Karnataka Times
Trending Stories, Viral News, Gossips & Everything in Kannada

HSRP number plate: ಇದುವರೆಗೆ HSRP ನಂಬರ್ ಪ್ಲೇಟ್ ಹಾಕದವರಿಗೆ ಹೊಸ ಸೂಚನೆ! RTO ಕೊನೆ ಕ್ಷಣದಲ್ಲಿ ಆದೇಶ

advertisement

Beware of new HSRP number plate cyber frauds:  ಸದ್ಯಕ್ಕೆ ಇಡೀ ಕರ್ನಾಟಕದಲ್ಲಿ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಬೇಕು ಎನ್ನುವ ಕಾರಣಕ್ಕಾಗಿ ಪ್ರತಿಯೊಬ್ಬ ವಾಹನ ಮಾಲಕರು ರಿಜಿಸ್ಟರ್ ಮಾಡಿಕೊಳ್ಳುವತ್ತ ಮಗ್ನ ರಾಗಿದ್ದಾರೆ. ಸರ್ಕಾರ ಈಗಾಗಲೇ ಮೇ 31ರವರೆಗೆ ಕೂಡ ಕೊನೆಯ ದಿನಾಂಕ ಎನ್ನುವ ರೀತಿಯಲ್ಲಿ ಗಡುವನ್ನು ನಿಗದಿಪಡಿಸಿದೆ. ಗಡುವಿನ ಒಳಗೆ ಈ ಕೆಲಸವನ್ನು ಮುಗಿಸಿ ಬಿಡಬೇಕು ಎನ್ನುವ ಕಾರಣಕ್ಕಾಗಿ ಕೆಲವು ವಾಹನ ಸವಾರರು ದೊಡ್ಡ ತಪ್ಪನ್ನು ಮಾಡಲು ಹೋಗುತ್ತಿದ್ದಾರೆ. ಅದರ ಬಗ್ಗೆನೇ ಬನ್ನಿ ಇವತ್ತಿನ ಈ ಲೇಖನದಲ್ಲಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳೋಣ.

HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಳ್ಳಲು ಹೋಗಿ ಅವಾಂತರ ಮಾಡಿಕೊಳ್ಳುತ್ತಿದ್ದಾರೆ

HSRP ನಂಬರ್ ಪ್ಲೇಟ್ ಈಗಾಗಲೇ ಕಡ್ಡಾಯ ಎನ್ನುವುದಾಗಿ ರಾಜ್ಯದಲ್ಲಿ ಎಲ್ಲಾ ಕಡೆ ನಿಯಮಗಳು ಜಾರಿಯಾಗಿರುವುದು ನಿಮಗೇನು ಹೊಸದಾಗಿ ತಿಳಿದಿರುವ ವಿಚಾರ ಅಲ್ಲ ಬಿಡಿ. ಈ ಹಿಂದೆ ಮಾರ್ಚ್ ತಿಂಗಳ ಕೊನೆಯ ದಿನಾಂಕವನ್ನು HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳುವುದಕ್ಕೆ ಕೊನೆಯ ದಿನಾಂಕ ಎಂಬುದಾಗಿ ನಿಗದಿಪಡಿಸಲಾಗಿತ್ತು ಆದರೆ ಎಂದಿನಂತೆ ನಮ್ಮ ಜನರು ಈ ಬಾರಿ ಕೂಡ ಸರಿಯಾದ ಸಮಯಕ್ಕೆ ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಕೊಳ್ಳುವುದಕ್ಕೆ.

ಅದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ಈ ದಿನಾಂಕವನ್ನು ಈಗ ಮೇ 31ಕ್ಕೆ ನಿಗದಿಪಡಿಸಿದೆ. ಅಧಿಕೃತ ವೆಬ್ ಸೈಟ್ ಗೆ ಹೋಗಿ ರಿಜಿಸ್ಟರ್ ಮಾಡಿಕೊಂಡರೆ ನೀವು ವಾಹನವನ್ನು ಖರೀದಿ ಮಾಡಿರುವಂತಹ ಶೋರೂಂಗೆ ಈ ನಂಬರ್ ಪ್ಲೇಟ್ ಬರುತ್ತದೆ. ಅಲ್ಲಿಂದ ಹೋಗಿ ನೀವು ಇದನ್ನು ನಿಮ್ಮ ವಾಹನ ಕೇಳವಳಿಸಿಕೊಳ್ಳಬೇಕಾಗಿರುತ್ತದೆ.

advertisement

hsrp new rules
Image Credit: NDTV

ಪ್ರತಿದಿನ ಈ ಸರ್ವರ್ ಅನ್ನು ಸಾಕಷ್ಟು ಜನರು ಬಳಕೆ ಮಾಡುತ್ತಾರೆ. ಹೀಗಾಗಿ ಇದರ ಲಾಭವನ್ನು ಕೆಲವು ಕಿಡಿಗೇಡಿಗಳು ಉಪಯೋಗಿಸಿಕೊಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಇದರಿಂದಾಗಿ ಪ್ರತಿಯೊಬ್ಬರು ಕೂಡ ಜಾಗರೂಕರಾಗಬೇಕಾಗಿರೋದು ಅತ್ಯಂತ ಅಗತ್ಯವಾಗಿದೆ. ನಿಮಗೆ ಗೊತ್ತಿಲ್ಲದೇನೇ, ನೀವು ಈ ಕಿಡಿಗೇಡಿಗಳಿಗೆ ಹಣ ನೀಡ್ತಾ ಇದ್ದೀರಾ. ಹೌದು ನೀವು ನಂಬದೇ ಇದ್ದರೂ ಕೂಡ ಈ ರೀತಿ ನೀವು ಮಾಡುತ್ತಿರುವಂತಹ ಸಾಧ್ಯತೆ ಇದೆ.

ನಿಮ್ಮ ಕೈಯಿಂದ ಕಿಡಿಗೇಡಿಗಳಿಗೆ ಹೋಗ್ತಾ ಇದೆ ಹಣ

HSRP ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡಿಸಿಕೊಳ್ಳುವಂತಹ ವೆಬ್ಸೈಟ್ ಸಾಕಷ್ಟು ಟ್ರಾಫಿಕ್ ಕಾರಣದಿಂದಾಗಿ ಆಗಾಗ ಸೈಟ್ ಕ್ರ್ಯಾಶ್ ಆಗುವಂತಹ ಸಾಧ್ಯತೆ ಇರುತ್ತದೆ. ಇದೇ ಸಂದರ್ಭದಲ್ಲಿ ಮೋಸ ಮಾಡುತ್ತಿರುವಂತಹ ಸ್ಕ್ಯಾಮರ್ಸ್ ಗಳು ತಮ್ಮದೇ ಆಗಿರುವಂತಹ ವೆಬ್ಸೈಟ್ ಅನ್ನು ಗೂಗಲ್ ನಲ್ಲಿ ಬೂಸ್ಟ್ ಮಾಡಿಸಿ ಅದನ್ನೇ ನಿಜವಾದ ವೆಬ್ ಸೈಟ್ ಎನ್ನುವ ರೀತಿಯಲ್ಲಿ ಪ್ರತಿಯೊಬ್ರು ಕ್ಲಿಕ್ ಮಾಡಿದಾಗ ಮೊದಲಿಗೆ ಕಾಣಿಸಿಕೊಳ್ಳುವ ಹಾಗೆ ಮಾಡುತ್ತಾರೆ.

ಸಾಮಾನ್ಯರು ಇದನ್ನೇ ನಿಜವಾದ HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಸಿಕೊಳ್ಳುವಂತಹ ವೆಬ್ ಸೈಟ್ ಎಂಬುದಾಗಿ ತಿಳಿದು ರಿಜಿಸ್ಟರ್ ಮಾಡಿಸಿಕೊಳ್ಳೋದಕ್ಕೆ ಹೋಗ್ತಿದ್ದಾರೆ. ಎಲ್ಲ ಮಾಹಿತಿಗಳನ್ನು ಸಬ್ಮಿಟ್ ಮಾಡಿದ ನಂತರ ಇದರಲ್ಲಿ ಹಣವನ್ನು ಪಾವತಿ ಮಾಡೋದಕ್ಕೆ ಕ್ಯೂಆರ್ ಸ್ಕ್ಯಾನ್ ಕೋಡ್ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈ ಸ್ಕ್ಯಾಮ್ ನಿಂದ ನೀವು ಬಚಾವ್ ಆಗಿ. https://bookmyhsrp.com/ ಇದು ನಿಜವಾದ ಅಧಿಕೃತ ಸರ್ಕಾರಿ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗಿ ನಿಮ್ಮ HSPR ನಂಬರ್ ಪ್ಲೇಟ್ ಅನ್ನು ರಿಜಿಸ್ಟರ್ ಮಾಡುವಂತಹ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಿ.

advertisement

Leave A Reply

Your email address will not be published.