Karnataka Times
Trending Stories, Viral News, Gossips & Everything in Kannada

Gruha Lakshmi: ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿಯ 6 ಮತ್ತು 7ನೇ ಕಂತಿನ ಹಣ ಜಮೆ ಆಗಲ್ಲ!

advertisement

ಇಂದು ಮಹಿಳೆಯರು ಕೂಡ ಪುರುಷರಿಗಿಂತ ಕಡಿಮೆ ಏನಿಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.ಉದ್ಯೋಗ, ಶೈಕ್ಷಣಿಕ,ಎಲ್ಲ ಕ್ಷೇತ್ರದಲ್ಲಿಯು ಮಹಿಳೆಯರು ಇಂದು ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಸರಕಾರವು ಮಹೆಳೆಯರ ಅಭಿವೃದ್ಧಿಗಾಗಿ ಹೆಚ್ಚಿನ ಪ್ರೊತ್ಸಾಹ ವನ್ನು ನೀಡುತ್ತ ಬಂದಿದೆ. ಸ್ವ ಉದ್ಯೋಗ ತರಬೇತಿ, ಸಾಲ ಸೌಲಭ್ಯ ಇತ್ಯಾದಿಗಳನ್ನು ನೀಡುತ್ತಾ ಆರ್ಥಿಕವಾಗಿಯು ಮಹಿಳೆಯರನ್ನು ಬೆಂಬಲಿಸುತ್ತಿದೆ. ಇದೀಗ ರಾಜ್ಯ ಸರಕಾರದ ಮುಖ್ಯ ಯೋಜನೆಯಾದ ಗೃಹಲಕ್ಷ್ಮಿ (Gruha Lakshmi) ಮೂಲಕವು ಮಹೀಳೆಯರಿಗೆ ಆರ್ಥಿಕ ಬೆಂಬಲ ಹೆಚ್ಚು ಸಿಗುತ್ತಿದೆ.‌ ಈ ಸೌಲಭ್ಯ ಬಗ್ಗೆ ಹೆಚ್ಚಿನ ಮಹೀಳೆಯರು ಖುಷಿ ವ್ಯಕ್ತ ಪಡಿಸಿದ್ದಾರೆ.

Gruha Lakshmi ಹಣ ಜಮೆಯಾಗಿಲ್ಲ:

ನೊಂದಣಿ ಮಾಡಿದ ಕೆಲವು ಮಹಿಳೆಯರಿಗೆ ಈ ಗೃಹಲಕ್ಷ್ಮಿ ಯ ಹಣ (Gruha Lakshmi Money) ಜಮೆಯಾಗಿಲ್ಲ. ಕೆಲವರ ಅಕೌಂಟ್ ಗೆ ಹಣ ಜಮಾ ಆಗಿದೆ.ಈ ಬಗ್ಗೆ ಹೆಚ್ಚಿನ ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.ಈ ಬಗ್ಗೆ ಸರಕಾರ ಸ್ಪಷ್ಟನೆ ಯನ್ನು ನೀಡಿದ್ದು ಇದಕ್ಕೆ ಪರಿಹಾರ ಏನು ಎಂಬುದನ್ನು ಸಹ ಸೂಚಿಸಿದೆ. ಸರ್ಕಾರ ತಿಳಿಯಪಡಿಸಿದ ಸೂಚನೆಯನ್ನು ಮತ್ತು ಮಹಿಳೆಯರು ಅವರ ಬ್ಯಾಂಕ್ ಖಾತೆಯಲ್ಲಿ ಇರುವ ಸಮಸ್ಯೆ ಯನ್ನು ಪರಿಹಾರ ಮಾಡಿಕೊಂಡರೆ ಮುಂಬರುವ ದಿನಗಳಲ್ಲಿ ಅಂದರೆ ಆರು ಮತ್ತು ಏಳನೇ ಕಂತಿನ ಹಣ ಇದೇ ತಿಂಗಳು ಜಮೆಯಾಗಬಹುದು.

ಇಂತವರಿಗೆ ಈ ಹಣ ಜಮೆ ಯಾಗಲ್ಲ:

 

advertisement

Image Source: Fisdom

 

ಗೃಹಲಕ್ಷ್ಮಿ ಯೊಜನೆ (Gruha Lakshmi Yojana) ಯ ಹಣ ಖಾತೆಗೆ ಜಮೆ ಯಾಗಬೇಕಿದ್ರೆ NPCI Mapping ಕಡ್ಡಾಯವಾಗಿದೆ.‌ ಇಂದು ಡಿಜಿಟಲ್ ಹಣ ವರ್ಗಾವಣೆಗೆ NPCI Mapping ಕಡ್ಡಾಯವಾಗಿದ್ದು ಈ ಕೆಲಸ ಮಾಡಿಸಿಲ್ಲ ಎಂದಾದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗೋದಿಲ್ಲ.ಇನ್ನೂ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ಅರ್ಜಿ ಸಲ್ಲಿಕೆ ಮಾಡಿದ‌ ಪ್ರತಿ ಯನ್ನು ಸೂಕ್ತವಾಗಿ ಪರಿಶೀಲನೆ ಮಾಡಿ ರೇಷನ್ ಕಾರ್ಡ್ (Ration Card), ಆಧಾರ್ ಕಾರ್ಡ್ (Aadhaar Card) ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲನೆ ಮಾಡಿ, ಏನಾದರೂ ಬದಲಾವಣೆ ಇದ್ದರೆ ಅದನ್ನು‌ಸರಿ ಪಡಿಸಿಕೊಳ್ಳಿ.

ಏಳನೇ ಕಂತಿನ ಹಣ ಜಮೆ?

ಈಗಾಗಲೇ ಹೆಚ್ಚಿನ ಮಹೀಳೆಯರಿಗೆ ಆರು ಕಂತಿನ ವರೆಗೆ ಹಣ ಬಂದಿದ್ದು ಏಳನೇ ಕಂತಿನ ಹಣ ವನ್ನು ಸರಕಾರ ಬಿಡುಗಡೆ ಮಾಡಿದ್ದು ಇದೇ ತಿಂಗಳಿನಲ್ಲಿ ಹಣವೂ ಜಮೆಯಾಗಲಿದೆ. ಹಾಗಾಗಿ ಯಾರಿಗೆಲ್ಲ‌ ಒಂದು ಕಂತಿನ ಹಣ ಬಂದಿಲ್ಲವೋ ಅವರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಈ ತಿಂಗಳಾದರೂ ಹಣ ಬರುವಂತೆ ದಾಖಲೆ ಸರಿಪಡಿಸಿಕೊಳ್ಳಿ.

advertisement

Leave A Reply

Your email address will not be published.