Karnataka Times
Trending Stories, Viral News, Gossips & Everything in Kannada

Home Loan: ಇಷ್ಟು ದಿನಗಳವರೆಗೆ ಹೋಮ್ ಲೋನ್ ಕಟ್ಟದಿದ್ದರೆ ನಿಮ್ಮ ಮನೆ ಕಬ್ಜ ಮಾಡಲಿದೆ ಬ್ಯಾಂಕ್! ಹೊಸ ರೂಲ್ಸ್

advertisement

ಇಂದಿನ ಕಾಲದಲ್ಲಿ ದುಡಿಮೆ ಹೊಂದಿದ್ದರೆ ಸಾಕು, ಯಾರು ಬೇಕಾದರೂ ಕೂಡ ಬ್ಯಾಂಕಿನ ಮೂಲಕ ಹೋಂ ಲೋನ್ ಪಡೆದುಕೊಂಡು ಮನೆಯನ್ನು ಕಟ್ಟಬಹುದಾಗಿದೆ. ಆದರೆ ಇದು ಎಂದಿಗೂ ಸಾಧ್ಯವಿಲ್ಲ ಯಾಕೆಂದರೆ ಪ್ರಮುಖವಾಗಿ ಕೆಲಸ ಇರಲೇಬೇಕು. ಹಾಗೂ ಹೋಂ ಲೋನ್ ಅಂದ್ರೆ ದೀರ್ಘಕಾಲಿಕ ಸಾಲ ಆಗಿದ್ದು ಇದರ ಮೇಲೆ ಬಡ್ಡಿ ದರ ಕೂಡ ಹೆಚ್ಚಾಗಿ ಹಾಕಲಾಗಿರುತ್ತದೆ. ಇನ್ನು ಹೋಂ ಲೋನ್ (Home Loan) ಪಡೆದುಕೊಂಡ ಮೇಲೆ ಕೂಡ ಸರಿಯಾದ ಸಮಯದಲ್ಲಿ ಕಂತಿನ ಹಣವನ್ನು ಕಟ್ಟ ಬೇಕಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಇಎಂಐ ಕಟ್ಟದೇ ಹೋದಲ್ಲಿ ಬ್ಯಾಂಕ್ ಯಾವ ರೀತಿ ಆಕ್ಷನ್ ತೆಗೆದುಕೊಳ್ಳುತ್ತದೆ ಎಂಬುದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಬ್ಯಾಂಕ್ನಿಂದ ಬರುತ್ತೆ ಲೀಗಲ್ ನೋಟಿಸ್!

ಸಾಮಾನ್ಯವಾಗಿ ನೀವು ಹೋಂ ಲೋನ್ (Home Loan)  ಪಡೆದುಕೊಳ್ಳುವಾಗ ಬ್ಯಾಂಕಿನಲ್ಲಿ ಕೆಲವೊಂದು ಪ್ರಮುಖ ಆಸ್ತಿ (Property)ಯನ್ನು ಅಡ ಇಟ್ಟು ಸಾಲವನ್ನು ಪಡೆದುಕೊಳ್ಳುತ್ತೀರಿ. ಸಾಲವನ್ನು ಪಡೆದುಕೊಂಡ ನಂತರ ಮರುಪಾವತಿಯ ವಿಚಾರಕ್ಕೆ ಬಂದರೆ ಮೊದಲ ಕಂತನ್ನು ನೀವು ಪಾವತಿಸದೆ ಹೋದಲ್ಲಿ ಬ್ಯಾಂಕ್ ನಿಮಗೆ ಏನೋ ಕೆಲಸ ಇರಬೇಕು ಅನ್ನೋದಾಗಿ ಭಾವಿಸುತ್ತದೆ ಆದರೆ 2ನೇ ಬಾರಿಗೂ ಕೂಡ ಸತತವಾಗಿ ನೀವು ಕಂತನ್ನು ಕಟ್ಟದೆ ಹೋದಲ್ಲಿ ಆಗ ಬ್ಯಾಂಕಿನಿಂದ ಸಾಲವನ್ನು ಕಟ್ಟಿ ಎನ್ನುವುದಾಗಿ ರಿಮೈಂಡರ್ ಬರುತ್ತದೆ. ಒಂದು ವೇಳೆ ನೀವು ಇದನ್ನು ಮೀರಿ ಮೂರನೇ ಬಾರಿ ಕೂಡ ಇದೇ ರೀತಿಯ ಕೆಲಸವನ್ನು ಮಾಡಿದರೆ ಆ ಸಂದರ್ಭದಲ್ಲಿ ಬ್ಯಾಂಕ್ ನಿಮಗೆ ಲೀಗಲ್ ನೋಟಿಸ್ ಅನ್ನು ಕಳಿಸಿಕೊಡುತ್ತದೆ.

Image Source: Business Today

advertisement

ಇದರ ನಂತರ ಕೂಡ ನೀವು ಹಣವನ್ನು ಮರುಪಾವತಿ ಮಾಡದೆ ಹೋದಲ್ಲಿ ಆ ಸಂದರ್ಭದಲ್ಲಿ ನಿಮ್ಮನ್ನು ಸುಸ್ತಿದಾರ ಅಂದರೆ ಡಿಫಾಲ್ಟರ್ ಎಂದು ಕರೆಯಲಾಗುತ್ತದೆ. NPA ಖಾತೆಗೆ ಈ ಲೋನ್ ಅನ್ನು ಸೇರಿಸಿ ನಂತರ ಹರಾಜು ಪ್ರಕ್ರಿಯೆಗೆ ಮುಂದುವರಿಯಬೇಕಾಗುತ್ತದೆ. ಸಮಯ ಮಿತಿ 120 ದಿನಗಳಾಗಿರುತ್ತವೆ.

RBI ಹೊಸ ಗೈಡ್ ಲೈನ್ಸ್

ಮೂರು ತಿಂಗಳುಗಳ ಹಣ ಮರುಪಾವತಿ ಇಲ್ಲದೆ ಹಾಗೂ ನೋಟಿಸ್ ನೀಡಿದ ನಂತರ ಕೂಡ ಎರಡು ತಿಂಗಳವರೆಗೆ ಹಣವನ್ನು ಮರುಪಾವತಿ ಮಾಡದೆ ಹೋದಲ್ಲಿ ಈ ರೀತಿಯ ನಿಯಮಗಳನ್ನು ಹಾಗೂ ಆಕ್ಷನ್ ಗಳನ್ನ ವಕೀಲರು ತೆಗೆದುಕೊಳ್ಳುತ್ತಾರೆ.

ಇಂತಿ ಸಾಲವನ್ನು ಪಡೆದುಕೊಂಡು ಮರುಪಾವತಿ ಮಾಡದೆ ಇರುವಂತಹ ವ್ಯಕ್ತಿ ಮನೆಯನ್ನು ಹರಾಜು ಮಾಡುವ ಸಂದರ್ಭದಲ್ಲಿ ಕೂಡ ಬ್ಯಾಂಕ್ ನಿಮಗೆ ಕೊನೆ ಅವಕಾಶ ನೀಡುತ್ತದೆ ಆದರೆ ಈ ಸಂದರ್ಭದಲ್ಲಿ ಕೂಡ ನೀವು ಮಿಸ್ ಮಾಡಿಕೊಂಡರೆ ಮನೆಯನ್ನು ಮಾರಾಟ ಮಾಡಿ ಹಣವನ್ನು ಕಟ್ಟಬೇಕಾಗುತ್ತದೆ. ಸಮಯಕ್ಕೆ ಸರಿಯಾಗಿ ನೀವು ಹಣವನ್ನು ಮರುಪಾವತಿ ಮಾಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸದೆ ಹೋದಲ್ಲಿ ನಿಮ್ಮ ಮನೆಯನ್ನು ಹರಾಜು ಹಾಕಲಾಗುತ್ತದೆ. ಇದರಿಂದ ನಿಮ್ಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಕೂಡ ಹಾಳಾಗುತ್ತದೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ನಿಮಗೆ ಯಾವುದೇ ಬ್ಯಾಂಕುಗಳು ಲೋನ್ ನೇರವಾಗಿ ನೀಡಲು ಸಾಧ್ಯವಿರುವುದಿಲ್ಲ.

advertisement

Leave A Reply

Your email address will not be published.