Karnataka Times
Trending Stories, Viral News, Gossips & Everything in Kannada

Best  mileage Bikes: ಒಮ್ಮೆ ಫುಲ್ ಟ್ಯಾಂಕ್ ಮಾಡಿದರೆ 600Km ವರೆಗೆ ಓಡುತ್ತೆ ಈ 7 ಕಡಿಮೆ ಬೆಲೆಯ ಬೈಕುಗಳು! ಮುಗಿಬಿದ್ದ ಜನ

advertisement

Best  mileage Bikes: ನೀವೇನಾದರೂ ಅಗ್ಗದ  ಬೆಲೆಯಲ್ಲಿ ಅದ್ಭುತ ಮೈಲೇಜ್ ನೀಡುವಂತಹ ಬೈಕನ್ನು ಎದುರು ನೋಡುತ್ತಿದ್ದರೆ, ನಾವಿವತ್ತು ಪಟ್ಟಿ ಮಾಡೋ ಹೊರಟಿರುವ ಬೈಕ್ಗಳು ದಿ ಬೆಸ್ಟ್ ಆಯ್ಕೆ ಎನ್ನಬಹುದು. ಈ ಬೈಕ್ಗಳಿಗೆ ಒಮ್ಮೆ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದರೆ ಸಾಕು ಬರೋಬ್ಬರಿ 600 ಕಿಲೋಮೀಟರ್ ನಷ್ಟು ಮೈಲೇಜ್ ಕೊಡುವಂತಹ ಸಾಮರ್ಥ್ಯವನ್ನು ಹೊಂದಿದೆ.

ಹೀರೋ HF ಡೀಲಕ್ಸ್(Hero HF Deluxe)

ಗ್ರಾಹಕರ ಕೈಗೆಟಕುವ ಬೆಲೆಗೆ ದೊರಕುತ್ತಿರುವಂತಹ ಹೀರೋ HF ಡೀಲಕ್ಸ್ ಬೈಕ್ ಅದ್ಭುತಗಳು ವೈಶಿಷ್ಟ್ಯತೆ ಹಾಗೂ ಕಾರ್ಯ ವೈಕರಿಯಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಬಾರಿ ಜನಪ್ರಿಯತೆ ಪಡೆದುಕೊಂಡಿದ್ದು, ಕೇವಲ ₹59,998ಕ್ಕೆ ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿರುವಂತಹ ಈ ಬೈಕ್ ಒಂದು ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 7Km ಮೈಲೇಜ್ ನೀಡಲಿದೆ, ಅದರಂತೆ ಒಮ್ಮೆ ಫುಲ್ ಟ್ಯಾಂಕ್ (9.6L) ಪೆಟ್ರೋಲ್ ಹಾಕಿಸಿದರೆ ಬರೋಬ್ಬರಿ 672 ಕಿಲೋಮೀಟರ್ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೋಂಡಾ ಎಸ್ಪಿ 125(Honda SP 125)

86,017ರೂಗಳ ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿರುವಂತಹ ಹೋಂಡಾ ಎಸ್ ಪಿ ಎಫ್ ಅದ್ಭುತ ಮೈಲೇಜ್ ಸಾಮರ್ಥ್ಯದಿಂದಾಗಿ ಬಾರಿ ಜನಪ್ರಿಯತೆ ಪಡೆದಿದ್ದು ಪ್ರತಿ ಲೀಟರ್ ಪೆಟ್ರೋಲ್ ಗೆ ಬರೋಬ್ಬರಿ 65 ಕಿ.ಮೀ ನೆಕ್ಸ್ಟ್ ಮೈಲೇಜ್ ಕೊಡುವಂತಹ ಈ ಬೈಕ್ನ ಇಂಧನದ ಟ್ಯಾಂಕ್ ನಲ್ಲಿ ಬರೋಬ್ಬರಿ 11.2 ಲೀಟರ್ ಪೆಟ್ರೋಲ್ ಹಿಡಿಸಲಿದ್ದು ಇದು 728 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೋಂಡಾ ಲಿವೋ(Honda livo)

ಜಪಾನ್ ಮಾದರಿಯ ಮೋಟರ್ಸ್ ಸೈಕಲ್ ಇದಾಗಿದ್ದು, ಕೇವಲ 78,500 ರೂಗಳ ಎಕ್ಸ್ ಶೋರೂಮ್ ಬೆಲೆಗೆ ಲಭ್ಯವಿರುವಂತಹ ಈ ಬೈಕ್ 74 Kph ಮೈಲೇಜ್ ನೀಡುತ್ತದೆ ಹಾಗೂ 9 ಲೀಟರ್ ಪೆಟ್ರೋಲ್ ಹಿಡಿಸುವಷ್ಟು ಇಂಧನದ ಟ್ಯಾಂಕನ್ನು ಹೊಂದಿರುವ ಹೋಂಡಾ ಲಿವೋ, 666 km ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

mileage bikes best
Image Source: The Week

advertisement

ಬಜಾಜ್ ಪ್ಲಾಟಿನಾ(Bajaj platina)

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಬಜಾಜ್ ಪ್ಲಾಟಿನಾದ ಆರಂಭಿಕ ಬೆಲೆಯು 67,808ರೂಗಳಿದ್ದು, 11 ಲೀಟರ್ ಇಂಧನ ಹಿಡಿಸುವ ಟ್ಯಾಂಕ್ ಹೊಂದಿರುವ ಈ ಬೈಕ್ 803 Km ವ್ಯಾಪ್ತಿ ತಲುಪುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಪ್ರತಿ ಲೀಟರ್ ಪೆಟ್ರೋಲ್ಗೆ 73 km ಮೈಲೇಜ್ ನೀಡುತ್ತದೆ.

ಟಿವಿಎಸ್ ಸ್ಪೋರ್ಟ್ಸ್(TVS sports)

ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವಂತಹ ಬೈಕ್ ಇದಾಗಿದ್ದು, ಕೇವಲ 59,431ರೂಗಳಿಗೆ ಎಕ್ಸ್ ಶೋರೂಮ್ನಲ್ಲಿ ಇದರ ಆರಂಭಿಕ ಬೆಲೆ ಶುರುವಾಗುತ್ತದೆ. ಟಿವಿಎಸ್ ಸ್ಪೋರ್ಟ್ಸ್ನಲ್ಲಿ ಹತ್ತು ಲೀಟರ್ ಇಂಧನವನ್ನು ಹಿಡಿಸುವ ಪೆಟ್ರೋಲ್ ಟ್ಯಾಂಕ್ ಇದ್ದು, ಒಮ್ಮೆ ಫುಲ್ ಟ್ಯಾಂಕ್ ಮಾಡಿಸಿದರೆ 750 Km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಪ್ರತಿ ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 75 ಕಿ.ಮೀ ದೂರವನ್ನು ತಲುಪುತ್ತದೆ.

ಹೀರೋ ಸ್ಪ್ಲೆಂಡರ್ ಪ್ಲಸ್ XTEC(Hero Splendor Plus XTEC)

ತನ್ನ ಅದ್ಭುತ ಮೈಲೇಜ್ ಸಾಮರ್ಥ್ಯದಿಂದ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಹೀರೋ ಸ್ಪ್ಲೆಂಡರ್ ಪ್ಲಸ್ XTEC, ಪ್ರತಿ ಲೀಟರ್ ಪೆಟ್ರೋಲ್ಗೆ 83.2 km ಹಾಗೂ ಒಮ್ಮೆ 9.8 ಲೀಟರ್ ಇಂಧನವನ್ನು ಭರ್ತಿ ಮಾಡಿದರೆ ಬರೋಬ್ಬರಿ 815 km ವ್ಯಾಪ್ತಿಯನ್ನು ತಲುಪುವ ಸಾಮರ್ಥ್ಯ ಹೊಂದಿರುವ ಈ ಬೈಕ್ ಶೋರೂಮ್ನಲ್ಲಿ ಕೇವಲ 79,911 ರೂಗಳಿಗೆ ಲಭ್ಯವಿದೆ.

ಹೀರೋ ಸೂಪರ್ ಸ್ಪ್ಲೆಂಡರ್ XTEC(Hero super Splendor XTEC)

12 ಲೀಟರ್ ಇಂಧನ ಹಿಡಿಸುವ ಫ್ಯುಯಲ್ ಟ್ಯಾಂಕ್ ಹೊಂದಿರುವ ಈ ಬೈಕ್ ಬರೋಬ್ಬರಿ 816km ಮೈಲೇಜ್ ನೀಡಲಿದೆ ಹಾಗೂ ಪ್ರತಿ ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 68 km ವ್ಯಾಪ್ತಿಯನ್ನು ತಲುಪುತ್ತದೆ, ಆಧುನಿಕ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಸೂಪರ್ ಹೀರೋ ಸ್ಪ್ಲೆಂಡರ್ XTECನ ಬೆಲೆಯು ₹85,178 ನಿಂದ ಪ್ರಾರಂಭವಾಗುತ್ತಿದೆ.

advertisement

Leave A Reply

Your email address will not be published.