Karnataka Times
Trending Stories, Viral News, Gossips & Everything in Kannada

Bank Transactions: 50 ಸಾವಿರ ರೂ ವರೆಗೆ ಬ್ಯಾಂಕ್ ವ್ಯವಹಾರ ಮಾಡುವವರಿಗೆ ಹೊಸ ರೂಲ್ಸ್!

advertisement

ಲೋಕಸಭೆ ಚುನಾವಣೆ ಇನ್ನೇನು ಕೆಲವೇ ದಿನದಲ್ಲಿ ನಡೆಯಲಿದ್ದು ಅದರ ಪೂರ್ವ ಸಿದ್ದತೆ ಕೂಡ ನಡೆಯುತಲಿದೆ. ಚುನಾವಣೆಯು ಹೆಚ್ಚು ಮುಕ್ತವಾಗಿ ಮತ್ತು ಭ್ರಷ್ಟಾಚಾರ ರಹಿತವಾಗಿ ಈಡೇರಬೇಕು ಎಂಬ ಉದ್ದೇಶಕ್ಕೆ ನೀತಿ ಸಂಹಿತೆ ಜಾರಿಯಾಗಿದ್ದು ಅನೇಕ ನೀತಿ ನಿರ್ಬಂಧಗಳನ್ನು ಈಗಾಗಲೇ ವಿಧಿಸಿರುವುದನ್ನು ನಾವು ಕಾಣಬಹುದು. ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ ಸಭೆ ಸಮಾರಂಭ, ಪಾರ್ಟಿ ಸೇರುವುದು ಎಲ್ಲದಕ್ಕೂ ಮಿತಿ ಸಹ ಇದೆ. ಈ ನಡುವೆ ನಗದು ಮೊತ್ತ ಪಡೆಯುವ ವಿಚಾರಕ್ಕೂ ಕೆಲ ನಿರ್ಬಂಧ ವಿಧಿಸಲಾಗಿದೆ.

ಚುನಾವಣಾ ಆಯೋಗದ ಸೂಚನೆ:

ಚುನಾವಣೆ ಇರುವ ಹಿನ್ನೆಲೆ ಮತದಾರರ ಓಲೈಕೆ ಮಾಡಲಾಗುತ್ತದೆ ಹಾಗಾಗಿ ಈ ಬಗ್ಗೆ ಗಮನ ಹರಿಸುವುದು ಅತ್ಯಗತ್ಯವಾಗಿದೆ. ಎಲ್ಲ ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳು (Govt and Private Banks) ಹಾಗೂ ಫೈನಾನ್ಶಿಯಲ್ ಮೂಲಗಳಿಗೂ ಚುನಾವಣೆ ಆಯೋಗ ಅಧಿಕ ಮೊತ್ತ ಹಿಂಪಡೆಯುವಿಕೆ ಹಾಗೂ ಸಂಗ್ರಹದ ಬಗ್ಗೆ ಆಯೋಗಕ್ಕೆ ವಿಚಾರ ತಿಳಿಸಬೇಕು ಎಂದು ಸೂಚನೆ ನೀಡಿದೆ. ಹೀಗಾಗಿ ನೀವು ಕೂಡ ಹಣ ಕಾಸಿಗೆ ಯವುದೇ ವ್ಯವಹಾರದಲ್ಲಿ ಪಾಲ್ಗೊಳ್ಳುವ ಮೊದಲು ಈ ವಿಚಾರ ಪೂರ್ತಿ ಓದಲೇ ಬೇಕು.

ಪ್ರಮುಖ ನಿರ್ದೇಶನ:

ಮುಕ್ತ ಮತ್ತು ನ್ಯಾಯ ಸಮ್ಮತ ವ್ಯವಸ್ಥೆ ಏರ್ಪಾಡು ಆಗುವ ನೆಲೆಯಲ್ಲಿ ಚುನಾವಣೆ ಆಯೋಗ ಹಣಕಾಸು ಸಂಸ್ಥೆಗಳಿಗೆ ಪ್ರಮುಖ ನಿರ್ದೇಶನ ನೀಡಿದ್ದು 50,000ಮಿಕ್ಕ ನಗದು ವ್ಯವಹಾರದ (Bank Transactions) ಮೇಲೆ ಕಣ್ಣಿಡುವಂತೆ ಸೂಚಿಸಲಾಗಿದೆ. ಬ್ಯಾಂಕ್ ಅಥವಾ ಇತರ ಹಣಕಾಸು ಸಂಸ್ಥೆಯಲ್ಲಿ ಚೆಕ್ ಡೆಪಾಸಿಟ್, ಉಳಿತಾಯ ಖಾತೆ (Saving Account) ಯಲ್ಲಿ ಹಣ ಸಂಗ್ರಹ, ದೊಡ್ಡ ಮೊತ್ತದ FD ಮಾಡುವುದು ಹಾಗೂ ಜಂಟಿ ಖಾತೆಯಲ್ಲಿ ಹಣ ಸಂಗ್ರಹ ಮಾಡುವ ಬಗ್ಗೆ ನಿಗಾ ಇಡುವಂತೆ ವಿಶೇಷ ಸೂಚನೆ ನೀಡಿದೆ. ಈ ಕುರಿತಾಗಿ ದಿನನಿತ್ಯ ವರದಿ ಸಲ್ಲಿಕೆ ಆಗಬೇಕು ಎಂದು ಚುನಾವಣೆ ಆಯೋಗ ಈ ಬಗ್ಗೆ ನಿರ್ದೇಶನ ನೀಡಿದೆ.

advertisement

ಹೊಸ ಮಾರ್ಗ ಸೂಚಿ:

 

Image Source: India.com

 

ದೇಶಾದ್ಯಂತ ಲೋಕಸಭೆ ಚುನಾವಣೆ ಇರುವ ಹಿನ್ನೆಲೆಯಲ್ಲಿ ಎಲ್ಲ ಹಣಕಾಸು ಸಂಸ್ಥೆಗಳು ಹಾಗೂ ಇತರರಿಗೆ ಹೊಸ ಮಾರ್ಗ ಸೂಚಿ ನೀಡಲಾಗಿದ್ದು ಎಲ್ಲ ಹಂತದಲ್ಲಿಯೂ ಚುನಾವಣೆ ನೀತಿ ಸಂಹಿತೆ ಅಂಶವನ್ನು ಎತ್ತಿ ಹಿಡಿಯಲಾಗುತ್ತಿದೆ. ಸಭೆ ಸಮಾರಂಭ, ಸೇರುವುದು ಎಲ್ಲ ವಿಚಾರಕ್ಕೂ ಕೂಡ ನಿರ್ದಿಷ್ಟವಾದ ನಿರ್ಬಂಧ ವಿಧಿಸಲಾಗಿದ್ದನ್ನು ಕಾಣಬಹುದು.

ಯಾರಿಗೆ ಅನ್ವಯ:

ಚುನಾವಣೆ ನೀತಿ ಸಂಹಿತೆ ಇರುವ ಹಿನ್ನೆಲೆಯಲ್ಲಿ RBI ನ ಅಧೀನದಲ್ಲಿ ಇರುವ ಎಲ್ಲ ಖಾಸಗಿ , ಸರಕಾರಿ ಮತ್ತು ಸಹಕಾರಿ ಹಣಕಾಸು ಸಂಸ್ಥೆಗಳಿಗೆ ತಮ್ಮ ಗ್ರಾಹಕರ ವ್ಯವಹಾರದ ಮೇಲೆ ನಿಗ ಇಡುವುದಕ್ಕೆ ಅನ್ವಯವಾಗಲಿದೆ. ಅಷ್ಟು ಮಾತ್ರವಲ್ಲದೆ ವ್ಯಾಪಾರ ವ್ಯವಹಾರದಲ್ಲಿ ದೀಢೀರ್ ಏರಿಕೆ ಅಧಿಕ ಲಾಭ ಕಂಡು ಬಂದದ್ದು ತಿಳಿದುಬಂದರೂ ವರದಿ ಮಾಡಬೇಕು. ಅದರ ಜೊತೆಗೆ ಎಲ್ಲ ಆಭರಣ ಮಳಿಗೆಯಲ್ಲಿ ವ್ಯವಹಾರದ ಬಗ್ಗೆ ಕೂಡ ದೈನಿಕ ಲೆಕ್ಕಾಚಾರ ನೀಡಬೇಕು ಎಂದು ತಿಳಿಸಲಾಗಿದೆ.

advertisement

Leave A Reply

Your email address will not be published.