Karnataka Times
Trending Stories, Viral News, Gossips & Everything in Kannada

Electric Scooter: ಈ ಕಂಪನಿಯ ಎಲೆಕ್ಟ್ರಿಕ್ ಬೈಕ್ ಗಳ ಮೇಲೆ 30,000 ನೇರ ರಿಯಾಯಿತಿ! ಬೆಂಕಿ ಮೈಲೇಜ್

advertisement

ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಜನ ಮುಗಿಬಿದ್ದಿರುವ ಕಾರಣ ಹತ್ತಾರು ಕಂಪನಿಗಳು ಅದ್ಭುತ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಬೈಕ್ ಗಳನ್ನು ಗ್ರಾಹಕರ ಕೈಗೆಟಕುವ ಬೆಲೆಗೆ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆ ಪಡೆಯುತ್ತಿದ್ದಾರೆ. ಅದರಂತೆ ಒಕಾಯಾ ಕಂಪನಿಯು (OKAYA COMPANY) ಎಲೆಕ್ಟ್ರಿಕ್ ಗಾಡಿಗಳ ಮೇಲಿನ ಬೆಲೆಯನ್ನು ತೀರಾ ಇಳಿಕೆ ಮಾಡಿ ಅತಿ ಕಡಿಮೆ ಬೆಲೆಗೆ ಒಳ್ಳೆಯ ಸ್ಕೂಟರ್ ಅನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿದ್ದು, ಈ ವರ್ಷ ಅತಿ ಹೆಚ್ಚಿನ ಸ್ಕೂಟರ್ ಗಳನ್ನು ಸೇಲ್ ಮಾಡಿದ್ದಾರೆ.

ಈ ಎಲೆಕ್ಟ್ರಿಕ್ ವಾಹನದ (Electric Vehicle) ಮೇಲೆ ಒಂದಲ್ಲ ಎರಡಲ್ಲ ಬರೋಬ್ಬರಿ 30,000 ಬಂಪರ್ ರಿಯಾಯಿತಿ ನೀಡುತ್ತಿದ್ದಾರೆ. ಹಾಗಾದ್ರೆ ಸ್ಕೂಟರ್ನ ಆಕರ್ಷಕವಾದ ಫೀಚರ್ಸ್ಗಳೇನು? ಬ್ಯಾಟರಿ ಬ್ಯಾಕಪ್ (Battery Backup) ಹಾಗೂ ಮೈಲೇಜ್ ಸಾಮರ್ಥ್ಯ ಹೇಗಿದೆ? ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ಶಕ್ತಿಯುತ ಬ್ಯಾಟರಿ ಬ್ಯಾಕಪ್:

ಭಾರತದಲ್ಲಿ ಅತಿ ಕಡಿಮೆ ಎಲೆಕ್ಟ್ರಿಕ್ ವಾಹನ (Electric Vehicle) ತಯಾರಿಕರು ಉಪಯೋಗಿಸುವಂತಹ ಲಿತಿಯಂ ಐರನ್ ಫಾಸ್ಪೇಟ್ ಬ್ಯಾಟರಿ (Lithium Iron Phosphate Battery) ಯನ್ನು ಒಕಾಯ ಎಲೆಕ್ಟ್ರಿಕ್ ವಾಹನದಲ್ಲಿ ಉಪಯೋಗಿಸಲಾಗುತ್ತಿದೆ. ಇದು ಅತಿ ಹೆಚ್ಚಿನ ಸುರಕ್ಷತೆಗೆ ಹೆಸರುವಾಸಿಯಾಗಿದ್ದು, ಇತ್ತೀಚಿನ ಎಲೆಕ್ಟ್ರಿಕ್ ವಾಹನಗಳಲ್ಲಿ ಉಪಯೋಗಿಸುತ್ತಿರುವ ಲೀಥಿಯಂ ಅಯೋನ್ ಬ್ಯಾಟರಿ (Lithium Ion Battery) ಗಳು ಇದ್ದಕ್ಕಿದ್ದ ಹಾಗೆ ಸ್ಪೋಟಕ ಗೊಂಡಿರುವ ಸಾಕಷ್ಟು ಸಂಗತಿಯನ್ನು ನಾವು ಕಂಡಿದ್ದೇವೆ.

ಆದರೆ ವಾಹನಗಳಲ್ಲಿ ಎಲೆಕ್ಟ್ರಿಕ್ LFP ಬ್ಯಾಟರಿಗಳನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಸ್ಪೋಟಕ ಸಮಸ್ಯೆಗಳು ಎದುರಾಗುವುದಿಲ್ಲ. ಹಾಗಾಗಿ ಇದು ಅತ್ಯಂತ ಸುರಕ್ಷತೆಯನ್ನು ಒದಗಿಸುವ ನಂಬರ್ ಒನ್ ಬ್ಯಾಟರಿಯಾಗಿದೆ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಒಕಾಯಾ ಕಂಪನಿ ಇಂತಹ LFP ಬ್ಯಾಟರಿಯನ್ನು ಅಳವಡಿಸಿ ವಾಹನ ತಯಾರಿಸಿದ್ದಾರೆ.

ಬೆಲೆಯಲ್ಲಿ ಬಂಪರ್ ಡಿಸ್ಕೌಂಟ್ ಸಿಗಲಿದೆ:

ಸಾಮಾನ್ಯ ಮಧ್ಯಮ ವರ್ಗದ ಜನರ ಕೈಗೆಟುಕುವಂತಹ ಬೆಲೆಯಲ್ಲಿ ಗಾಡಿಯನ್ನು ಮಾರಾಟ ಮಾಡುವ ಸಲುವಾಗಿ ಒಕಾಯಾ ಕಂಪನಿ ಗಾಡಿ ಮೇಲಿನ ಬೆಲೆಯನ್ನು ತೀರ ಇಳಿಕೆ ಮಾಡಿ, ಅತ್ಯಾಕರ್ಷಕ ರಿಯಾಯಿತಿಯನ್ನು ನೀಡುತ್ತಿದ್ದು, ವಿವಿಧ ರೂಪಾಂತರಗಳಿಗೆ ಲಭ್ಯವಿರುವ ಒಕಾಯ ಕಂಪನಿಯ ಎಲೆಕ್ಟ್ರಿಕ್ ವಾಹನಗಳ ಬೆಲೆ ಎಷ್ಟಿದೆ ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

Faast F4: ಅಸಲಿ ಬೆಲೆಯು ₹1,60,122 ಆದರೆ ಕಂಪನಿಯು ಬರೋಬ್ಬರಿ ₹40,133 ರೂಪಾಯಿ ರಿಯಾಯಿತಿ ನೀಡುವ ಮೂಲಕ ಕೇವಲ ₹1,19,989 ರೂಪಾಯಿಗಳಿಗೆ ಬೈಕನ್ನು ಮಾರಾಟ ಮಾಡುತ್ತಿದೆ.

 

advertisement

Image Source: EVO India

 

Faast F2T: ₹22,192 ರೂಪಾಯಿ ರಿಯಾಯಿತಿಯ ಮೇಲೆ ಕೇವಲ 92,900ರೂಗಳಿಗೆ ಈ ಎಲೆಕ್ಟ್ರಿಕ್ ವಾಹನವನ್ನು ಕೊಳ್ಳಬಹುದು.

 

Image Source: carandbike

 

FREEDOM: ₹75,899ರೂಪಾಯಿಗಳ ಸ್ಕೂಟರ್ ಮೇಲೆ ₹5949 ಡಿಸ್ಕೌಂಟ್ ನೀಡುತ್ತಿದ್ದು ಕೇವಲ ₹69,950ಗಳಿಗೆ ಬೈಕ್ ಅನ್ನು ಖರೀದಿಸಬಹುದು.

 

Image Source: carandbike

 

FAAST F2T: ಕಂಪನಿ ವತಿಯಿಂದ ಈ ರೂಪಾಂತರದ ಮೇಲೆ ಬರೋಬ್ಬರಿ ₹14,049 ರೂಗಳ ರಿಯಾಯಿತಿ ದೊರಕುತ್ತಿದ್ದು, ₹93,999 ಬೆಲೆಯ ಈ ಬೈಕನ್ನು ಕೇವಲ ₹79,950 ರೂಪಾಯಿಗಳಿಗೆ ಪಡೆಯಬಹುದು.

PHASE F2B: ₹1,19,233ರ ಬೈಕನ್ನು ಕಂಪನಿ ₹89,950 ಗಳಿಗೆ ಮಾರಾಟ ಮಾಡುತ್ತಿದ್ದು ಈ ಬೈಕಿನ ಮೇಲೆ ನಿಮಗೆ ಬರೋಬ್ಬರಿ ₹29,283 ರೂಪಾಯಿ ಡಿಸ್ಕೌಂಟ್ ದೊರಕುತ್ತದೆ.

MOTO PHASE: ₹1,64,475ಗಳ ಬೈಕ್ ಮೇಲೆ ಕಂಪನಿ ವತಿಯಿಂದ ₹39,476 ರಿಯಾಯಿತಿ ದೊರಕಲಿದ್ದು, ಇದರಿಂದ ಕೇವಲ ₹1,24, 999 ಗಳಿಗೆ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.