Karnataka Times
Trending Stories, Viral News, Gossips & Everything in Kannada

Birth Certificate: ಜನನ ಪ್ರಮಾಣ ಪತ್ರ ಮಾಡಿಸಲು ದಾಖಲೆ ಇರದಿದ್ದವರಿಗೆ ಸಿಹಿಸುದ್ದಿ! ಈ ಕೆಲಸ ಮಾಡಿ

advertisement

ಇಂದು ಆಧಾರ್ ಕಾರ್ಡ್ (Aadhaar Card) ಎಂಬುದು ಪ್ರತಿಯೊಂದಕ್ಕು ಬಹಳ ಮುಖ್ಯವಾದ ದಾಖಲೆ ಯಾಗಿ ಗುರುತಿಸಿ ಕೊಂಡಿದೆ. ಅದೇ ರೀತಿ ರೇಷನ್ ಕಾರ್ಡ್ (Ration Card), ಪ್ಯಾನ್ ಕಾರ್ಡ್ (PAN Card) ಇತ್ಯಾದಿ ಪ್ರಮುಖ ದಾಖಲೆ, ಆದ್ರೆ ಇದೀಗ ಜನನ ಪ್ರಮಾಣಪತ್ರವು (Birth Certificate) ಸಹ ಪ್ರಮುಖ ದಾಖಲೆ ಎಂದು ಸರಕಾರ ಈಗಾಗಲೇ ತಿಳಿಸಿದೆ. ಇದು ಜನನ ಮತ್ತು ಮರಣದ ಪುರಾವೆಗಾಗಿ ಎಲ್ಲೆಡೆಯು ಇದನ್ನು ಗುರುತಿನ ಚೀಟಿಯಾಗಿ ಕಾರ್ಯ ನಿರ್ವಹಿಸಲಿದೆ.

ಸುಲಭವಾಗಿ ಮಾಡಿಸಬಹುದು:

 

Image Source: UNICEF Australia

 

ಜನ್ಮ ದಿನಾಂಕದ ಬಗ್ಗೆ ಮಾಹಿತಿ ನೀಡುವ ಪ್ರಮುಖ ದಾಖಲೆ ಇದಾಗಿದ್ದು ‌ ಮಗು ಹುಟ್ಟಿದ 21 ದಿನಗಳ ವೊಳಗೆ ನೀವು ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಹಿಂದೆಲ್ಲ ಜನನ ಪ್ರಮಾಣ ಪತ್ರ (Birth Certificate) ಮಾಡಿಸಲು ಬಹಳಷ್ಟು ಕಷ್ಟ ಇತ್ತು.

ಈಗ ಆನ್‌ಲೈನ್ ಮೂಲಕವೂ ಜನನ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು. ಜನನ, ಮರಣ ಪ್ರಮಾಣ ಪತ್ರಕ್ಕಾಗಿ ಈ ಜನ್ಮ ಎಂಬ ಆ್ಯಪ್‌ ಅನುಷ್ಠಾನಗೊಳಿಸಿ ಆನ್‌ ಲೈನ್‌ ಮೂಲಕ ಪ್ರಮಾಣ ಪತ್ರ ನೋಂದಣಿ ಮಾಡಬಹುದು. ಹಾಗಾಗಿ ಈಗ ಸುಲಭವಾಗಿ ಮನೆ ಬಾಗಿಲಿಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿದಾರರಿಗೆ ಜನನ ಮರಣ ಪತ್ರ ಸಿಗಲಿದೆ.

ಅಗತ್ಯ ದಾಖಲೆ:

 

advertisement

Image Source: UNICEF

 

ಇಂದು ಶಾಲಾ ದಾಖಲಾತಿ, ವಾಹನ ಚಾಲನಾ ಪರವಾನಗಿ, ಸರಕಾರಿ ಉದ್ಯೋಗ, ಪಾಸ್‌ಪೋರ್ಟ್‌, ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಲು ಈ ಜನನ ಪ್ರಮಾಣ ಪತ್ರ (Birth Certificate) ಎಂಬುದು ಪ್ರಮುಖ ದಾಖಲೆಯಾಗಿ ಗುರುತಿಸಿಕೊಂಡಿದ್ದು ಇದನ್ನು ಪಡೆದುಕೊಳ್ಳುವ ಬಗ್ಗೆಯು ಸರಕಾರ ಮಾಹಿತಿ ನೀಡುತ್ತಲೆ ಇರುತ್ತದೆ‌

ಜನನ ಪ್ರಮಾಣಪತ್ರ ಆಧಾರಶಾಲೆಗೆ‌ ಪ್ರವೇಶ, ಚಾಲನಾ ಪರವಾನಗಿ ಮತ್ತು ಮತದಾರರ ಗುರುತಿನ ಪಟ್ಟಿಸೇರಿದಂತೆ ಅನೇಕ ಕಡೆಗಳಲ್ಲಿ ಇನ್ನುಮುಂದೆ ಜನನ ಪ್ರಮಾಣ ಪತ್ರ ಒಂದನ್ನೇ ದಾಖಲೆಯಾಗಿ ಬಳಸಲು

ಈಗಾಗಲೇ ಆದೇಶ ನೀಡಲಾಗಿದ್ದು ಆಧಾರ್‌ ಸೇರಿದಂತೆ ವಿವಿಧ ದಾಖಲೆ ಗಳಿಗೆ ನೋಂದಣಿ ಮಾಡಿಸಲು ತಮ್ಮ ಹುಟ್ಟಿದ ದಿನಾಂಕ ಮತ್ತು ಸ್ಥಳವನ್ನು ಸಾಬೀತು ಪಡೆಸಲು ಈ ಜನನ ಪ್ರಮಾಣಪತ್ರ ವೊಂದನ್ನೇ ಆಧಾರವಾಗಿ ಇಂದು ಬಳಸಬಹುದಾಗಿದೆ

ಮೂಲ ದಾಖಲೆ ಇಲ್ಲದಿದ್ದಲ್ಲಿ?

ನನ್ನಲ್ಲಿ ಬರ್ತ್ ಸರ್ಟಿಫಿಕೇಟ್ ‌(Birth Certificate) ಇಲ್ಲ. ನಾನು ಹುಟ್ಟಿದ ಸಂದರ್ಭದಲ್ಲಿ ಪೋಷಕರು ಈ ಬಗ್ಗೆ ನಗರ ಸಭೆ ಅಥವಾ ಸಂಬಂಧಿಸಿದ ಇಲಾಖೆ ಗಳಲ್ಲಿ ನಮೂದು ಮಾಡಿಲ್ಲ. ನೋಂದಣಿ ಮಾಡಿಲ್ಲ ಎಂದಾದರೆ ಮೊದಲು‌ ನೀವು ನಗರಸಭೆಗೆ ಒಂದು ಅರ್ಜಿ ಯನ್ನು‌ ಸಲ್ಲಿಸಬೇಕಾಗುತ್ತದೆ. ಆಗ ನಗರ ಸಭೆಯವರು ತಮ್ಮ ಯಾವುದೇ ರೀತಿಯ ಜನನ ದಿನಾಂಕದ ಮಾಹಿತಿ ನಮೂದು ಇಲ್ಲ ಎಂದು ಸಲ್ಲಿಕೆ ಮಾಡಿದ್ದಲ್ಲಿ ನ್ಯಾಯಾಲಯಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಸಿ ನಿಮ್ಮ‌ವೋಟರ್ ಐಡಿ, ಆಧಾರ್ ಕಾರ್ಡ್, ಇತ್ಯಾದಿ ಅಗತ್ಯ ದಾಖಲೆ ನೀಡುವ ಮೂಲಕ ವಿಚಾರಣೆ ಆದ ನಂತರದಲ್ಲಿ ಕೋರ್ಟ್ ನಿಮಗೆ ಆದೇಶ ನೀಡಿ ಸಂಬಂಧ ಪಟ್ಟ ಇಲಾಖೆಗೆ ಮಾಹಿತಿ ‌ನೀಡಲಿದೆ. ಹೀಗಾಗಿ ಯಾವುದೇ ದಾಖಲೆ ಇಲ್ಲದಿದ್ದಲ್ಲಿ ಹೀಗೆ ಮಾಡಬಹುದಾಗಿದೆ.

advertisement

Leave A Reply

Your email address will not be published.