Karnataka Times
Trending Stories, Viral News, Gossips & Everything in Kannada

Car Loan: SBI ನಲ್ಲಿ 15 ಲಕ್ಷದ ಕಾರ್ ಲೋನ್ ಪಡೆದರೆ ನಿಮ್ಮ ಪ್ರತಿ ತಿಂಗಳ EMI ಎಷ್ಟಿರುತ್ತದೆ ಗೊತ್ತಾ?

advertisement

ಸ್ನೇಹಿತರೆ, ಪ್ರತಿಯೊಬ್ಬರಿಗೂ ತಮ್ಮ ಕನಸಿನ ಕಾರನ್ನು ಖರೀದಿಸಿ ಅದರಲ್ಲಿ ತಮ್ಮ ಇಷ್ಟದ ಸ್ಥಳಗಳಿಗೆ ಪ್ರಯಾಣಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಅಂತವರ ಇಚ್ಛೆಯನ್ನು ಪೂರೈಸುವ ಸಲುವಾಗಿ ನಾನಾ ಬ್ಯಾಂಕುಗಳು ಹಲವು ರೀತಿಯಾದಂತಹ ಲೋನ್ಗಳ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದು, ಸಂಪೂರ್ಣ ಹಣವನ್ನು ಪಾವತಿಸಿ ವಾಹನವನ್ನು ಖರೀದಿಸಲಾಗದೆ ಹೋದರು ಸಹ ನಮ್ಮ ಕೈಲಾಗುವಷ್ಟು ಡೌನ್ ಪೇಮೆಂಟ್ (Down Payment) ಮಾಡಿ ಇನ್ನುಳಿದ ಹಣವನ್ನು ಇನ್ಸ್ಟಾಲ್ಮೆಂಟ್ (Installment) ರೂಪದಲ್ಲಿ ಪಾವತಿಸುವ ಅವಕಾಶವನ್ನು ಗ್ರಾಹಕರಿಗೆ ಬ್ಯಾಂಕ್ಗಳು ಮಾಡಿಕೊಡುತ್ತಿವೆ.

ಹೀಗಿರುವಾಗ SBI ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದ್ದು, ನೀವೇನಾದರೂ ಕಾರನ್ನು ಖರೀದಿಸಲು ಬ್ಯಾಂಕ್ನಿಂದ ಲೋನ್ (Car Loan) ಪಡೆಯಲು ಯೋಚಿಸುತ್ತಿದ್ದರೆ SBI ಅತಿ ಕಡಿಮೆ ಇಂಟರೆಸ್ಟ್ ರೇಟ್ (Less Interest Rate) ನಲ್ಲಿ ಸಾಲವನ್ನು ನೀಡುತ್ತಿದೆ ಹಾಗಾದ್ರೆ 15 ಲಕ್ಷ ಕಾರ್ ಲೋನ್ಗೆ ಪ್ರತಿ ತಿಂಗಳು ಇನ್ಸಟಾಲ್ಮೆಂಟ್ ರೂಪದಲ್ಲಿ ಪಾವತಿಸ ಬೇಕಾಗುವ ಹಣ ಎಷ್ಟು? SBI ನಲ್ಲಿ ಸದ್ಯದ ಬಡ್ಡಿ ದರ ಎಷ್ಟಿದೆ? ಎಂಬ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

SBI ನಲ್ಲಿ 15 ಲಕ್ಷ ಸಾಲಕ್ಕೆ ಬಡ್ಡಿಯಷ್ಟು?

 

Image Source: India TV News

 

ಗ್ರಾಹಕರಿಗೆ ನಾನಾ ರೀತಿಯ ಸಾಲ ಸೌಲಭ್ಯವನ್ನು SBI ಒದಗಿಸಿಕೊಡುತ್ತಿದ್ದು, ನೀವೇನಾದರೂ ಸಾಲ ಪಡೆದು ಕಾರನ್ನು ಖರೀದಿಸಲು ಯೋಜನೆ ಹೊಡಿದರೆ SBI ಕಡಿಮೆ ಬಡ್ಡಿ ದರದಲ್ಲಿ ಬರೋಬ್ಬರಿ 15 ಲಕ್ಷದವರೆಗಿನ ಕಾರ್ ಲೋನ್ (Car Loan) ಅನ್ನು 8.85% ನಿಂದ 9.80% ಬಡ್ಡಿದರಕ್ಕೆ ನಿಗದಿಪಡಿಸಿ ಮಂಜೂರು ಮಾಡಲಿದೆ. ಅದರೊಂದಿಗೆ ಲೆಕ್ಟ್ರಿಕ್ ವಾಹನಗಳ ಮೇಲೆ ಗ್ರೀನ್ ಕಾರ್ ಲೋನ್ ಎಂಬ ಯೋಜನೆಯನ್ನು ಎಸ್‌ಬಿಐ ಜಾರಿಗೆ ತಂದಿದ್ದು ನೀವೇನಾದರೂ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಎಸ್ ಬಿ ಐ ನಲ್ಲಿ ಸಾಲದ ಅರ್ಜಿ ಸಲ್ಲಿಸಿದರೆ 8.75 ರಿಂದ 9.45% ಬಡ್ಡಿ ದರದ ಮೇಲೆ ಲೋನ್ ನೀಡುತ್ತಾರೆ.

advertisement

ಈ ಕೆಲಸ ಮಾಡಿದ್ರೆ ಕಡಿಮೆ ಬಡ್ಡಿಗೆ ಲೋನ್ ಸಿಗುತ್ತೆ?

SBI ತನ್ನ ಗ್ರಾಹಕರಿಗೆ ಕೊಡುಗೆಗಳೊಂದಿಗೆ ಕಾರಿನ ಸಾಲವನ್ನು ನೀಡುತ್ತಿದ್ದು, ನಿಮ್ಮ ಸಾಲದ ಕ್ರೆಡಿಟ್ ಸ್ಕೋರ್ (Credit Score) ಚೆನ್ನಾಗಿದ್ದಲ್ಲಿ SBI ವತಿಯಿಂದ ಅತಿ ಕಡಿಮೆ ಇಂಟರೆಸ್ಟ್ ರೇಟ್ ಮೇಲೆ ಸಾಲ ಮಂಜುರಾಗುವುದು. ಇದಕ್ಕೆ ಸಾಲ ಪಡೆಯುವಂತಹ ಗ್ರಾಹಕರ ಕ್ರೆಡಿಟ್ ಸ್ಕೋರ್ 750 ರಿಂದ 8೦೦ ಶ್ರೇಣಿಯಲ್ಲಿದ್ದಾರೆ, ಅತಿ ವೇಗವಾಗಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ದೊರುಕುತ್ತದೆ.

15 ಲಕ್ಷ ಕಾರಿನ ಸಾಲಕ್ಕೆ, ಪ್ರತಿ ತಿಂಗಳ EMI ಎಷ್ಟು?

 

Image Source: The Friday Mania

 

15 ಲಕ್ಷ ರೂಪಾಯಿ ಬೆಲೆಬಾಳುವಂತಹ ಕಾರ್ ಖರೀದಿಸಲು SBI ನಲ್ಲಿ ಸಾಲ (Car Loan) ಪಡೆದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ 8.85% ಕನಿಷ್ಠ ಬಡ್ಡಿಯನ್ನು ಹಾಕಲಾಗುತ್ತದೆ. ಇದರಿಂದಾಗಿ ನೀವು ಒಟ್ಟು ₹3,61,707 ಬಡ್ಡಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ, ಪ್ರತಿ ತಿಂಗಳು 31,028 ರೂಗಳನ್ನು EMI ರೂಪದಲ್ಲಿ 5 ವರ್ಷಗಳ ಕಾಲ ಪಾವತಿಸಬಹುದು.

advertisement

Leave A Reply

Your email address will not be published.