Karnataka Times
Trending Stories, Viral News, Gossips & Everything in Kannada

Gruha Lakshmi scheme: 6 ,7,8 ನೇ ತಿಂಗಳ ಗೃಹಲಕ್ಷ್ಮಿ ಹಣ ಬಾರದವರು ಕೂಡಲೇ ಈ ಕೆಲಸ ಮಾಡಿ! ಸರಕಾರದ ಸೂಚನೆ

advertisement

The Gruha Lakshmi Scheme 8th Installment:   ಬಡವರ್ಗದ ಜನತೆಗೆ ಮೂಲಭೂತ ಆಹಾರ ವಸ್ತುಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ಆಹಾರ ಇಲಾಖೆಯು ಆಹಾರ ಧಾನ್ಯಗಳ ವಿತರಣೆ ಯನ್ನು ಮಾಡುತ್ತಿದೆ.‌ಅದರ ಜೊತೆ ಈ ಭಾರಿ ಗ್ಯಾರಂಟಿ ಯೋಜನೆಗಳ ಮೂಲಕ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯನ್ನು ಕಾಂಗ್ರೆಸ್ ಸರಕಾರವು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯ ಮೂಲಕ ಹೆಚ್ಚುವರಿ ಅಕ್ಕಿಯ ಜೊತೆಗೆ ಹಣವನ್ನು ಕೂಡ ಖಾತೆಗೆ ಜಮೆ ಮಾಡುತ್ತಿದೆ.‌ಅದರ ಜೊತೆ ಗೃಹಲಕ್ಷ್ಮಿ ಯೋಜನೆಯ( Gruha Lakshmi Yojana.)ಮೂಲಕ ಪ್ರತಿಯೊಬ್ಬ ಮನೆಯ ಹಿರಿಯ ಮಹಿಳೆಗೆ ಎರಡು ಸಾವಿರ ರೂಪಾಯಿ ಯನ್ನು ಖಾತೆಗೆ ಜಮೆ ಮಾಡುತ್ತಿದೆ. ಈ ಮೂಲಕ ಈ ಎರಡು ಯೋಜನೆಗಳ ಸದುಪಯೋಗ ವನ್ನು ಬಹಳಷ್ಟು ಮಂದಿ ಪಡೆಯುತ್ತಿದ್ದಾರೆ.

ಗೃಹಲಕ್ಷ್ಮಿ ಹಣ ಬಂದಿಲ್ಲ
ಈಗಾಗಲೇ ನೊಂದಣಿ ಮಹಿಳೆಯರಿಗೆ ಏಳು ಕಂತಿನ ವರೆಗೆ ಗೃಹಲಕ್ಷ್ಮಿ ಯ ಹಣ ಬಿಡುಗಡೆ ಮಾಡಿದ್ದು ಎಂಟನೆ ಕಂತಿನ ಹಣ ಜಮೆ ಮಾಡಲು ಸರಕಾರ ತೀರ್ಮಾನ ಮಾಡಿದೆ. ಇದಕ್ಕೆಲ್ಲ ಸಿದ್ದತೆಯನ್ನು ಕೂಡ ಮಾಡಿದೆ.ಆದ್ರೆ ಕೆಲವು ಮಹಿಳೆಯರಿಗೆ ಒಂದು ಕಂತಿನ ಹಣವೂ ಜಮೆಯಾಗಿಲ್ಲ. ಈ ಬಗ್ಗೆ ಸರಕಾರ ಹೊಸ ಸೂಚನೆಯನ್ನು ನೀಡಿದ್ದು ಈ ಮೂರು ದಾಖಲೆ ಕಡ್ಡಾಯ ವಾಗಿ ನೀಡಿದ್ರೆ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎನ್ನುವ ಮಾಹಿತಿ ನೀಡಿದೆ.

gruhalakshmi amount credit 8th
Image Source: Public TV

advertisement

ಅನ್ನಭಾಗ್ಯ ಹಣವೂ ಜಮೆ ಇಲ್ಲ
ಈಗಾಗಲೇ ‌ಕೆಲವು ಫಲಾನುಭವಿ ಗಳಿಗೆ ಡಿಸೆಂಬರ್ ವರೆಗೆ ಮಾತ್ರ ಈ ಅನ್ನಭಾಗ್ಯ ಹಣ ಜಮೆಯಾಗಿದ್ದು ಜನವರಿ,ಪೆಬ್ರವರಿ ,ಮಾರ್ಚ್ ತಿಂಗಳ ಹಣ ಜಮೆಯಾಗಿಲ್ಲ. ಈ ಹಣ ಜಮೆಯಾಗಬೇಕಿದ್ರೂ ನೀವು ಕೆಲವೊಂದು ಪ್ರಕ್ರಿಯೆ ಪೂರ್ಣ ಗೊಳಿಸಿದ್ದರೆ ಮಾತ್ರ ಹಣ ಜಮೆಯಾಗಲಿದೆ.ಹೌದು ನಿಮ್ಮ ರೇಷನ್ ಗೆ ಆಧಾರ್ ಅಪ್ಡೇಟ್, ಇ ಕೆವೈಸಿ ಮೊದಲು ಮಾಡಿಸಿ. ಹಾಗಿದ್ದಲ್ಲಿ ಅನ್ನಭಾಗ್ಯ ಹಣ ಜಮೆಯಾಗಬಹುದು‌

ಗೃಹಲಕ್ಷ್ಮಿ ಹಣ ಖಾತೆಗೆ ಬರಲು ಈ ದಾಖಲೆ ಬೇಕು
ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಲು ಮೊದಲು ನೀವು ಆಧಾರ್ ಅಪ್ಡೇಟ್ ಮಾಡಿಸಿ. ನಿಮ್ಮ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ, ಇನ್ನು ಆಧಾರ್ ನಲ್ಲಿ ಇರುವಂತೆ ನಿಮ್ಮ ಮಾಹಿತಿಯನ್ನು ಇತರ ದಾಖಲೆಗಳಿಗೂ ಮ್ಯಾಚ್ ಮಾಡಿಸಿ,ಬ್ಯಾಂಕ್ ಖಾತೆ ನಿಷ್ಕ್ರಿಯ ಆಗಿದ್ದರೆ ಹೊಸ ಖಾತೆ ತೆರೆಯುವ ಮೂಲಕ ದಾಖಲೆ ಸರಿಪಡಿಸಿ ಮತ್ತೆ ಅರ್ಜಿ ಸಲ್ಲಿಕೆ ಮಾಡಿ.

gruhalakshmi amount credit 8th
Image Source: Public TV

ಯಾವಾಗ ಹಣ ಜಮೆ?
ಗೃಹಲಕ್ಷ್ಮಿ ಯೋಜನೆಯ ಎಂಟನೇ ಕಂತಿನ ಹಣವೂ ಎಪ್ರಿಲ್ ತಿಂಗಳ 20 ರ ಒಳಗೆ ಈ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗಬಹುದು.ಅದೇ ರೀತಿ ಅನ್ನಭಾಗ್ಯ ಯೋಜನೆಯ ಹಣವೂ ಎಪ್ರಿಲ್ 15 ರ ಒಳಗೆ ಜಮೆಯಾಗಬಹುದು ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

advertisement

Leave A Reply

Your email address will not be published.