನಗೆ ಮಾನಸಿಕ ಹಿಂಸೆ ನೀಡಿ ಅನೇಕ ಸಲ ಚುಚ್ಚಿ ಮಾತಾಡಿದ್ದಾರೆ. ತುಂಬಾ ಅವಮಾನಿಸಿರುವುದಾಗಿ ಆಕೆ ಕೋರ್ಟ್ (Court)ನಲ್ಲಿ ತಿಳಿಸಿದ್ದಾಳೆ.

Image Source:: Ahmedebad Mirror

Court ತೀರ್ಪು:

ಈ ಬಗ್ಗೆ ವಿಚಾರಣೆ ಮಾಡಿ ಆತ ಮಾನಸಿಕ ಹಿಂಸೆ ನೀಡಿರುವುದು ಸಾಬೀತಾಗಿದೆ ಹಾಗಾಗಿ ಪತ್ನಿಗೆ ಮಾನಸಿಕ ಹಿಂಸೆ ನೀಡಿ ಸೆಕೆಂಡ್ ಹ್ಯಾಂಡ್ ಎಂದು ಕರೆದದ್ದಕ್ಕೆ ಶಿಕ್ಷೆ ವಿಧಿಸುವ ತೀರ್ಪೊಂದನ್ನು ನೀಡಲಾಗಿದೆ. ಈ ರೀತಿ ಮಾಡಿದ್ದ ಅವಮಾನ ಕೌಟುಂಬಿಕ ದೌರ್ಜನ್ಯ ಎಂದು ಪರಿಗಣಿಸಿದ್ದ ಕೋರ್ಟ್ (Court)  3ಕೋಟಿ ರೂಪಾಯಿ ದಂಡ ಹಾಗೂ ಮಾಸಿಕ 1.5 ಲಕ್ಷ ರೂಪಾಯಿ ಪಾವತಿ ಮಾಡಬೇಕೆಂದು ಆದೇಶ ನೀಡಿದೆ. ಈ ವಿಚಾರ ತಿಳಿದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಇರುವವರಿಗೆ ದೊಡ್ಡ ಶಾಕ್ ಆಗಿದ್ದು ತಪ್ಪಿ ಆಡಿದ್ದ ಮಾತಿಗೆ ಇಷ್ಟು ದೊಡ್ಡ ಮೊತ್ತದ ಹೊರೆ ಪತಿ ಮೇಲೆ ಬಿದ್ದಿದ್ದು, ಪತ್ನಿ ಅಥವಾ ಪತಿಯನ್ನು ಅವಾಚ್ಯವಾಗಿ ನಿಂದಿಸುವ ಮೊದಲು ಯೋಚಿಸಿ ಮಾತನಾಡುವ ಪ್ರಜ್ಞೆ ಇದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ ಎನ್ನಬಹುದು.

advertisement

Leave A Reply

Your email address will not be published.