Karnataka Times
Trending Stories, Viral News, Gossips & Everything in Kannada

State Bank Of India: 400 ದಿನಗಳವರೆಗೆ ಬ್ಯಾಂಕಿನಲ್ಲಿ ಹಣ ಇಡುವವರಿಗೆ ಸಿಹಿಸುದ್ದಿ ಕೊಟ್ಟ ಸ್ಟೇಟ್ ಬ್ಯಾಂಕ್! ಮುಗಿಬಿದ್ದ ಮಹಿಳೆಯರು

advertisement

SBI special FD:  ಫಿಕ್ಸೆಡ್ ಡೆಪಾಸಿಟ್ ವರ್ಗದಲ್ಲಿ ಅತ್ಯಾಕರ್ಷಕ ಕೊಡುಗೆ ಹಾಗು ಹೆಚ್ಚಿನ ಆದಾಯವನ್ನು ನೀಡುವ ಮೂಲಕ ತನ್ನ ಗ್ರಾಹಕರನ್ನು ಸೆಳೆಯುತ್ತಿರುವಂತಹ ಎಸ್‌ಬಿಐ, ಕೆಲ ತಿಂಗಳ ಹಿಂದೆ ಎಸ್‌ಬಿಐ ಅಮ್ರಿತ್ ಕಲಾಶ್(SBI Amrit Kalash) ಯೋಜನೆಯನ್ನು ಜಾರಿಗೊಳಿಸಿತ್ತು. ಬ್ಯಾಂಕ್ ಈವರೆಗೂ ಬರೋಬ್ಬರಿ ನಾಲ್ಕು ಬಾರಿ ತನ್ನ ಗಡುವಿನ ದಿನಾಂಕವನ್ನು ಮುಂದೂಡುತ್ತಾ ಬಂದಿದೆ ಇದರಿಂದಾಗಿ ಹೂಡಿಕೆದಾರರು ನಿರೀಕ್ಷೆಗಿಂತ ಹೆಚ್ಚಿನ ಬಡ್ಡಿ ದರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದ್ದರಿಂದ ಈ 400 ದಿನದ FD (Fixed Deposit) ಯೋಜನೆಯು ಹೂಡಿಕೆ ಮಾಡುವವರ(investors) ಸಂಖ್ಯೆ ಭಾರಿ ಹೆಚ್ಚಳ ಕಂಡಿದೆ.

ಕೇವಲ 400 ದಿನದ ಹೂಡಿಕೆಗೆ 7%ಗೂ ಅಧಿಕ ಬಡ್ಡಿ

ಪ್ರತಿಯೊಬ್ಬರಿಗೂ ತಾವು ದುಡಿದ ಹಣವನ್ನು ಮುಂದಿನ ದಿನಮಾನಗಳಿಗೆ ಉಳಿಸಬೇಕು ಅಥವಾ ಹೆಚ್ಚಿನ ಆದಾಯ ಬರುವಂತಹ ಜಾಗಗಳಲ್ಲಿ ಅದನ್ನು ಹೂಡಿಕೆ ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಗ್ರಾಹಕರ ಇಷ್ಟಾರ್ಥಗಳನ್ನು ಅರಿತುಕೊಂಡಿರುವಂತಹ ಬ್ಯಾಂಕ್, ಫಿಕ್ಸೆಡ್ ಡೆಪಾಸಿಟ್(fixed deposit) ಎಂಬ ಸ್ಕೀಮ್ ಅನ್ನು ಜಾರಿಗೊಳಿಸಿ ಜನರ ಹಣಕ್ಕೆ ಸುರಕ್ಷತೆಯನ್ನು ಒದಗಿಸುವುದರ ಜೊತೆಗೆ ಅದ್ಭುತ ಆದಾಯವನ್ನು ಬಡ್ಡಿ ರೂಪದಲ್ಲಿ ನೀಡುತ್ತಿದೆ.

amrut kalash yojana
Image Source: Deccan Herald

advertisement

ಅದರಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(State Bank of India) ಅಮ್ರಿತ್ ಕಲಷ್ ಎಂಬ ಮತ್ತೊಂದು ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ ಅನ್ನು ಜಾರಿಗೊಳಿಸಿದ್ದು, ಈ ಯೋಜನೆಯ ಅಡಿ ನಿಮ್ಮ ಹಣವನ್ನು ಕೇವಲ 400 ದಿನಗಳವರೆಗೂ ಮಾತ್ರ ಹೂಡಿಕೆ ಮಾಡಿ ಏಳು ಪರ್ಸೆಂಟ್ಗಿಂತ ಹೆಚ್ಚಿನ ಬಡ್ಡಿ ಹಣವನ್ನು ಪಡೆಯಬಹುದು.

ಸಾಮಾನ್ಯರಿಗಿಂತ ಹಿರಿಯ ನಾಗರಿಕರಿಗೆ ೦.5% ಹೆಚ್ಚಿನ ಬಡ್ಡಿ

ಎರಡು ಕೋಟಿಯವರೆಗೂ ಹೂಡಿಕೆ ಮಾಡಬಹುದಾದಂತಹ SBI ನ ಅಮ್ರಿತ್ ಕಲಾಷ್ ಸ್ಕೀಮ್ ನ ಅಡಿಯಲ್ಲಿ ಸಾಮಾನ್ಯ ನಾಗರಿಕರ ಹೂಡಿಕೆಗೆ ಶೇಕಡ 7.1% ನಷ್ಟು ಬಡ್ಡಿ ಹಣ ದೊರಕುತ್ತಿದೆ. ಅದರಂತೆ ಹಿರಿಯ ನಾಗರಿಕರಿಗೆ 0.5% ನಷ್ಟು ಹೆಚ್ಚುವರಿ ಬಡ್ಡಿ ಅಂದರೆ 7.6% ಬಡ್ಡಿ ಹಣವನ್ನು ಬ್ಯಾಂಕ್ ನೀಡುತ್ತಿದೆ.

ಇನ್ನು ಪದೇಪದೇ SBI ಈ ಯೋಜನೆಯ ಗಡುವಿನ ದಿನಾಂಕವನ್ನು ಮುಂದೂಡುತ್ತಿದ್ದು, ಇದರ ಮುಕ್ತಾಯ ಬಡ್ಡಿ ಮತ್ತು TDS(maturity interest and TDS) ಹಣವನ್ನು ನಿಮ್ಮ ಖಾತೆಗೆ ಠೇವಣಿ ಮಾಡುತ್ತಾರೆ. ಜೊತೆಗೆ ನಿಮ್ಮ ಹಣಕ್ಕೆ ಆದಾಯ ತೆರಿಗೆಯ ಕಾಯ್ದೆಯಡಿ(income tax act) ಅನ್ವಯವಾಗುವ ದರದಲ್ಲಿ TDS ಅನ್ನು ವಿಧಿಸಲಾಗುತ್ತದೆ.

advertisement

Leave A Reply

Your email address will not be published.