Karnataka Times
Trending Stories, Viral News, Gossips & Everything in Kannada

Karnataka Draught Relief: ಬೆಳೆ ವಿಮೆ ಹಣಕ್ಕಾಗಿ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್! ಈ ಜಿಲ್ಲೆಗೆ ಬಂದಾಯ್ತು ಹಣ

advertisement

Karnataka Draught Relief 2024:  ಬರಗಾಲದ ಬಿಸಿ ದಿನೇ ದಿನೇ ಹೆಚ್ಚಾಗುತ್ತಿದೆ‌. ಬರಗಾಲ ಬಂದಿದೆ ಎಂದು ಕಂಗಾಲಾಗುವ ಜನರಿಗೆ ಇನ್ನೊಂದೆಡೆ ಸರಿಯಾಗಿ ಬೆಳೆ ಸಿಗುತ್ತಿಲ್ಲ ಬರಗಾಲ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ ಎಂಬ ಚಿಂತೆಯಲ್ಲಿ ಇದ್ದಾರೆ. ಈ ನಡುವೆ ಅತ್ತ ಬರಗಾಲ ಇತ್ತ ಬೆಳೆ ಬಂದಿಲ್ಲ ಸರಕಾರದ ಪರಿಹಾರ ಧನವೂ ಬಂದಿಲ್ಲ ಎಂದು ಕಾದು ಕುಳಿತ ಜನರಿಗೆ ಇಲ್ಲೊಂದು ಶುಭ ಸುದ್ದಿ ಕಾದಿದೆ. ಈ ಮೂಲಕ ರೈತರಿಗೆ ಬರ ಪರಿಹಾರ ಬರುವ ದಿನಾಂಕ ಘೋಷಣೆ ಆಗುತ್ತಿದೆ.

ಯಾವಾಗ ಬರುತ್ತೆ?
ಬೆಳೆ ವಿಮಾ ಪರಿಹಾರ ಮೊತ್ತ ಯಾವಾಗ ಬರುತ್ತೆ ಎಂದು ಕಾದವರಿಗೆ ಇಂದು ಬೆಳ್ಳಂಬೆಳಗ್ಗೆ ಶುಭ ಸುದ್ದಿ ಸಿಗುತ್ತಿದೆ. ಯುಗಾದಿ ಹಬ್ಬದಂದೆ ರೈತರ ಖಾತೆಗೆ ಹಣ ಜಮೆ ಆಗಲಿದೆ ಎಂಬ ಶುಭ ಸುದ್ದಿ ಸಿಕ್ಕಿದೆ.ಹಾಗಾಗಿ ಶೀಘ್ರವೇ ಈ ಒಂದು ಬರಗಾಲ ಪರಿಹಾರ ಮೊತ್ತ ರೈತರ ಖಾತೆಗೆ ಜಮೆ ಆಗುವ ಕಾರಣ ಅವರಿಗೆ ಆರ್ಥಿಕ ಸಹಕಾರ ದೊರೆತಂತಾಗುವುದು.

What are the government schemes for drought?What is the drought relief fund in Karnataka?
Image Credit: tv9

advertisement

ಪರಿಹಾರ ಮೊತ್ತ ಜಮೆ
ಈಗಾಗಲೇ ರಾಜ್ಯದ ಕೆಲವು ಭಾಗದಲ್ಲಿ ಬರ ಪರಿಹಾರವನ್ನು ಘೋಷಣೆ ಮಾಡಲಾಗಿತ್ತು ಬಳಿಕ ಕಳೆದ ನಾಲ್ಕು ದಿನಗಳಿಂದ 2023-24ನೇ ಸಾಲಿನ ಪ್ರಧಾನ ಮಂತ್ರಿ ಬೆಳೆ ವಿಮಾ ಪರಿಹಾರ ಮೊತ್ತವನ್ನು ಜಮೆ ಮಾಡಲಾಗುತ್ತಿದೆ. ಕಳೆದ ಮುಂಗಾರು ಮಳೆ ಅವಧಿಯಲ್ಲಿ ಮೆಕ್ಕೆಜೋಳ, ಶೇಂಗಾ ಹಾಗೂ ಇತರ ಬೆಳೆ ನಾಶ ಆದ ಹಿನ್ನೆಲೆಯಲ್ಲಿ ಆಯಾ ಪ್ರದೇಶದ ಪ್ರಮುಖ ಬೆಳೆಗಳಿಗೆ ವಿಮೆ ಕಂತು ಪಾವತಿ ಮಾಡಲಾಗುತ್ತಿದೆ. ಬರಗಾಲದ ಪರಿಹಾರ ಮೊತ್ತಕ್ಕಾಗಿ ಅರ್ಜಿ ಹಾಕಿದ್ದವರ ಪೈಕಿ ಬಹುತೇಕರಿಗೆ ಇದೇ ಯುಗಾದಿ ಆಸು ಪಾಸಿಗೆ ಹಣ ಮಂಜೂರು ಆಗಲಿದೆ.

ಎಷ್ಟು ಕೋಟಿ ಬಿಡುಗಡೆ

ಬರಗಾಲದಲ್ಲಿ ಕಂಗಾಲಾದ ಜನರಿಗೆ ಯುಗಾದಿಯ ಹೊತ್ತಲ್ಲಿ ಈಗ ಶುಭ ಸುದ್ದಿ ಸಿಗುತ್ತಿದೆ. ಯುಗಾದಿ ಹೊತ್ತಲ್ಲಿ ವಿಮೆ ಮೊತ್ತ ಜಮೆ ಆಗಲಿದ್ದು ಇದುವರೆಗೆ ಚಿತ್ರದುರ್ಗದ ಆಸು ಪಾಸಿನಲ್ಲಿ ಹಣ ಜಮೆ ಆಗಿದೆ ಎಂದು ಸರಕಾರಿ ಮೂಲಗಳು ತಿಳಿಸಿದೆ. 284 ಕೋಟಿ ರೂಪಾಯಿ ಪರಿಹಾರ ಮೊತ್ತ ಬಿಡುಗಡೆ ಆಗುತ್ತಿದೆ. ಕೇಂದ್ರದ ಮೊತ್ತ ಜಮೆ ಆಗಲು ಬಾಕಿ ಇದೆ ಈಗ ರಾಜ್ಯದಿಂದ ಮಾತ್ರವೇ ಸಹಕಾರ ಮೊತ್ತ ಸಿಗಲಿದೆ. ಇನ್ನು ಮುಂದಿನ ದಿನದಲ್ಲಿ ಕೇಂದ್ರದ ಅನುದಾನ ಮಂಜೂರಾಗುತ್ತಾ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.