Karnataka Times
Trending Stories, Viral News, Gossips & Everything in Kannada

Birth Certificate: ಬರ್ತ್ ಸರ್ಟಿಫಿಕೇಟ್ ಮಾಡುವ ಎಲ್ಲರಿಗೂ ಹೊಸ ರೂಲ್ಸ್! ಕೇಂದ್ರದ ಘೋಷಣೆ

advertisement

ಸ್ನೇಹಿತರೆ, ಜನನ ನೋಂದಣಿ ಪ್ರಕ್ರಿಯೆಯಲ್ಲಿ ಸರ್ಕಾರವು ಕೆಲ ಮಹತ್ತರ ಬದಲಾವಣೆಗಳನ್ನು ಮಾಡಿದ್ದು ಇದುವರೆಗೂ ಮಗುವಿನ ಜನನಕ್ಕೆ ಸಂಬಂಧಿಸಿದ ನೋಂದಣಿ ಫಾರ್ಮ್ ನಂಬರ್ ಒನ್ (Registration Form No.1) ನಲ್ಲಿ ಕುಟುಂಬದ ಧರ್ಮದ ಕಾಲಂ (Religion Column) ಮಾತ್ರ ನೀಡಲಾಗಿತ್ತು. ಆದರೆ ಈಗ ಅದಕ್ಕೆ ಮತ್ತೊಂದು ಕಾಲಂ ಸೇರ್ಪಡೆಯಾಗಿದ್ದು, ಇದು ದತ್ತು ಪ್ರಕ್ರಿಯೆಯಲ್ಲಿ ಬಹು ಮುಖ್ಯವಾದ ಕಾರ್ಯ ನಿರ್ವಹಿಸುತ್ತದೆ.

ಜನನ ನೊಂದಣಿ ಪ್ರಕ್ರಿಯೆಯ ಹೊಸ ನಿಯಮ:

 

Image Source: News Track Live

 

ಕೇಂದ್ರ ಗೃಹ ಸಚಿವಾಲಯ ಜನ ನೊಂದಣಿ ಪ್ರಕ್ರಿಯೆಯಲ್ಲಿ (Birth Registration Process) ಬಹುದೊಡ್ಡ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಇನ್ನು ಮುಂದೆ ಯಾವುದೇ ನವಜಾತ ಶಿಶು ಕುಟುಂಬದಲ್ಲಿ ಜನಿಸಿದರೆ ಮಗುವಿನ ಜನನದ ನೋಂದಣಿ ಮಾಡಿಸುವ ಸಮಯದಲ್ಲಿ ಪೋಷಕರ ಧರ್ಮಕ್ಕೆ ಸಂಬಂಧಿಸಿದಂತಹ ಎಲ್ಲಾ ಮಾಹಿತಿಗಳನ್ನು ನಮೂದಿಸಬೇಕಾಗುತ್ತದೆ.

ಈ ಹಿಂದೆ ಕೇವಲ ಮಗುವಿನ ಕುಟುಂಬದ ಧರ್ಮಕ್ಕೆ ಸಂಬಂಧಿಸಿದಂತಹ ಕಾಲಂ ಅನ್ನು ನೋಂದಣಿ ಫಾರ್ಮ್ ನಲ್ಲಿ ನೋಡಬಹುದಾಗಿತ್ತು. ಆದರೆ ಇನ್ಮುಂದೆ ಪೋಷಕರ ಧರ್ಮದ ಕುರಿತಾದಂತಹ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಬೇಕೆನ್ನುವ ನಿಯಮವನ್ನು ಗೃಹ ಸಚಿವಾಲಯವು ಸಿದ್ಧಪಡಿಸಿ ಕೇಂದ್ರ ಸರ್ಕಾರಗಳಿಗೆ ಆದೇಶ ಹೊರಡಿಸಿದೆ.

advertisement

ಪೋಷಕರ ಧರ್ಮಕ್ಕೆ ಹೊಸ ಕಾಲಂ:

ಜನನ ನೋಂದಣಿ (Birth Registration) ಫಾರ್ಮ್ ನಂಬರ್ ಒನ್ ನಲ್ಲಿ ಮಗುವಿನ ಪೋಷಕರ ಧರ್ಮಕ್ಕೆ ಸಂಬಂಧಿಸಿದಂತಹ ಮಾಹಿತಿಯನ್ನು ನೀಡಬೇಕಾಗುತ್ತದೆ. ಹೊಸ ನಿಯಮವು, ದತ್ತು ಪ್ರಕ್ರಿಯೆ (Adoption Process) ಯಲ್ಲಿ ಇದು ಅಗತ್ಯ ಕಾರ್ಯನಿರ್ವಹಿಸುತ್ತದೆ.

ಡೇಟಾ ಬೇಸ್ ಜನನ ಪ್ರಮಾಣ ಪತ್ರ ಕಡ್ಡಾಯ!

 

Image Source: UNICEF Data

 

ಜನನ-ಮರಣ ತಿದ್ದುಪಡಿ ಕಾಯ್ದೆಯ ಪ್ರಕಾರ, ಸರ್ಕಾರ ಭವಿಷ್ಯದ ದಿನಗಳಲ್ಲಿ ಆಧಾರ್ ಕಾರ್ಡ್ (Aadhaar Card), ವೋಟರ್ ಐಡಿ (Voter ID), ರೇಷನ್ ಕಾರ್ಡ್ (Ration Card), ಪಾಸ್ಪೋರ್ಟ್ (Passport) ಮತ್ತು ಡ್ರೈವಿಂಗ್ ಲೈಸೆನ್ಸ್ (Driving License) ನಂತಹ ದಾಖಲೆಗಳನ್ನು ಜನನ ನೋಂದಣಿಯ ಹೊಸ ಫಾರ್ಮ್ ನಂಬರ್ 1 ನಿಂದ ಪಡೆದ ಡೇಟಾಬೇಸ್ (Database) ಆಧಾರದ ಮೇಲೆ ನವೀಕರಿಸುತ್ತಾರೆ.

ಜನನಕ್ಕೆ ಸಂಬಂಧಿಸಿದ ಈ ಡಿಜಿಟಲ್ ಪ್ರಮಾಣ ಪತ್ರ ಬಹು ಮುಖ್ಯ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ ಜೊತೆಗೆ ಶಾಲಾ ಕಾಲೇಜುಗಳಿಗೆ ಪ್ರವೇಶ ಪಡೆಯುವ ಸಮಯದಲ್ಲೂ ಈ ಡೇಟಾಬೇಸ್ ಜನನ ಪ್ರಮಾಣ ಪತ್ರ (Birth Certificate) ಮಾನ್ಯವಾಗಿರುತ್ತದೆ (Valid).

advertisement

Leave A Reply

Your email address will not be published.