Karnataka Times
Trending Stories, Viral News, Gossips & Everything in Kannada

Anna Bhagya Yojana: ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸರ್ಕಾರದಿಂದ ಬಂತು ಗುಡ್ ನ್ಯೂಸ್.

advertisement

Anna Bhagya Yojana Money: ಕಾಂಗ್ರೆಸ್ ಸರ್ಕಾರ ನಿಮೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ತಾವು ಮ್ಯಾನಿಫೆಸ್ಟ್ ನಲ್ಲಿ ಹೇಳಿಕೊಂಡಿರುವ ಹಾಗೆ 5 ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿವೆ. ಹೇಳಿಕೊಂಡ ರೀತಿಯಲ್ಲಿ ತರದೇ ಇರಬಹುದು ಆದರೆ ಪ್ರತಿಯೊಂದು ಯೋಜನೆಗಳನ್ನು ಆದಷ್ಟು ಜನರಿಗೆ ತಲುಪುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ವಿಶೇಷವಾಗಿ ಅನ್ನ ಭಾಗ್ಯ ಯೋಜನೆ ಬಗ್ಗೆ ಇವತ್ತಿನ ಈ ಲೇಖನದಲ್ಲಿ ನಿಮಗೆ ಕೆಲವೊಂದು ಪ್ರಮುಖ ಅಪ್ಡೇಟ್ಗಳನ್ನು ನೀಡಲು ಹೊರಟಿದ್ದೇವೆ. ಅನ್ನಭಾಗ್ಯ ಯೋಜನೆ (Anna Bhagya Yojana) ಅಡಿಯಲ್ಲಿ ಸರ್ಕಾರ 5 ಕೆ.ಜಿ ಅಕ್ಕಿಯನ್ನು ನೀಡಿದರೆ ಉಳಿದ 5 ಕೆಜಿ ಅಕ್ಕಿಯನ್ನು ಅಕ್ಕಿಯ ರೂಪದಲ್ಲಿ ಅಲ್ಲದೆ ಬದಲಾಗಿ ಹಣದ ರೂಪದಲ್ಲಿ ರೇಷನ್ ಕಾರ್ಡ್ (Ration Card) ನಲ್ಲಿರುವಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ (DBT) ತಂತ್ರಜ್ಞಾನದ ಮೂಲಕ ಹಣವನ್ನು ರವಾನೆ ಮಾಡುತ್ತಿದೆ.

ಅನ್ನಭಾಗ್ಯ ಯೋಜನೆಯ ಬಗ್ಗೆ ಹೊರಬಂತು ಗುಡ್ ನ್ಯೂಸ್:

 

Image Source: United Liberal Foundation

 

ಪ್ರಾರಂಭದಲ್ಲಿ ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ (Anna Bhagya Yojana) ಯನ್ನು ಘೋಷಣೆ ಮಾಡಿರುವ ಸಂದರ್ಭದಲ್ಲಿ 10 ಕೆಜಿ ಅಕ್ಕಿಯನ್ನು ಕುಟುಂಬಕ್ಕೆ ನೀಡುವಂತಹ ವಾಗ್ದಾನವನ್ನು ಮಾಡಿತ್ತು. ಆದರೆ ಸರಿಯಾದ ಪ್ರಮಾಣದಲ್ಲಿ ಬೇಕಾಗಿರುವಂತಹ ಅಕ್ಕಿ ಸಿಗದೇ ಇರುವ ಕಾರಣದಿಂದಾಗಿ ಐದು ಕೆಜಿ ಅಕ್ಕಿ ಹಾಗೂ ಇನ್ನೂ ಐದು ಕೆಜಿ ಅಕ್ಕಿ ಬದಲಿಗೆ ಹಣವನ್ನು ರೇಷನ್ ಕಾರ್ಡ್ ಹೊಂದಿರುವಂತಹ ಕುಟುಂಬದ ಖಾತೆಗೆ ಲಿಂಕ್ ಆಗಿರುವಂತಹ ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ.

ಇನ್ನು ಹಣದ ವಿಚಾರಕ್ಕೆ ಬಂದ್ರೆ ಕೆಲವೊಂದು ರೇಷನ್ ಕಾರ್ಡ್ (Ration Card) ಹೊಂದಿರುವಂತಹ ಜನರಿಗೆ ಅವರಿಗೆ ಸಿಗಬೇಕಾಗಿರುವಂತಹ ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಬಾರದೆ ಇರುವಂತಹ ಸುದ್ದಿ ಕೂಡ ಕೇಳಿ ಬರುತ್ತಿದೆ. ಇದರಿಂದಾಗಿ ನೀವು ತಲೆಕೆಡಿಸಿಕೊಳ್ಳಬೇಕಾದ ಯಾವುದೇ ಅಗತ್ಯ ಇರುವುದಿಲ್ಲ ಹಣವನ್ನು ಸರ್ಕಾರ ಯಾರ ಖಾತೆಗೆ ಬಂದಿಲ್ವೋ ಅವುಗಳನ್ನ ಕಳಿಸೋ ಕೆಲಸವನ್ನು ಮಾಡುತ್ತಿದ್ದಾರೆ.

advertisement

ಇನ್ನು ಯಾರಿಗೆಲ್ಲ ಮಾರ್ಚ್ ತಿಂಗಳ ಹಣ (Anna Bhagya Money) ಬಂದಿಲ್ವೋ ಅವರಿಗೆ ಈ ಬಾರಿ ಸರ್ಕಾರ ಬೇಗ ಗುಡ್ ನ್ಯೂಸ್ ನೀಡುವ ಕೆಲಸ ಮಾಡಿದೆ. ಸಾಮಾನ್ಯ ಪ್ರಕ್ರಿಯೆ ದೃಷ್ಟಿಕೋನದಲ್ಲಿ ನೋಡೋದಾದರೆ ಈ ಹಣವನ್ನು ನಾವು ಏಪ್ರಿಲ್ ತಿಂಗಳ ಕೊನೆಯಲಿ ಪಡೆದುಕೊಳ್ಳಬಹುದಾದ ಸಾಧ್ಯತೆ ಇತ್ತು ಆದರೆ ಈಗ ಏಪ್ರಿಲ್ ಮೂರನೇ ತಾರೀಕಿನಂದೆ ಈ ಹಣವನ್ನು ಬಿಡುಗಡೆ ಮಾಡಲಾಗಿದೆ ಎನ್ನುವಂತಹ ಅಧಿಕೃತ ಸುದ್ದಿಗಳು ಕೇಳಿ ಬರುತ್ತಿವೆ.

ಯಾಕೆ ಇಷ್ಟು ಬೇಗ ಕೊಡ್ತಿರೋದು:

 

Image Source: The Statesman

 

ಸಾಮಾನ್ಯವಾಗಿ ಪ್ರತಿಯೊಬ್ಬರು ಕೂಡ ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣವನ್ನ ನಾವು ಏಪ್ರಿಲ್ 10-15 ಅಥವಾ ಅದಕ್ಕಿಂತಲೂ ತಡವಾಗಿ ಪಡೆದುಕೊಳ್ಳಬಹುದು ಎಂಬುದಾಗಿ ಯೋಚನೆ ಮಾಡುತ್ತಿದ್ದರು. ಆದರೆ ಈಗ ಸರ್ಕಾರಿ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಏಪ್ರಿಲ್ 3ನೇ ತಾರೀಕಿನಿಂದಲೇ ಅನ್ನಭಾಗ್ಯ ಯೋಜನೆಯ ಹಣವನ್ನು ನೇರವಾಗಿ ಬ್ಯಾಂಕ್ ಟ್ರಾನ್ಸ್ಫರ್ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆಯ ಎಲೆಕ್ಷನ್ (Lok Sabha Election 2024) ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇದರಿಂದಾಗಿ ಯಾವುದೇ ಕಾರಣಕ್ಕೂ ಫಲಾನುಭವಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಪ್ರಕ್ರಿಯೆಯನ್ನು ವೇಗವಾಗಿ ಹಾಗೂ ಅಂದುಕೊಂಡಿದ್ದ ಸಮಯಕ್ಕಿಂತ ಮುಂಚೇನೆ ಪ್ರಾರಂಭ ಮಾಡಿದೆ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.