Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ Home ಡೆಲಿವರಿ ತಗೆದುಕೊಳ್ಳೋದು ಉತ್ತಮನಾ? ಇಲ್ಲಿದೆ ಟಿಪ್ಸ್

advertisement

ಕರ್ನಾಟಕ ರಾಜ್ಯದಲ್ಲಂತೂ ಈಗಂತೂ ಹಳೆ ವಾಹನ ಹೊಂದಿರುವವರು ಎಲ್ಲಿ ನೋಡಿದರು HSRP Number Plate ಬಗ್ಗೆನೇ ಮಾತನಾಡಿಕೊಳ್ಳುತ್ತಿದ್ದಾರೆ. HSRP ನಂಬರ್ ಪ್ಲೆಟ್ ಅನ್ನು ಕರ್ನಾಟಕದಲ್ಲಿ ಕಡ್ಡಾಯ ಮಾಡುಲಾಗುತ್ತಿದೆ. 2019ಕ್ಕಿಂತ ಮೊದಲು ಕರ್ನಾಟಕದಲ್ಲಿ ನೋಂದಾಯಿಸಲ್ಪಟ್ಟ ಅಷ್ಟು ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯ ಗೊಳಿಸಲಾಗಿದ್ದು  ಫೆಬ್ರವರಿ17ರೊಳಗೆ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಲು ಸೂಚಿಸಲಾಗಿತ್ತು. ಬಳಿಕ ಈ ಕಾಲಾವಧಿಯಲ್ಲಿ ವಿಸ್ತರಣೆ ನೀತಿ ಅನುಸರಿಸಲಾಗಿದೆ.

HSRP Number Plate ಸ್ವರೂಪ ಹೇಗಿದೆ?

ವಾಹನದ ಸಂಖ್ಯೆಯನ್ನು ಲಾರ್ಜರ್ ಎನ್ ಕೋಡ್ ಮಾಡಿದ್ದ ಅಲುಮೀನಿಯಂ ಡಿಜಿಟಲ್ ಪ್ಲೇಟ್ ನಲ್ಲಿ ಮಾಡಿದ್ದು ದೇಶದ ಬಾವುಟದಲ್ಲಿರುವ ಅಶೋಕ ಚಕ್ರ ಈ HSRP Number Plate ನಲ್ಲಿ ಇರಲಿದೆ. ಇದು ಕಡಿಮೆ ಲೈಟ್ ಇರುವಾಗಲು ನಮ್ಮ ನಂಬರ್ ಪ್ಲೇಟ್ ಉಳಿದ ಲೈಟ್ ಗಳಿಗೆ ರಿಫ್ಲೆಕ್ಟ್ ಆಗಿ ಕಾಣಲಿದೆ. ಹಾಗಾಗಿ ವ್ಯಕ್ತಿ ಯಾರು, ಯಾವ ಮಾಡೆಲ್ ವಾಹನ ಎಂಬ ಮಾಹಿತಿ ಅರಿಯುವ ಸಲುವಾಗಿ ಈ ಒಂದು HSRP ನಂಬರ್ ಪ್ಲೇಟ್ ಬಹಳ ಉಪಯುಕ್ತ ಆಗಿದೆ ಎನ್ನಬಹುದು. ಈ ನಂಬರ್ ಪ್ಲೇಟ್ ಮಾಡಿಸಲು ಕೆಲವೊಬ್ಬರು ಡೀಲರ್ಸ್ ಮೊರೆ ಹೋದರೆ ಇನ್ನು ಕೆಲವರು ನೇರವಾಗಿ ಆರ್ಡರ್ ಮಾಡುತ್ತಿದ್ದಾರೆ. ಹಾಗಾದರೆ ಯಾವುದು ಉತ್ತಮ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದು ಉತ್ತಮ:

 

Image Source: Times of India

 

advertisement

ಡೀಲರ್ಸ್ ಆಪ್ಶನ್ ಹಾಗೂ ಹೋಂ ಡೆಲಿವರಿ (Home Delivery) ಎಂಬ ಎರಡು ಆಯ್ಕೆ ಇರುವುದನ್ನು ನಾವು ಕಾಣಬಹುದು. ಡೀಲರ್ಸ್ ಎಂದು ಹೇಳಿದರೆ ನಿಮ್ಮ ಮನೆ ಹತ್ತಿರಕ್ಕೆ ಪಿಕ್ಮೆಂಟ್ ಸೆಂಟರ್ ಮೂಲಕ ನೋಂದಾಯಿಸಿ ಆ ಮೂಲಕ ನಂಬರ್ ಪ್ಲೇಟ್ ಬರಲಿದೆ. ಹೋಂ ಡೆಲಿವರಿ ಆದರೆ ಸ್ವಲ್ಪ ಅಧಿಕ ಹಣ ಕಟ್ಟಬೇಕಾಗುತ್ತದೆ. ಹಾಗಾದರೆ ನಿಮಗೆ ಹೋಂ ಡೆಲಿವರಿ ಎಂದು ಇದ್ದರೂ ಡೀಲರ್ಸ್ ಗಿಂತ ಇದಕ್ಕೆ ಅಧಿಕ ಮೊತ್ತ ಇರಲಿದೆ. ನೀವು ಮಾರ್ಚ್ 12ಕ್ಕೆ ಬುಕ್ ಮಾಡಿದರೆ ಮಾರ್ಚ್ 17ಕ್ಕೆ ನಿಮಗೆ ಸ್ಲಾಟ್ ಸಿಗಲಿದೆ. ಸಮಯ ಮಧ್ಯಹ್ನ 2.30 to 3 ಎಂದಿದ್ದರೆ ಅವರು ನಿಮಗೆ ನಂಬರ್ ಪ್ಲೇಟ್ ಅನ್ನು ಫಿಕ್ಸ್ ಮಾಡಿ ನೀಡಲಿದ್ದಾರೆ. ಹಾಗಾಗಿ ಅವರೆ ಬಂದು ನಿಮಗೆ ಫಿಕ್ಸ್ ಮಾಡಿ ನೀಡಲಿದ್ದಾರೆ.

ಡೀಲರ್ಸ್ ಮುಖಾಂತರ ಹೋದರೆ:

ಇಲ್ಲಿ ನೀವು ಯಾವ ತಾರೀಖಿನಂದು ಬರಬೇಕು ಎಂದು ಡೀಲರ್ಸ್ ಶಾಪ್ ನವರು ತಿಳಿಸಲಿದ್ದಾರೆ. ಆಗ ನೀವು ಆ ದಿನಾಂಕದಂದು ಭೇಟಿ ನೀಡಿ ಹಳೆ ನಂಬರ್ ಪ್ಲೇಟ್ ಬದಲಾಯಿಸಿ ಈ ಒಂದು ಹೊಸ HSRP Number Plate ಅನ್ನು ನೀವು ಹಾಕಿ ಕೊಳ್ಳಬಹುದು. ಆಗ ನೀವು ಯಾವುದೇ ಮೊತ್ತ ಪಾವತಿ ಮಾಡುವ ಅಗತ್ಯ ಇರಲಾರದು. ಅದೇ ರೀತಿ ಇನ್ನೂ ಮೂರು ತಿಂಗಳ ಒಳಗೆ ಈ HSRP ನಂಬರ್ ಪ್ಲೇಟ್ ಹಾಕಿಕೊಳ್ಳಬೇಕು.

ಯಾವುದು ಉತ್ತಮ:

 

Image Source: Orbiz Creativez

 

ಈ ಗೊಂದಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಡೀಲರ್ಸ್ ಮೂಲಕ ಹೋಗಬೇಕೆ ಇಲ್ಲ ನಾವೇ ನೇರವಾಗಿ ಹೋಂ ಡೆಲಿವರಿ ಮೂಲಕ ಪಡೆಯಬೇಕೆಂಬ ಗೊಂದಲ ಇರುತ್ತದೆ. ಡೀಲರ್ಸ್ ಮೂಲಕ ಹೋಗುವ ಕ್ರಮ ಹೋಂ ಡೆಲಿವರಿಗಿಂತ ಸ್ವಲ್ಪ ಅಧಿಕ ಸಮಯ ಹಿಡಿಯಲಿದೆ‌. ಅಷ್ಟು ಮಾತ್ರವಲ್ಲದೇ ಹೋಂ ಡೆಲಿವರಿಯಲ್ಲಿ ನೀವು ನೇರವಾಗಿ ಮನೆಗೆ ನಂಬರ್ ಪ್ಲೇಟ್ ಹಾಕುವವರು ಭೇಟಿ ನೀಡಲಿದ್ದಾರೆ ಹಾಗಾಗಿ ನಿಮಗೆ ಸೆಂಟರ್ ಗೆ ಹೋಗುವ ತಾಪತ್ರಯ ಕೂಡ ಇರದು.

advertisement

Leave A Reply

Your email address will not be published.