Karnataka Times
Trending Stories, Viral News, Gossips & Everything in Kannada

Sunroof Cars: 9 ಲಕ್ಷದೊಳಗೆ ಸಿಗುತ್ತಿರುವ ಬೆಸ್ಟ್ ಸನ್ ರೂಪ್ ಇರುವ ಕಾರುಗಳು! ಮುಗಿಬಿದ್ದು ಖರೀದಿಸುತ್ತಿರುವ ಜನ

advertisement

Under 9  Lakh: ಇತ್ತೀಚಿನ ದಿನಮಾನಗಳಲ್ಲಿ ಕಾರ್ ಮಾಲಿಕರೆಲ್ಲರೂ ಸನ್ ರೂಫ್ ಕಾರುಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹಿಂದೆಲ್ಲಾ ಕೇವಲ ದುಬಾರಿ ಕಾರುಗಳಲ್ಲಿ ಮಾತ್ರ ಸನ್ರೂಫ್ (Sunroof) ವ್ಯವಸ್ಥೆಯನ್ನು ನೋಡಬಹುದಾಗಿತ್ತು. ಆದರೀಗ ಗ್ರಾಹಕರ ಕೈಗೆಟಕುವ ದರದಲ್ಲಿ ವೈಶಿಷ್ಟ್ಯವಾದ ಸನ್ರೂಫ್ ಕಾರುಗಳು ಲಭ್ಯವಿದೆ. ಹಾಗೆಯೇ ನೀವು ಕೂಡ ಕೇವಲ ಒಂಬತ್ತು ಲಕ್ಷ ರೂಪಾಯಿ ಬಜೆಟ್ ಒಳಗೆ ಪ್ರೀಮಿಯಂ ವೈಶಿಷ್ಟ್ಯತೆಗಳಿರುವಂತಹ ಸನ್ರೂಫ್(Sunroof) ಕಾರನ್ನು ಎದುರು ನೋಡುತ್ತಿದ್ದೀರಾ? ಹಾಗಾದ್ರೆ ನಾವು ತಿಳಿಸುವಂತಹ ಈ ಮೂರು ಸನ್ರೂಫ್ ಕಾರುಗಳು ಭಾರತೀಯರ ಬೆಸ್ಟ್ ಆಯ್ಕೆ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಹಾಗಾದ್ರೆ ಆ ಕಾರುಗಳು ಯಾವ್ಯಾವು? ಅದರ ಎಕ್ಸ್ ಶೋರೂಮ್ ಬೆಲೆ ಏನು? ಮೈಲೇಜ್ ಸಾಮರ್ಥ್ಯ ಎಷ್ಟಿದೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳಿ.

1. ಟಾಟಾ ಅಲ್ಟ್ರೋಜ್(Tata Altroz)

ಟಾಟಾ ಆಲ್ಟ್ರೋಜ್ ನ‌ XM(S) ರೂಪಾಂತರದಲ್ಲಿ(XM Variant) ಸನ್ರೂಫ್ ಸೌಲಭ್ಯ ಲಭ್ಯವಿದ್ದು, ಇದು ಎಕ್ಸ್ ಶೋರೂಮ್ನಲ್ಲಿ ಕೇವಲ 7.45 ಲಕ್ಷದಿಂದ ಪ್ರಾರಂಭವಾಗುತ್ತದೆ. ಶಕ್ತಿಯುತ ಮೈಲೇಜ್ ಸಾಮರ್ಥ್ಯವನ್ನು ಹೊಂದಿರುವ ಟಾಟಾ ಅಲ್ಟ್ರೋಸ್ ಪ್ರತಿ ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 19 km ವ್ಯಾಪ್ತಿಯನ್ನು ತಲುಪುವುದು.

What is the cheapest car that has sunroof?Which car has best sunroof?
Which car has sunroof under 10 lakh in India?
Which 7 seater car has sunroof?
Image Credit: Cardekho

advertisement

2. ಕಿಯಾ ಸೋನೆಟ್(Kia Sonet)

ಕಿಯಾ ಸೋನೆಟ್ ನ HTE(O) ರೂಪಾಂತರದಲ್ಲಿ ಸನ್ ರೂಫ್ ಸೌಲಭ್ಯವಿದ್ದು, ಪ್ರೀಮಿಯಂ ಫೀಚರ್ಸ್ ಗಳನ್ನು ಒಳಗೊಂಡಿರುವ ಈ ಕಾರ್ 18 km ಮೈಲೇಜ್ ನೀಡುತ್ತದೆ. ನಮ್ಮ ಭಾರತದ ಎಕ್ಸ್ ಶೋರೂಮ್ ನಲ್ಲಿ ₹8.19 ಲಕ್ಷ ರೂಗಳಿಂದ ಪ್ರಾರಂಭವಾಗುವ ಕಿಯಾ ಸೋನೆಟ್(Kia Sonnet)ನ ಇತರೆ ವಿಭಿನ್ನ ರೂಪಾಂತರಗಳಿಗೆ ಪ್ರತ್ಯೇಕ ಬೆಲೆಯನ್ನು ನಿಗದಿಪಡಿಸಿದ್ದಾರೆ.

3. ಹುಂಡೈ ಎಕ್ಸೆಟರ್(Hyundai exeter)

ಹುಂಡೈ ಬಿಡುಗಡೆ ಮಾಡಿರುವ ನೂತನ ಮಾದರಿಯ ಸನ್ ರೂಫ್ ಕಾರ್ ಇದಾಗಿದ್ದು SX 1.2 ಪೆಟ್ರೋಲ್ ರೂಪಾಂತರದ(SX 1.2 petrol variant) ಹುಂಡೈ ಎಕ್ಸೆಟರ್ ಭಾರತದ ಎಕ್ಸ್ ಶೋರೂಮ್(ex showroom) ನಲ್ಲಿ 8.23 ಲಕ್ಷದಿಂದ ಪ್ರಾರಂಭವಾಗುತ್ತಿದೆ. ಇನ್ನು ಅದ್ಭುತ ಮೈಲೇಜ್ ಸಾಮರ್ಥ್ಯವನ್ನು ಹೊಂದಿರುವ ಈ ರೂಪಾಂತರವು 19 kmpl ಮೈಲೇಜ್ ನೀಡುತ್ತದೆ.

What is the cheapest car that has sunroof?Which car has best sunroof?
Which car has sunroof under 10 lakh in India?
Which 7 seater car has sunroof?
Image Credit: Cardekho

advertisement

Leave A Reply

Your email address will not be published.