Karnataka Times
Trending Stories, Viral News, Gossips & Everything in Kannada

SBI Clerk Salary: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದಲ್ಲಿ ವರ್ಕ್ ಮಾಡುವ ಕ್ಲರ್ಕ್ ಗಳ ಸಂಬಳ ಎಷ್ಟು ಗೊತ್ತಾ?

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಭಾರತದ ಅತ್ಯಂತ ದೊಡ್ಡ ಸರ್ಕಾರಿ ಬ್ಯಾಂಕ್ ಆಗಿದ್ದು ಇದು ಇಡೀ ಭಾರತ ದೇಶದಲ್ಲಿ ಅತ್ಯಂತ ಹೆಚ್ಚು ಬ್ಯಾಂಕಿಂಗ್ ಗ್ರಾಹಕರನ್ನು ಹೊಂದಿರುವಂತಹ ಸಂಸ್ಥೆಯಾಗಿದೆ. ಇವತ್ತಿನ ಈ ಲೇಖನದ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಕೆಲಸ ಮಾಡುವಂತಹ ಕೆಲಸ ಮಾಡುವಂತಹ ಕ್ಲರ್ಕ್ ಗೆ ಎಷ್ಟು ಸಂಬಳ ಸಿಗುತ್ತದೆ ಎಂಬುದನ್ನು ತಿಳಿಯೋಣ ಬನ್ನಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಲರ್ಕ್ ಗೆ ಸಿಗುವಂತಹ ಸಂಬಳ:

 

Image Source: Scroll.in

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದಲ್ಲಿ ಕ್ಲರ್ಕ್ ಗಳು ಕೆಲಸಕ್ಕೆ ಅಧಿಕೃತವಾಗಿ ಸೇರುವ ಮುಂಚೆ ಕಲಿಕಾ ಅವಧಿಯಲ್ಲಿ ಅವರು ಕೆಲಸ ಮಾಡಬೇಕಾಗಿರುತ್ತದೆ. ಕನಿಷ್ಠ ಪಕ್ಷ 6 ತಿಂಗಳು ಅವಧಿಯಲ್ಲಿ ಅವರು ಬ್ಯಾಂಕಿಗಾಗಿ ಕೆಲಸ ಮಾಡಬೇಕಾಗಿರುತ್ತದೆ ಒಂದು ವೇಳೆ ಚೆನ್ನಾಗಿ ಪರ್ಫಾರ್ಮೆನ್ಸ್ ಮಾಡಿದರೆ ಅವರನ್ನು ಅಧಿಕೃತವಾಗಿ ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ ಇಲ್ಲವಾದಲ್ಲಿ ಇದು ಮುಂದುವರಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

advertisement

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ಲಾರ್ಕ್ ಗೆ ಸಿಗುವಂತಹ ತಿಂಗಳ ಸಂಬಳ ಎನ್ನುವುದು ಆತ ಯಾವ ಸ್ಥಳದಲ್ಲಿ ಕೆಲಸ ಮಾಡುತ್ತಾನೆ ಎನ್ನುವುದರ ಮೇಲೆ ಡಿಪೆಂಡ್ ಆಗಿರುತ್ತದೆ. ಹೀಗಾಗಿ ಲೆಕ್ಕಾಚಾರ ಮಾಡಿ ನೋಡುವುದಾದರೆ ಒಬ್ಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಕ್ಲರ್ಕ್ ಪ್ರತಿ ತಿಂಗಳಿಗೆ DA ಸೇರಿಸಿ 29 ಸಾವಿರ ರೂಪಾಯಿಗಳ ಸಂಬಳವನ್ನು ಪಡೆದುಕೊಳ್ಳುತ್ತಾನೆ ಇದು ಆರಂಭಿಕ ಸಂಬಳ ಆಗಿರುತ್ತದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೆ.

 

Image Source: Jagran Josh

 

ಸಾಮಾನ್ಯವಾಗಿ ಈ ಸಂಬಳ ಎನ್ನುವುದು 26,000 ದಿಂದ 29,000 ನಡುವೆ ಇರುತ್ತದೆ. ಮೊದಲೇ ಹೇಳಿರುವಂತೆ ಕ್ಲರ್ಕ್ ಗಳ ಈ ಸಂಬಳ ಎನ್ನುವುದು ಅವರು ಯಾವ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದರ ಮೇಲೆ ಕೂಡ ಡಿಪೆಂಡ್ ಆಗಿರುತ್ತದೆ ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾಗುತ್ತದೆ.

ಇದರ ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ಕ್ಲರ್ಕ್ ಗಳಿಗೆ ಮೆಡಿಕಲ್ ಖರ್ಚುಗಳಿಗೆ ಇನ್ಸೂರೆನ್ಸ್, ಮನೆಯ ಬಾಡಿಗೆಗೆ, ಟ್ರಾನ್ಸ್ಪೋರ್ಟ್ ಖರ್ಚುಗಳು, ಪೆಟ್ರೋಲ್ ನ್ಯೂಸ್ ಪೇಪರ್ ಈ ರೀತಿಯ ಭತ್ಯೆಗಳನ್ನು ಕೂಡ ನೀಡಲಾಗುತ್ತದೆ. ಇವಿಷ್ಟು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಒಬ್ಬ ಕ್ಲರ್ಕ್ ಪಡೆದುಕೊಳ್ಳುವಂತಹ ಸಂಭಾವನೆ ಹಾಗೂ ಆತನ ಕೆಲಸದಿಂದ ಪಡೆದುಕೊಳ್ಳುವಂತಹ ಲಾಭ ಹಾಗೂ ಬೆನಿಫಿಟ್ಸ್ ಗಳಾಗಿವೆ.

ಆತ ಪಡೆದುಕೊಳ್ಳುವಂತಹ ಸಂಭಾವನೆ ಎನ್ನುವುದು ಆತ ಕೆಲಸ ಮಾಡುತ್ತಿರುವಂತಹ ನಗರ ಅಂದ್ರೆ ಹೆಚ್ಚಿನ ಕಸ್ಟಮರ್ಗಳು ಹಾಗೂ ಹೆಚ್ಚಿನ ಗ್ರಾಹಕರು ಇದ್ದಷ್ಟು ಕೆಲಸ ಜಾಸ್ತಿ ಆಗಿರುತ್ತದೆ ಹಾಗೂ ಆರಂಭಿಕ ಸಂಬಳ ಕೂಡ ಹೆಚ್ಚಾಗಿರುತ್ತದೆ.

advertisement

Leave A Reply

Your email address will not be published.