Karnataka Times
Trending Stories, Viral News, Gossips & Everything in Kannada

Crop Insurance: ಬೆಳೆ ವಿಮೆಗಾಗಿ ಅಲೆದಾಟ ಬೇಡ! ಈ ಡೈರೆಕ್ಟ್ ಲಿಂಕ್ ನಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ

advertisement

ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ. ಕೃಷಿಯಲ್ಲಿ ರೈತರು ಅಧಿಕ ಇಳುವರಿ ಪಡೆಯಬೇಕು ಎಂಬ ನಿಟ್ಟಿನಲ್ಲಿ ಕೃಷಿಯ ಬಗ್ಗೆ ಮಾರ್ಗದರ್ಶನ ಕೂಡ ನೀಡಲಾಗುತ್ತಿದೆ.‌ ಈ ಭಾರಿ ಮಳೆ ಇಲ್ಲದೆ ರೈತರು ಹೆಚ್ಚು ನಷ್ಟ ಅನುಭವಿಸಿದ್ದು ಇದಕ್ಕಾಗಿ ಸರಕಾರವು ಪರಿಹಾರ ಮೊತ್ತವನ್ನು ಕೂಡ ಭರಿಸುತ್ತಿದೆ. 2023 ನೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದರೂ ನೀರಿನ ಸಮಸ್ಯೆ ಉಂಟಾಗಿ ‌ ಸಾಕಷ್ಟು ರೈತರು ನಷ್ಟ ಅನುಭವಿಸಿದ್ದು ಬೆಳೆ ವಿಮೆ (Crop Insurance) ಯೋಜನೆಯಡಿಯಲ್ಲಿ ವಿಮಾ ಕಂಪನಿಗಳು ಹಲವು ಜಿಲ್ಲೆಗಳ ರೈತರಿಗೆ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ

ಇವರಿಗೆ ಈ ಯೋಜನೆ:

 

Image Source: Vajiram

 

ಮಳೆ ಇಲ್ಲದೆ ಬರಗಾಲ, ಅತೀ ಮಳೆ ಇತ್ಯಾದಿ ಬೆಳೆ ನಾಶವಾದ ರೈತರಿಗೆ ಆರ್ಥಿಕ ಸಹಾಯ ಧನವನ್ನು ನೀಡುವ ಯೋಜನೆ ಇದಾಗಿದೆ.ರೈತರಿಗಾಗಿ ಬೆಳೆ ಬೆಳೆಯಲು ಬೀಜ ಖರೀದಿ, ಔಷಧಿಗಳಿಗೆ ನೇರವಾಗಲು ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಗೆ 2023ರ ಬೆಳೆ ಋತುವಿನಲ್ಲಿ ಬೆಳೆ ಹಾನಿಯಾದ ರೈತರು ಅರ್ಜಿ ಹಾಕಬಹುದು. ಈಗ ನೀವು ಬೆಳೆ ವಿಮೆ (Crop Insurance) ಮೊತ್ತ ಜಮೆಯಾಗಿರುವ ಬಗ್ಗೆ ಕೇವಲ ಮೊಬೈಲ್ ಮೂಲಕವೇ ಸರ್ವೆ ನಂಬರ್ ಅನ್ನು ಹಾಕಿ ತಿಳಿದುಕೊಳ್ಳಬಹುದಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

advertisement

ಹೀಗೆ ಚೆಕ್ ಮಾಡಿ:

ಮೊದಲಿಗೆ ನೀವು Crop Insurance ಅಂದರೆ ಸಂರಕ್ಷಣೆ (SAMRAKSHANE) ವೆಬ್ಸೈಟ್ ಗೆ ಭೇಟಿ ನೀಡಿ ಬೆಳೆ ವಿಮೆಯ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಮೊದಲಿಗೆ ನೀವು ವರ್ಷವನ್ನು ಆಯ್ಕೆ ಮಾಡಿಕೊಂಡು ಅಂದರೆ 2023 ಹಾಗೂ 24ನೇ ಸಾಲಿನ ವರ್ಷವನ್ನು ಆಯ್ಕೆ ಮಾಡಬೇಕು. ನಂತರ ಮುಂಗಾರು ಎನ್ನುವ ಆಪ್ಚನ್ (Options) ಆಯ್ಕೆ ಮಾಡಿ Go ಬಟನ್ ಮೇಲೆ ಕ್ಲಿಕ್ ಮಾಡಬೇಕು.ಇಲ್ಲಿ Crop Insurance Details on Survey No ಮೇಲೆ ಕ್ಲಿಕ್ ಮಾಡಿ ನಿಮ್ಮ ಗ್ರಾಮ ಹಾಗೂ ಸರ್ವೆ ನಂಬರ್ ದಾಖಲೆಗಳನ್ನು ಸಲ್ಲಿಕೆ ಮಾಡಿ, ನಂತರ ಸರ್ಚ್ (Search) ಬಟನ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಬೆಳೆ ವಿಮೆ ಮೊತ್ತ ಜಮೆಯಾಗಿರುವ ಬಗ್ಗೆ ಮಾಹಿತಿ ತಿಳಿಯಲಿದೆ.

ಯಾವ ಬೆಳೆಗಳಿಗೆ ಸಿಗಲಿದೆ?

 

Image Source: Moneycontrol

 

ಭತ್ತ (Paddy), ಮೆಕ್ಕೆಜೋಳ (Maize), ಹತ್ತಿ (Cotton), ಈರುಳ್ಳಿ (Onion), ಆಲೂಗಡ್ಡೆ (Potato) ಇತ್ಯಾದಿ ಬೆಳೆಗಳಿಗೆ ನೊಂದಾಯಿಕೊಂಡ ರೈತರಿಗೆ ವಿಮೆ ಮೊತ್ತ Crop Insurance ಸಿಗಲಿದೆ. ಈಗಾಗಲೇ ಕೆಲವು ರೈತರಿಗೆ ಈ ಹಣ ಜಮೆಯಾಗಿದೆ. ಈ ಯೋಜನೆಯ ಬಗ್ಗೆ ರೈತರು ತಿಳಿದುಕೊಳ್ಳಲು ತಮ್ಮ ಗ್ರಾಮ ಪಂಚಾಯತ್ ಗೆ ಅಥವಾ ತಮಗೆ ಸಂಬಂಧಿಸಿದ ತಾಲೂಕಿನ ತೋಟಗಾರಿಕ ಕಚೇರಿಗಳಿಗೆ ಭೇಟಿ ನೀಡಬಹುದು.

advertisement

Leave A Reply

Your email address will not be published.