Karnataka Times
Trending Stories, Viral News, Gossips & Everything in Kannada

Father Property: ತಂದೆ ಆಸ್ತಿ ಹೆಣ್ಣುಮಕ್ಕಳಿಗೆ ಯಾವ ಸಂದರ್ಭದಲ್ಲಿ ಸಿಗೊಲ್ಲ! ಮತ್ತೆ ನಿಯಮ ಬದಲು

advertisement

ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸರಿ ಸಮ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾನೂನಿನ ನಿಯಮಗಳು ಹೇಳಿದರೂ ಕೂಡ ಕೆಲವೊಂದು ಸಂದರ್ಭಗಳಲ್ಲಿ ಆ ಕಾನೂನಿಗೂ ನಿರ್ದಿಷ್ಟ ಚೌಕಟ್ಟು ಇದ್ದೆ ಇರುತ್ತದೆ. ಆಸ್ತಿ ಪಾಸ್ತಿ ಪಿತ್ರಾರ್ಜಿತವಾಗಿ ಬಂದಿದ್ದರೆ ಅದನ್ನು ಎಲ್ಲ ಮಕ್ಕಳಿಗೆ ಸಮನಾಗಿ ಹಂಚಬೇಕು ಎಂಬ ನಿಯಮ ಹೇಗೆ ಚಾಲ್ತಿಯಲ್ಲಿ ಇದೆಯೊ ಅದೇ ರೀತಿ ಹೆಣ್ಣು ಮಕ್ಕಳಿಗೆ ಕೆಲವೊಂದು ಕಾರಣಗಳು ಇದ್ದಾಗ ಆಸ್ತಿ (Property) ಪಾಲು ನೀಡಲು ಕೂಡ ಸಾಧ್ಯ ಆಗಲಾರದು. ಹಾಗಾದರೆ ಈ ಕಾರಣ ಯಾವುದು ಎಂಬ ಅನೇಕ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ.

ಈ ಪ್ರಕಾರಗಳಿವೆ:

ಆಸ್ತಿಯಲ್ಲಿ ಎರಡು ಪ್ರಕಾರಗಳಿದ್ದು ಅದರಲ್ಲಿ ಪಿತ್ರಾರ್ಜಿತ ಹಾಗೂ ಸ್ವಯಂ ಆಸ್ತಿ ಅಂದರೆ ಸ್ವಯಾರ್ಜಿತ ಆಸ್ತಿ. ಇದರಲ್ಲಿ ಹಕ್ಕು ಹಾಗೂ ಋಣಗಳು ಕೂಡ ಇರುತ್ತದೆ.ಹಾಗಾಗಿ ಈ ಎರಡು ಆಸ್ತಿಗೆ ಸಂಬಂಧ ಪಟ್ಟ ನಿಯಮಗಳು ಪರಿಸ್ಥಿತಿಗೆ ಅನುಸಾರವಾಗಿ ಬದಲಾಗಲಿದೆ. ಸ್ವಯಂ ಆಸ್ತಿ (Self Property) ಹಾಗೂ ಪಿತ್ರಾರ್ಜಿತ ಆಸ್ತಿ (Inherited Property) ಪಾಲು ಮಾಡುವ ಸಂದರ್ಭ ಬೇರೆ ಬೇರೆ ನಿಯಮ ಅನ್ವಯ ಆಗಲಿದೆ. ಹಾಗಾದರೆ ಆ ನಿಯಮ ಯಾವುದು ಯಾವಾಗ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗೊಲ್ಲ ಎಂಬ ಬಗ್ಗೆ ಈ ಮಾಹಿತಿ ತಿಳಿಯಲು ಪೂರ್ತಿ ಓದಿ.

ಈ ಕಾರಣ ಇದ್ದಾಗ ಆಸ್ತಿ ಸಿಗೊಲ್ಲ:

 

advertisement

 

  • ಯಾವುದೋ ಒತ್ತಡಕ್ಕೆ ಮಣಿದು ಆಸ್ತಿ ಹಂಚಿಕೆಯಲ್ಲಿ ಸ್ವ ನಿರ್ಧಾರದಿಂದ ಆಸ್ತಿ ಹಕ್ಕು ಬೇರೆ ಅವರಿಗೆ ನೀಡಿದರೆ ಆಗ ಕೂಡ ಹೆಣ್ಣು ಮಕ್ಕಳಿಗೆ ಆಸ್ತಿ ನೀಡಬೇಕು ಬೇಡ ಎಂಬುದು ನಿರ್ಧಾರ ಆಗಲಿದೆ.
  • ಸ್ವ ನಿರ್ಧಾರದಿಂದ ಒಮ್ಮೆ ಆಸ್ತಿ (Property) ಕೊಟ್ಟು ಬಳಿಕ ಪುನಃ ವಾಪಾಸ್ಸು ಕೇಳಿದರೆ ಆಗ ಆಸ್ತಿ ಸಿಗಲಾರದು.
  • ಆಸ್ತಿಯಲ್ಲಿ ಈಗಾಗಲೇ ನೋಂದಣಿ ಆಗಿ ಅಣ್ಣ ತಮ್ಮಂದಿರು ಪಡೆದಿದ್ದರೆ ಆಗ ಆ ಆಸ್ತಿಗೆ ಹೆಣ್ಣುಮಗಳಿಗೆ ಪಾಲು ಸಿಗದಿರುವ ಸಾಧ್ಯತೆ ಇದೆ.
  • 2005ರ ಮೊದಲು ವಿಲೇವಾರಿ ಆದ ಆಸ್ತಿಯನ್ನು ಈಗ ಕೇಳಲು ಸಧ್ಯವಿಲ್ಲ.
  • ಕಾಲಮಿತಿ ಕಾಯ್ದೆಯ ಅನ್ವಯ ಅಂದರೆ ತನ್ನ ತಂದೆ ಆಸ್ತಿ ಹಂಚಿಕೆ ಕಾಲಾವಧಿಯಲ್ಲಿ ಸುಮ್ಮನಿದ್ದು ಬಳಿಕ ಅನೇಕ ವರ್ಷದ ನಂತರ ಆಸ್ತಿ ಬೇಕು ಎಂದು ಬೇಡಿಕೆ ಇಟ್ಟರೆ ಆಗ ಕಾಲ ಮಿತಿ ಕಾಯ್ದೆ ಅನ್ವಯ ಆಗಲಿದೆ.
  • ಆಸ್ತಿ ಮೇಲೆ ಸಾಲ ಇದ್ದು ಅದನ್ನು ತೀರಿಸಲು ಒಪ್ಪದಿದ್ದರೂ ಕೂಡ ಹೆಣ್ಣು ಮಕ್ಕಳಿಗೆ ಆಸ್ತಿ ಸಿಗಲಾರದು. ಈ ಎಲ್ಲ ಅಂಶಗಳು ಪಿತ್ರಾರ್ಜಿತ ಆಸ್ತಿಯಲ್ಲಿ ಕಾಣಬಹುದು.

Freehold Property:

ಸ್ವಯಾರ್ಜಿತ ಆಸ್ತಿಯಲ್ಲಿ ತಂದೆಗೆ ವಿಲ್ ಮಾಡಿ ಆಸ್ತಿ (Father Property) ನೀಡುವ ಹಕ್ಕಿದ್ದು ಮೊದಲೇ ಮಕ್ಕಳಿಗೆ ಸಮಾನಾಗಿ ಆಸ್ತಿ ಹಂಚುವ ಹಕ್ಕಿದೆ. ಅದೇ ರೀತಿ ತಂದೆ ಮರಣ ಹೊಂದಿದ ಸಂದರ್ಭದಲ್ಲಿ ಮಗ, ಮಗಳು ಹೆಂಡತಿಗೆ ಆ ಆಸ್ತಿಯಲ್ಲಿ ಸಮಾನಾದ ಪಾಲನ್ನು ನೀಡಲಾಗುತ್ತದೆ. ಈ ಮೂಲಕ ಆಸ್ತಿ ಹಂಚಿಕೆ ಮಾಡುವುದು ಕಾಣಬಹುದು. ಒಟ್ಟಾರೆಯಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪರಿಸ್ಥಿತಿ ಅರ್ಥೈಸಿ ನಡೆಯುವುದು ಅವಶ್ಯಕ ಆಗಿದೆ.

advertisement

Leave A Reply

Your email address will not be published.