Karnataka Times
Trending Stories, Viral News, Gossips & Everything in Kannada

Congress: ಲೋಕಸಭಾ ಎಲೆಕ್ಷನ್ ಗು ಮುನ್ನ ಇನ್ನೊಂದು ಗ್ಯಾರಂಟಿ ಘೋಷಣೆ ಮಾಡಿದ ಕಾಂಗ್ರೆಸ್! ಸಂತಸದಲ್ಲಿ ಮಹಿಳೆಯರು

advertisement

Congress Manifesto for 2024 Elections Released: ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ನಡೆಯಲು ಬಾಕಿ ಇದೆ‌. ಈಗಾಗಲೇ ಕಾಂಗ್ರೆಸ್ ಸರಕಾರ ಕೇಂದ್ರ ಸರಕಾರದಲ್ಲಿ ತಮ್ಮ ಆಡಳಿತ ಬಂದರೆ ಏನೆಲ್ಲ ಅಂಶ ಸುಧಾರಣೆ ಮಾಡ್ತೇವೆ ಯಾವೆಲ್ಲ ನೂತನ ಯೋಜನೆ ಜಾರಿಗೆ ತರ್ತೇವೆ ಎಂಬುದನ್ನು ತಿಳಿಸಿತ್ತು. ಈಗ ನೂತನ ಯೋಜನೆ ಒಂದನ್ನು ಜಾರಿಗೆ ತರುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಸರಕಾರ ಮುಂದಿಟ್ಟಿದ್ದು ಈ ವಿಚಾರ ಸದ್ಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗ್ತಾ ಇದೆ ಎಂದು ಹೇಳಬಹುದು.

ಗ್ಯಾರೆಂಟಿ ಪ್ರಣಾಳಿಕೆ
ಕಾಂಗ್ರೆಸ್ ಸರಕಾರವು ಮುಂಬರುವ ಚುನಾವಣೆಯಲ್ಲಿ ಲೋಕಸಭೆ ಅವಧಿಗೆ ಕಾಂಗ್ರೆಸ್ ಸರಕಾರ ಬಂದರೆ ಏನು ಕ್ರಮ ಜಾರಿಗೆ ತರ್ತೇವೆ ಎಂಬುದರ ಬಗ್ಗೆ ತಿಳಿಸಿತ್ತು. ಅದೆ ರೀತಿ (Karnataka & Telangana) ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಕಳೆದ ಚುನಾವಣೆಯಲ್ಲಿ ಜಯಗಳಿಸಿದ್ದ ಸೂತ್ರವನ್ನೇ ಈಗ ಲೋಕಸಭೆಗೆ ಅಪ್ಲೈ ಮಾಡಲಾಗುತ್ತಿದೆ. ಗ್ಯಾರೆಂಟಿ ಯೋಜನೆಯ (Guarantee  yojana) ಭರವಸೆ ನೀಡುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಕೇಂದ್ರದ ಅಧಿಕಾರ ಕಾಂಗ್ರೆಸ್ ಪಾಲಾದರೆ 25 ಗ್ಯಾರೆಂಟಿ ಯನ್ನು ಸಮಾಜಕ್ಕೆ ನೀಡುವುದಾಗಿ ತಿಳಿಸಿದೆ.

ಮಹಾಲಕ್ಷ್ಮೀ ಫುಲ್ ಫೇಮಸ್
ಮಹಾಲಕ್ಷ್ಮೀ ಯೋಜನೆಯ ಅಡಿಯಲ್ಲಿ ಬಡವರ್ಗದ ಕುಟುಂಬಕ್ಕೆ 1ಲಕ್ಷ ರೂಪಾಯಿ ವಾರ್ಷಿಕ ವಿತರಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಸರಕಾರವು ತನ್ನ ಪ್ರಣಾಳಿಕೆ ವೇಳೆಯಲ್ಲಿ ತಿಳಿಸಿದ್ದು ರಾಜ್ಯದಲ್ಲಿ ಗೃಹಲಕ್ಷ್ಮೀ ಇರುವಂತೆ ರಾಷ್ಟ್ರೀಯ ಮಟ್ಟದಲ್ಲಿ ಮಹಾಲಕ್ಷ್ಮೀ ಬರುತ್ತೆ ಎಂದು ಅನೇಕ ವರ್ಗದವರು ಕಾಯುತ್ತಿದ್ದಾರೆ. ಹೀಗೆ ಮತದಾರರನ್ನು ಸೆಳೆಯುವ ಸಲುವಾಗಿ ಬರೋಬ್ಬರಿ 25 ಪ್ರಣಾಳಿಕೆಯ ಗ್ಯಾರೆಂಟಿ ಯೋಜನೆಯನ್ನು ಕಾಂಗ್ರೆಸ್ ಸರಕಾರ ಹೊರಡಿಸಿದೆ.

advertisement

congress guarantees new
Image Source: Livemint

ಶಿಕ್ಷಣಕ್ಕೆ ಅಧಿಕ ಒತ್ತು?
ಕಾಂಗ್ರೆಸ್ ಸರಕಾರದ ಪ್ರಣಾಳಿಕೆಯಲ್ಲಿ ಈ ಬಾರಿ ಶಿಕ್ಷಣಕ್ಕೆ ಅಧಿಕ ಒತ್ತು ನೀಡಿರುವುದನ್ನು ನಾವು ಕಾಣಬಹುದು. 25ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ವಾರ್ಷಿಕ ಒಂದು ಲಕ್ಷ ರೂಪಾಯಿ ನೀಡುವ ಸ್ಟೈ ಫಂಡ್ ಭರವಸೆಯನ್ನು ಕಾಂಗ್ರೆಸ್ ಸರಕಾರ ನೀಡಿದೆ, ಶೈಕ್ಷಣಿಕ ಸಾಲ ಮನ್ನಾ, ಉಚಿತ ಶಿಕ್ಷಣ ನೀಡುವುದನ್ನು ಕೂಡ ತನ್ನ ಗ್ಯಾರೆಂಟಿ ಯೋಜನೆಯ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಉಚಿತ ಮೊಬೈಲ್ ಫೋನ್

ಇತ್ತೀಚಿನ ಕಾಂಗ್ರೆಸ್ ಸರಕಾರದ ಟ್ವಿಟರ್ ಎಕ್ಸ್ ಹಾಗೂ ಇತರ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಉದ್ದೇಶ ಈಡೇರಿಕೆಗೆ ಉಚಿತ ಮೊಬೈಲ್ ಫೋನ್ ನೀಡುವ ಭರವಸೆಯನ್ನು ಮುಂದಿಟ್ಟಿದೆ. 9 ರಿಂದ 12 ನೇ ತರಗತಿ ವರೆಗಿನ ಮಕ್ಕಳಿಗೆ ಕಲಿಕೆಯ ಪರಿಕರ ಎಂಬ ರೂಪದಲ್ಲಿ ಮೊಬೈಲ್ ಫೋನ್ ನೀಡುವುದಾಗಿ ತಿಳಿಸಲಾಗಿದೆ. ಹಾಗಾಗಿ ಈ ಎಲ್ಲ ಗ್ಯಾರೆಂಟಿ ಯೋಜನೆ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಕೈ ಎತ್ತಿ ಹಿಡಿಯಲಿದೆಯಾ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.