Karnataka Times
Trending Stories, Viral News, Gossips & Everything in Kannada

Bank Locker: ಬ್ಯಾಂಕ್ ಲಾಕರ್ ನಲ್ಲಿ ಬಂಗಾರ, ಕ್ಯಾಶ್ ಹಾಗೂ ಇನ್ನಿತರ ವಸ್ತು ಇಟ್ಟವರಿಗೆ ಬೆಳ್ಳಂಬೆಳಿಗ್ಗೆ ಹೊಸ ರೂಲ್ಸ್! ಬ್ಯಾಂಕ್ ಆದೇಶ

advertisement

ಇಂದು ಬ್ಯಾಂಕ್ ಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಕೂಡ ವಹಿವಾಟುಗಳನ್ನು ನಡೆಸುತ್ತಾನೆ. ಅದೇ ರೀತಿ ಬ್ಯಾಂಕ್ ಎಫ್ ಡಿ, ಹಣ ಸೇವಿಂಗ್ ಮಾಡುವ ಸಮಯದಲ್ಲಿ ಯಾವ ಬ್ಯಾಂಕ್ ಸೇಫ್ ಎನ್ನುವುದನ್ನು ಸಹ ಗ್ರಾಹಕರು ತಿಳಿದುಕೊಳ್ಳಬೇಕಾಗುತ್ತದೆ. ಯಾಕಂದ್ರೆ ಹಣದ ಸುರಕ್ಷತೆಯ ಬಗೆಗೂ ನಂಬಿಕೆ ಇರಬೇಕಾಗುತ್ತದೆ. ಇನ್ನೂ ಜನರ ಹಿತ ದೃಷ್ಟಿಯಿಂದ ಅರ್ ಬಿ ಐ (RBI) ಕೂಡ ಬ್ಯಾಂಕ್ ಗಳಿಗೆ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಲೆ ಬಂದಿದೆ. ಅದೇ ರೀತಿ ಅರ್ ಬಿ ಐ ಬ್ಯಾಂಕ್ ನ ಹಣ ಕಾಸಿನ ವಹಿವಾಟಿನ ಬಗ್ಗೆಯು ಪರಿಶೀಲನೆ ಮಾಡುತ್ತಿದೆ. ಇದೀಗ ಬ್ಯಾಂಕ್ ಲಾಕರ್ (Bank Locker) ಬಗ್ಗೆಯು ಹೊಸದಾದ ನಿಯಮ ಜಾರಿಗೆ ತಂದಿದ್ದು ಏನಿದು ಹೊಸ ನಿಯಮ ಎಂಬ ಮಾಹಿತಿ ತಿಳಿಯಲು ಈ ಲೇಖನ‌ಓದಿ‌.

Bank Locker Rules:

ಮನೆಯಲ್ಲಿ ಒಡವೆ, ಆಸ್ತಿ ಪತ್ರ ಇತ್ಯಾದಿಗಳನ್ನು ಇಡಲು ಸುರಕ್ಷಿತ ಅಲ್ಲ ಎಂದು ಜನರು ಬ್ಯಾಂಕ್ ಲಾಕರ್ ಅನ್ನು ತೆಗೆದುಕೊಳ್ಳುವ ಮೂಲಕ ಅಲ್ಲಿ ಸುರಕ್ಷಿತ ವಾಗಿ ಇಡುತ್ತಾರೆ. ಈಗಾಗಲೇ RBI ಬ್ಯಾಂಕ್ ಲಾಕರ್‌ನಲ್ಲಿ ಇಡಲು ನಾಮಿನಿಗಳನ್ನು ದಾಖಲಿಸುವುದನ್ನು ಕೂಡ ಕಡ್ಡಾಯ ಮಾಡಿದೆ. ಇದೀಗ ಬ್ಯಾಂಕ್ ಲಾಕರ್ ಒಪ್ಪಂದಗಳ ನವೀಕರಣ ಮಾಡಲು ಆರ್​​ಬಿ‌ ಐ ದಿನಾಂಕ ನಿಗದಿ ಮಾಡಿದೆ. ಡಿಸೆಂಬರ್ ಒಳಗೆ ಎಲ್ಲಾ ಬ್ಯಾಂಕುಗಳು ಬ್ಯಾಂಕ್ ಲಾಕರ್ ಒಪ್ಪಂದಗಳನ್ನು ಕಡ್ಡಾಯವಾಗಿ ರಿನಿವಲ್ ಮಾಡಬೇಕೆಂದು ಅರ್ ಬಿ ಐ ತಿಳಿಸಿದೆ.

advertisement

Image Source: Times Of India

ಈ ನಿಯಮ ಇದೆ

  • ಅದೇ ರೀತಿ ಭಾರತೀಯ ಬ್ಯಾಂಕುಗಳ ಸಂಸ್ಥೆ ರೂಪಿಸುವ ಮಾದರಿ ಲಾಕರ್ ಒಪ್ಪಂದವನ್ನು ಬ್ಯಾಂಕುಗಳು ರೂಪಿಸಿಕೊಳ್ಳಬೇಕು ಎಂದು ಆರ್​ಬಿಐನ ನೋಟಿಫಿ ಕೇಶನ್​ನಲ್ಲಿ ಮಾಹಿತಿ ನೀಡಲಾಗಿದೆ.
  • ಇನ್ನು ಲಾಕರ್ ನಲ್ಲಿ ಇಡಲು ಹೊಸ ಲಾಕರ್ ಒಪ್ಪಂದವನ್ನು ಛಾಪಾ ಕಾಗದದ ಮೇಲೆ ನಮೂದು ಮಾಡಬೇಕಾಗುತ್ತದೆ ಎನ್ನುವ ನಿಯಮ ಇದೆ. ಇದಕ್ಕೆ ಗ್ರಾಹಕರಿಂದ ಶುಲ್ಕ ಪಡೆಯುವಂತಿಲ್ಲ. ಎನ್ನುವ ಸ್ಪಷ್ಟನೆ ಯನ್ನು ನೀಡಿದೆ.
  • ಬ್ಯಾಂಕ್​ನಲ್ಲಿ ಗ್ರಾಹಕರಿಗೆ ಲಾಕರ್ ಕೊಡುವಾಗ ನಿಶ್ಚಿತ ಠೇವಣಿ ಇಡುವಂತೆ ಕೇಳುವ ನಿಯಮವೂ ಇರಬಹುದು.
  • ಇನ್ನೂ ಮಳೆ, ಪ್ರವಾಹ, ಭೂಕಂಪ, ಭಯೋತ್ಪಾದನೆ ದಾಳಿ ಇತ್ಯಾದಿ ಸಂದರ್ಭದಲ್ಲಿ ಬ್ಯಾಂಕ್ ಲಾಕರ್ ಹಾಳಾದರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ ಎಂಬ ಸ್ಪಷ್ಟನೆ ಯನ್ನು ನೀಡಿದೆ.
  • ಬ್ಯಾಂಕ್​ನ ಅಸಮರ್ಪಕ ಭದ್ರತೆ ಯಿಂದ ಬ್ಯಾಂಕ್ ಲಾಕರ್ (Bank Locker) ಹಾಳಾದರೆ ಅದಕ್ಕೆ ಬ್ಯಾಂಕ್ ಹೊಣೆ, ಅಂದರೆ ಕಳ್ಳತನ, ದರೋಡೆ, ಸಿಬ್ಬಂದಿ ವಂಚನೆ ಇತ್ಯಾದಿ ಆದರೆ ಗ್ರಾಹಕರಿಗೆ ಬ್ಯಾಂಕ್ ಪರಿಹಾರ ನೀಡಬೇಕಾಗುತ್ತದೆ.
  • ಗ್ರಾಹಕರು ಲಾಕರ್‌ನಲ್ಲಿ ಇಡುವಂಥ ಎಲ್ಲ ವಸ್ತುಗಳ ಮಾಹಿತಿಯನ್ನೂ ಬ್ಯಾಂಕ್‌ಗೆ ಒಪ್ಪಿಸಬೇಕು
  • ಇನ್ನು ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ , ಪ್ರತಿ ಬಾರಿ ಲಾಕರ್ ಅನ್ನು ತೆರೆದಾಗ ಗ್ರಾಹಕರ ಮೊಬೈಲ್‌ ಗೆ ಸಂದೇಶ ಅಥವಾ ಮೇಲ್‌ಗೆ ಸಂದೇಶ ಹೋಗಲಿದೆ.

advertisement

Leave A Reply

Your email address will not be published.