Karnataka Times
Trending Stories, Viral News, Gossips & Everything in Kannada

5G Network: ಶೀಘ್ರದಲ್ಲೇ ಜಿಯೋ ಗೆ ಟಾಂಗ್ ಕೊಡಲಿದೆಯೇ ಇನ್ನೊಂದು 5G ಕಂಪನಿ! ಇಲ್ಲಿದೆ ಟ್ವಿಸ್ಟ್

advertisement

ಗೌತಮ್ ಅದಾನಿ 5G ಇಂಟರ್ನೆಟ್ ಸೇವೆಯನ್ನು ಪ್ರಿವೇಶಿಸಬಹುದು ಎಂಬ ಹೊಸ ಸುದ್ದಿ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸದ್ದನ್ನು ಸೃಷ್ಟಿಸಿದೆ. ಇಷ್ಟು ದಿನ ಭಾರತದಲ್ಲಿ ಜಿಯೋ ಸಿಮ್ ನೆಟ್ವರ್ಕ್ ಬಹಳಷ್ಟು ಜನಪ್ರಿಯವಾಗಿದೆ ಮತ್ತು ಸಾಮಾನ್ಯವಾಗಿ ಶೇಕಡ 60-75 ರಷ್ಟು ಜನ ಜಿಯೋ ಸಿಮ್ ನೆಟ್ವರ್ಕ್ ಅನ್ನು ಬಳಸುತ್ತಾ ಇದ್ದಾರೆ. ಇನ್ನು ಇತ್ತೀಚಿಗೆ ತಾನೇ Jio ಸಿಮ್ ನೆಟ್ವರ್ಕ್ ಬಿಡುಗಡೆ ಮಾಡಿದ 5G ನೆಟ್ವರ್ಕ್ (5G Network) ಕೂಡ ಬಹಳಷ್ಟು ಜನಪ್ರಿಯತೆಯನ್ನು ಗಳಿಸಿತು.

ಇನ್ನು ಇದಕ್ಕೆ ಪೈಪೋಟಿ ಎಂಬಂತೆ ಇದೀಗ ಗೌತಮ್ ಅದಾನಿ (Gautam Adani) ಅವರು ಹೊಸ 5G Network ಅನ್ನು ಪ್ರಾರಂಭಿಸಲು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಇಷ್ಟು ದಿನ ಅಂಬಾನಿ ಅವರ Jio Sim ನೆಟ್ವರ್ಕ್ ಪೈಪೋಟಿ ಇಲ್ಲದೆ ಇತ್ತು. ಮತ್ತು ಭಾರತದಲ್ಲಿ ಇನ್ನೇನು ಸ್ಪೆಕ್ಟ್ರಮ್ (Spectrum) ಹರಾಜು ಮೇ 20ರಿಂದ ಪ್ರಾರಂಭವಾಗಲಿದೆ. ಮಾರ್ಚ್ 8ರಂದು ಇದರ ಕುರಿತಾಗಿ DOT (Department of Telecommunication) ನೋಟಿಸ್ ಸಹ ನೀಡಿದೆ.

 

Image Source: GQ India

 

advertisement

ಇನ್ನು ಇತ್ತೀಚಿನ ದಿವಸದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಅದಾನಿ ಗ್ರೂಪ್ಸ್ ನ ಅಧ್ಯಕ್ಷರಾದ ಗೌತಮ್ ಅದಾನಿ (Gautam Adani) ಕೂಡ ಸ್ಪೆಕ್ಟ್ರಂ (Spectrum) ಹರಾಜಿನಲ್ಲಿ ಭಾಗವಹಿಸುವ ಬಗ್ಗೆ ಸಭೆಯಲ್ಲಿ ಸುಳಿವು ನೀಡಿದ್ದಾರೆ. ಇನ್ನು ಈ ಸುಳಿವಿನ ಆಧಾರದ ಮೇಲೆ ಗೌತಮ್ ಅದಾನಿಯವರು 5G ನೆಟ್ವರ್ಕ್ ಅನ್ನು ವಶಪಡಿಸಿಕೊಳ್ಳಬಹುದೆಂದು ಹಲವರ ಅಭಿಪ್ರಾಯ. ಅಥವಾ ಅವರು ಕೂಡ ಮಾರುಕಟ್ಟೆಯಲ್ಲಿ ಹೊಸ 5G ನೆಟ್ವರ್ಕ್ ಅನ್ನು ಪ್ರಾರಂಭಿಸಬಹುದು ಎಂದು ತಿಳಿಸಲಾಗಿದೆ.

Image Source: India.Com

 

ಗೌತಮ್ ಅದಾನಿ ಅವರು ತಮ್ಮ ಉದ್ಯೋಗಿಗಳಿಗೆ ತಮ್ಮ ವ್ಯವಹಾರವನ್ನು ಡೇಟಾ ಸೆಂಟರ್‌ಗೆ ವಿಸ್ತರಿಸಲು ಪರಿಗಣಿಸುತ್ತಿರುವುದಾಗಿ ಅಥವಾ ಆಲೋಚಿಸುತ್ತಿರುವುದಾಗಿ ಇತ್ತೀಚಿಗೆ ನಡೆದಂತಹ ಕಾರ್ಯಕ್ರಮ ಸಭೆಯೊಂದರಲ್ಲಿ ತಿಳಿಸಿದ್ದರು. ಇನ್ನು ಇದರ ಜೊತೆಗೆ ಹೆಚ್ಚುವರಿಯಾಗಿ, ಅವರು AI-ML ಮತ್ತು ಇಂಡಸ್ಟ್ರಿಯಲ್ ಕ್ಲೌಡ್ (Industrial Cloud) ಸಾಮರ್ಥ್ಯಗಳ ಮೇಲೆ ಸಹ ಕೆಲಸ ಮಾಡುತ್ತಾರೆ.

ಅದರಿಂದ ಅವರು ವೇಗವಾಗಿ ಇಂಟರ್ನೆಟ್ ಮಾರುಕಟ್ಟೆಗೆ ಪ್ರವೇಶಿಸಲು ಯೋಚಿಸುತ್ತಿದ್ದಾರೆ ಎಂಬ ಸುದ್ದಿ ಹೆಚ್ಚು ಗಮನ ಸೆಳೆದಿದೆ . ಈ ರೀತಿಯಾದ ಚರ್ಚೆಗೆ ಪ್ರಮುಖ ಕಾರಣ ಎಂದರೆ  ಕೆಲ ಸಮಯದ ಹಿಂದೆ ಕ್ವಾಲ್‌ಕಾಮ್‌ನ (Qualcomm) ಸಿಇಒ CEO ಅವರನ್ನು ಭೇಟಿಯಾಗಿದ್ದರು, ಆದಕಾರಣ ಟೆಲಿಕಾಂ ಮಾರುಕಟ್ಟೆಯಲ್ಲಿ ಅದಾನಿ ಅವರ ಪ್ರವೇಶದ ಚರ್ಚೆಗಳು ಬಹಳಷ್ಟು ತೀವ್ರಗೊಂಡಿವೆ.

advertisement

Leave A Reply

Your email address will not be published.