Karnataka Times
Trending Stories, Viral News, Gossips & Everything in Kannada

Anna Bhagya Money: ಅನ್ನ ಭಾಗ್ಯ ಹಣ ಚೆಕ್ ಮಾಡಿಕೊಳ್ಳಲು‌ ಹೊಸ ‌ಡೈರೆಕ್ಟ್ ಲಿಂಕ್! ಕೂಡಲೇ ಚೆಕ್ ಮಾಡಿ

advertisement

ಬಡವರ್ಗದ ಜನತೆಗೆ ಮೂಲಭೂತ ಆಹಾರ ಪದಾರ್ಥಗಳು ಸಿಗುವಂತಾಗಬೇಕು ಎಂದು ಆಹಾರ ಇಲಾಖೆಯ ಮೂಲಕ ಬಡ ವರ್ಗದ ಜನತೆಗೆ ಆಹಾರ ಧಾನ್ಯ ಗಳ ವಿತರಣೆ ಮಾಡಲಾಗುತ್ತದೆ. ಅಂತ್ಯೋದಯ, ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಫಲಾನುಭವಿಗಳಿಗೆ ಉಚಿತ ಧಾನ್ಯಗಳನ್ನು ವಿತರಣೆ ಮಾಡುವ ಮೂಲಕ ಸೌಲಭ್ಯ ಒದಗಿಸುತ್ತಿದೆ. ಅದೇ ರೀತಿ ಅನ್ನಭಾಗ್ಯ ಯೋಜನೆ (Anna Bhagya Yojana) ಯ ಮೂಲಕ ಹೆಚ್ಚುವರಿ ಅಕ್ಕಿಯ ಬದಲಾಗಿ ಹಣವನ್ನು ಕೂಡ ಖಾತೆಗೆ ಜಮೆ ಮಾಡುತ್ತಿದೆ.

ಈಗಾಗಲೇ ಅನ್ನ ಭಾಗ್ಯ ಯೋಜನೆ (Anna Bhagya Money) ಯ ಸೌಲಭ್ಯ ವನ್ನು ಅನೇಕ ಜನರು ಪಡೆದುಕೊಳ್ಳುತ್ತಿದ್ದಾರೆ. ಈ ಯೋಜನೆಯಡಿ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ವನ್ನು ಕುಟುಂಬದ ಯಜಮಾನನ ಖಾತೆಗೆ ಜಮೆ ಮಾಡುತ್ತಿದ್ದು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಹಣ ನೀಡಲಾಗುತ್ತದೆ.

ಮಾರ್ಚ್ ತಿಂಗಳ ಅನ್ನಭಾಗ್ಯ ಹಣ?

 

Image Source: Kalki Online

 

ಈಗಾಗಲೇ ಅನ್ನಭಾಗ್ಯ ಯೋಜನೆ (Anna Bhagya Yojana) ಗೆ ಅರ್ಜಿ ಸಲ್ಲಿಕೆ ಮಾಡಿದ್ದ ಫಲಾನುಭವಿಗಳಿಗೆ ಜನವರಿ ತಿಂಗಳ ವರೆಗೆ ಹಣ ಜಮೆಯಾಗಿದ್ದು ಕೆಲವು ಜನರಿಗೆ ಪೆಬ್ರವರಿ ಮತ್ತು ಮಾರ್ಚ್ ತಿಂಗಳ ಮೊತ್ತ ಇನ್ನಷ್ಟೆ ಜಮೆಯಾಗಬೇಕಿದ್ದು ಈ ತಿಂಗಳ ಒಳಗೆ ಎರಡು ಕಂತಿನ ಹಣ ಒಟ್ಟಿಗೆ ಜಮೆಯಾಗಲಿದೆ. ಈಗಾಗಲೇ ಕೆಲವಷ್ಟೆ ಫಲಾನುಭವಿಗಳಿಗೆ ಈಹಣ ಜಮೆಯಾಗಿದ್ದು ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ.

advertisement

ಹೀಗೆ ಚೆಕ್ ಮಾಡಿ ಹಣ ಬಂದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ

ಈ ಯೋಜನೆಯ ಹಣ ಜಮೆಯಾಗಿದೆಯೇ ಎಂದು ತಿಳಿದುಕೊಳ್ಳಲು ಮೊದಲು ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್ https://ahara.kar.nic.in/ ಗೆ ಭೇಟಿ ನೀಡಿ, ನಂತರ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ, ನಂತರದಲ್ಲಿ Status of DBT ಆಯ್ಕೆ ಮೇಲೆ ಕ್ಲಿಕ್ ಮಾಡಿ, ವರ್ಷ, ತಿಂಗಳನ್ನು ಆಯ್ದುಕೊಳ್ಳಿ. ನಂತರದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು‌ ನಮೂದಿಸಿ, Go ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ್ರೆ ಹಣ ಜಮೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ.

ಹೊಸ ರೇಷನ್ ಕಾರ್ಡ್ ಗೂ ಅರ್ಜಿ ಹಾಕಬಹುದು:

 

Image Source: News Next Live

 

ಇದೀಗ ಹೊಸದಾಗಿ ರೇಷನ್ ಕಾರ್ಡ್ (Ration Card) ಅರ್ಜಿ ಸಲ್ಲಿಕೆ ಮಾಡಲು ಕಾಯುತ್ತಿದ್ದ ಫಲಾನುಭವಿಗಳಿಗೂ ಗುಡ್ ನ್ಯೂಸ್ ಸಿಕ್ಕಿದ್ದು ಆಹಾರ ಇಲಾಖೆ ಸಚಿವ ಕೆಎಚ್ ಮುನಿಯಪ್ಪ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದ ಕಾರ್ಡ್ ಗಳನ್ನು ಪರಿಶೀಲನೆ ಮಾಡಿ ಮಾರ್ಚ್ 31ರೊಳಗೆ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಣೆ ಮಾಡಲಾಗುವುದು ಅದರ ಜೊತೆ ಎಪ್ರಿಲ್ ಒಂದರ‌ ನಂತರ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಬಹುದು ಎಂಬ ಮಾಹಿತಿ ಯನ್ನು ನೀಡಿದ್ದಾರೆ.

advertisement

Leave A Reply

Your email address will not be published.