Karnataka Times
Trending Stories, Viral News, Gossips & Everything in Kannada

Toyota SUV: BMW ಗಿಂತ 50% ಕಡಿಮೆ ಬೆಲೆಗೆ ಬರಲಿದೆ ಟೊಯೋಟಾದ ಈ ಹೊಸ ಕಾರು! ಪ್ರಿ ಬುಕ್ ಮಾಡಲು ಮುಂದಾದ ಗ್ರಾಹಕರು.

advertisement

ನೀವು ಒಂದು ಒಳ್ಳೆಯ ಲುಕ್ ಹಾಗೂ ವೈಶಿಷ್ಟ್ಯತೆ ಹೊಂದಿರುವ ಕಾರನ್ನು ಖರೀದಿಸಬೇಕು ಆದರೆ ಅದು ಬಜೆಟ್ ಫ್ರೆಂಡ್ಲಿ ಆಗಿರಬೇಕು ಎಂದು ಬಯಸಿದರೆ ಅಂತ ಒಂದು ಸೂಪರ್ ಡೂಪರ್ ಕಾರು ಮಾರುಕಟ್ಟೆಗೆ ಬರಲಿದೆ. ಈಗಾಗಲೇ ಬುಕಿಂಗ್ ಕೂಡ ಆರಂಭವಾಗಿದೆ. ಅತ್ಯುತ್ತಮ ಗುಣಮಟ್ಟದ ಹಾಗೂ ವೈಶಿಷ್ಟ್ಯತೆ ಹೊಂದಿರುವ ಕಾರು ಇದಾಗಿದ್ದು, ಎಸ್ಯುವಿ ಕಾರುಗಳಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಅದುವೇ ಟೊಯೋಟಾದ ಎಸ್ ಯು ವಿ (Toyota SUV).

ಟೊಯೋಟಾ ಎಸ್ಯುವಿ (Toyota SUV) ರೂಪಾಂತರಗಳು!

ಟೊಯೋಟಾ ಅರ್ಬನ್ ಕ್ರೂಸರ್ ಹೈ ರೈಡರ್ (Toyota Urban Cruiser Hyryder) ಮತ್ತು ಫಾರ್ಚುನರ್ (Fortuner) ಹೆಚ್ಚು ಫೇಮಸ್ ಆಗಿರುವ ಕಾರುಗಳಲ್ಲಿ ಸೇರ್ಪಡೆಗೊಳ್ಳುತ್ತವೆ. ಆದರೆ ಈ ಎರಡು ಕಾರುಗಳ ಮಧ್ಯಂತರದಲ್ಲಿ ಟೊಯೋಟಾ ಮತ್ತೊಂದು ಎಸ್ಯುವಿ (Toyota SUV) ಬಿಡುಗಡೆ ಮಾಡಲು ಮುಂದಾಗಿದೆ. ಇನ್ನು ಕೇವಲ 18 ತಿಂಗಳುಗಳಲ್ಲಿ ಈ ಹೊಸ ಕಾರು ನಿಮ್ಮ ಕೈ ಸೇರಲಿದೆ.

Image Source: Alpha Squad

ಹೊಸ ಟೊಯೋಟಾ ಎಸ್ಯುವಿ (Toyota SUV)!

advertisement

ಸದ್ಯ ಟೊಯೋಟಾ ಕಂಪನಿ ತನ್ನ ಅರ್ಬನ್ ಕ್ರೂಜರ್ ಹೈರೈಡರ್ ಮತ್ತು ಫಾರ್ಚುನರ್ ಎರಡು ಬಗೆಯ ಎಸ್ಯುವಿ ಕಾರನ್ನು ನೀಡಿದೆ. ಟೊಯೋಟಾದ ಅರ್ಬನ್ ಕ್ರೂಜರ್ ಹೈ ರೈಡರ್, ಮಾರುತಿ ಸುಜುಕಿ ಗ್ರಾಂಡ್ ವಿಟಾರ (Maruti Suzuki Grand Vitara), ಬ್ರಿಜಾ ಎಸ್ ಯು ವಿ (Brezza SUV) ಗಳನ್ನು ಹೋಲುತ್ತದೆ. ಇದರ ಬೆಲೆ 11.14 ಲಕ್ಷ ರೂಪಾಯಿಗಳಿಂದ (ಎಕ್ಸ್ ಶೋರೂಮ್ ಬೆಲೆ) 20.19 ಲಕ್ಷ ರೂಪಾಯಿಗಳ ವರೆಗೂ ದಾಖಲಾಗಿದೆ. ಟೊಯೋಟಾ ಫಾರ್ಚುನರ್ ಎಕ್ಸ್ ಶೋರೂಮ್ ಬೆಲೆ 33.43 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದರ ಹೈ ಎಂಡ್ ಬೆಲೆ 51.44 ಲಕ್ಷ ರೂಪಾಯಿಗಳವರೆಗೆ ಇದೆ. ಅದೇ ರೀತಿ ಇನೋವಾ ಹೈ ಕ್ರಾಸ್ MPV (Innove Hycross MPV) ಎಕ್ಸ್ ಶೋರೂಮ್ ಬೆಲೆ 18.92 ಲಕ್ಷ ರೂಪಾಯಿಗಳಿಂದ ಆರಂಭವಾಗಿ 30.68 ಲಕ್ಷ ರೂಪಾಯಿಗಳ ವರೆಗೆ ಲಭ್ಯವಿದೆ.

ಮುಂಬರುವ ಹೊಸ ಟೊಯೋಟಾ ಎಸ್ಯುವಿ ಬೆಲೆ ಎಷ್ಟಿರಬಹುದು?

ಹೊಸ 3line SUV ಎಕ್ಸ್ ಶೋರೂಮ್ ಬೆಲೆ, 19 ಲಕ್ಷ ರೂಪಾಯಿಗಳಿಂದ ಆರಂಭವಾಗಿ 26 ಲಕ್ಷ ರೂಪಾಯಿಗಳವರೆಗೆ ಇರಬಹುದು ಎಂದು ಊಹಿಸಲಾಗಿದೆ. ಈ ಕಾರು ಟೊಯೋಟಾ ಫಾರ್ಚುನರ್ ಹಾಗೂ ಇನೋವಾ ಹೈ ಕ್ರಾಸ್ ಕಾರಿನ ನಡುವಿನ ರೂಪಾಂತರ ಎನಿಸಿಕೊಳ್ಳಲಿದೆ.

Image Source: Cartoq

ಹೊಸ ಟೊಯೋಟಾ SUV ಯಲ್ಲಿ ಏನಿದೆ?

ಟೊಯೋಟಾದ ಈಗಿರುವ ಸರಣಿ ಕಾರುಗಳಂತೆ ವೀಲ್ ಬೇಸ್ ಮೊದಲಾದ ವಿನ್ಯಾಸ ಹೊಂದಿರುವ ಸಾಧ್ಯತೆ ಇದೆ. ಆದರೆ ಈ ಕಾರಿನಲ್ಲಿ ಮೂರು ಸಾಲಿನ ಸೀಟ್ ಗಳನ್ನ ಸರಿ ಹೊಂದಿಸಲು ಉದ್ದವಾಗಿರುವ ಹಿಂಭಾಗದ ಓವರ್ ಹ್ಯಾಂಗ್ ಹೊಂದಿರುವ ಸಾಧ್ಯತೆ ಇದೆ. ಇದು 3 ಲೈನ್ ಎಸ್ ಯು ವಿ ಆಗಿದ್ದು, 4600 ಎಂಎಂ ಉದ್ದವಾಗಿರಬಹುದು. ಅಂದರೆ ಟೊಯೋಟಾ ಫಾರ್ಚುನರ್ ಗಿಂತಲೂ ಉದ್ದವಾಗಿದೆ ಎಂದು ಹೇಳಬಹುದು. ಟೊಯೋಟಾದ ಹೊಸ ಎಸ್ ಯು ವಿ (Toyota SUV) ಮಾರುಕಟ್ಟೆಗೆ ಬಂದರೆ, ಟಾಟಾ ಸಫಾರಿ (Tata Safari) ಮತ್ತು ಎಂಜಿ ಹೆಕ್ಟರ್ ಪ್ಲಸ್ (MG Hector Plus) ಕಾರುಗಳಿಗೆ ನೇರ ಪೈಪೋಟಿ ನೀಡಲಿದೆ. ಇನ್ನು 18 ತಿಂಗಳುಗಳಲ್ಲಿ ಮಾರುಕಟ್ಟೆಗೆ ಟೊಯೋಟಾದ ಹೊಸ ಎಸ್ ಯುವಿ ಲಗ್ಗೆ ಇಡಲಿದೆ.

advertisement

Leave A Reply

Your email address will not be published.