Karnataka Times
Trending Stories, Viral News, Gossips & Everything in Kannada

Rameswaram Cafe: ರಾಮೇಶ್ವರಂ ಕೆಫೆಯಲ್ಲಿ ತುಪ್ಪದಿಂದಲೇ ಫುಡ್ ಮಾಡ್ತಾರೆ ಯಾಕೆ ಗೊತ್ತಾ? ರಹಸ್ಯ ಬಿಚ್ಚಿಟ್ಟ ಮಾಲೀಕ

advertisement

ಬೆಂಗಳೂರು ಅಂದ್ರೆ ವಿವಿಧ ಆಹಾರಗಳ ತವರೂರು ಎಂದೇ ಹೇಳಬಹುದು. ನೀವು ಕೇವಲ ನಮ್ಮ ದೇಶದ ಆಹಾರವನ್ನು ಮಾತ್ರವಲ್ಲ, ವಿದೇಶದ ಆಹಾರವನ್ನು ಕೂಡ ಬೆಂಗಳೂರಿನಲ್ಲಿ ಸವಿಯಬಹುದು ಅಂದ್ರೆ ಬೆಂಗಳೂರು ಎಷ್ಟರಮಟ್ಟಿಗೆ ಆಹಾರಪ್ರಿಯರನ್ನು ಹೊಂದಿದೆ ಎಂಬುದನ್ನು ನೀವೇ ಊಹಿಸಬಹುದು. ಬೆಂಗಳೂರಿನ ಬೀದಿ ಬೀದಿಗಳಲ್ಲಿ ನೂರಾರು ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣಪುಟ್ಟ ಆಹಾರ ಅಂಗಡಿಗಳು ಕಾಣಿಸುತ್ತವೆ. ಒಂದೇ ಬೀದಿಯಲ್ಲಿ 10 ಹೋಟೆಲ್ ಇದ್ದರೂ ಕೂಡ ಆ 10 ಹೋಟೆಲ್ಗಳು ಭರ್ತಿ ಆಗುವಷ್ಟು ಜನ ಆಹಾರವನ್ನ ಸೇವಿಸುತ್ತಾರೆ.

ಹೋಟೆಲ್ ಉದ್ಯಮ ಮಾಡುವುದು ಸುಲಭವಲ್ಲ. ಆದರೆ ನೀವು ಜನರಿಗೆ ಇಷ್ಟವಾಗುವ ರೀತಿಯ ಆಹಾರವನ್ನು ಕೊಟ್ಟರೆ ಹೋಟೆಲ್ ವೃತ್ತಿಯಲ್ಲಿ ಸಕ್ಸಸ್ ಕಾಣುವುದು ಶತಸಿದ್ಧ. ಹೌದು, ಜನರಿಗೆ ನಿಮ್ಮ ಹೋಟೆಲ್ ಹೇಗಿದೆ ಎನ್ನುವುದು ಮುಖ್ಯವಲ್ಲ. ನೀವು ಯಾವ ರೀತಿಯ, ಎಷ್ಟು ಹೈಜೆನಿಕ್ ಆಗಿರುವ ಹಾಗೂ ಎಷ್ಟು ರುಚಿಕರವಾದ ಆಹಾರವನ್ನು ನೀಡುತ್ತೀರಿ ಎನ್ನುವುದು ಬಹಳ ಮುಖ್ಯ. ಕೆಲವೊಮ್ಮೆ ಆಹಾರ ದುಬಾರಿ ಆಗಿದ್ದರೂ ಕೂಡ ರುಚಿ ಚೆನ್ನಾಗಿದ್ದರೆ ಜನ ಆ ಸ್ಥಳಕ್ಕೆ ಬಂದು ಆಹಾರ ಸೇವಿಸಿಯೇ ಸೇವಿಸುತ್ತಾರೆ.

ಪ್ರತಿದಿನ ಬೆಂಗಳೂರಿನಲ್ಲಿ ಹೋಟೆಲ್ಗಳಲ್ಲಿ ಲಕ್ಷಾಂತರ ಜನ ಆಹಾರ ಸೇವಿಸುತ್ತಾರೆ ಹೀಗೆ ಜನರನ್ನ ಕೈಬೀಸಿ ಕರೆದು ದಿನದಿಂದ ದಿನಕ್ಕೆ ಉತ್ತಮ ಹೆಸರು ಸಂಪಾದಿಸಿಕೊಳ್ಳುತ್ತಿರುವ ಹೋಟೆಲ್ ಗಳಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಕೂಡ ಒಂದು.

Rameswaram Cafe ಯಲ್ಲಿ ತುಪ್ಪದ ಆಹಾರ:

 

Image Source: maphug.com

 

ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ರಾಮೇಶ್ವರಂ ಕೆಫೆ (Rameswaram Cafe) ಹೋಟೆಲ್ ಓನರ್ ರಾಘವೇಂದ್ರ ರಾವ್ (Raghavendra Rao) ಅವರು ತಮ್ಮ ಹೋಟೆಲ್ ನಲ್ಲಿ ಯಾಕೆ ತುಪ್ಪವನ್ನೇ ಹೆಚ್ಚಾಗಿ ಬಳಸುತ್ತೇವೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ರಾಮೇಶ್ವರಂ ಕೆಫೆಗೆ ಹೋಗಿ ನೀವು ಆಹಾರ ಸೇವಿಸಿದರೆ ನಿಮಗೆ ಇದರ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ. ರಾಮೇಶ್ವರಂ ಕೆಫೆಯಲ್ಲಿ ಖಾರ ಪೊಂಗಲ್, ಸಿಹಿ ಪೊಂಗಲ್, ದೋಸೆ ಹೀಗೆ ಬೇರೆ ಬೇರೆ ರೀತಿಯ ಆಹಾರಗಳು ಸಿಗುತ್ತವೆ. ಆದರೆ ಪ್ರತಿಯೊಂದು ಆಹಾರದಲ್ಲಿಯೂ ಬೆಣ್ಣೆ ಅಥವಾ ತುಪ್ಪ ಕಾಮನ್. ತುಪ್ಪ ಇಷ್ಟು ಕಾಸ್ಟ್ಲಿ ಆದ್ರೂ ಯಾಕೆ ಅಷ್ಟೊಂದು ತುಪ್ಪವನ್ನ ಹಾಕಿ ಆಹಾರ ತಯಾರಿಸುತ್ತೀರಿ ಎಂದು ರಾಮೇಶ್ವರಂ ಕೆಫೆ ಓನರ್ ರಾಘವೇಂದ್ರ ರಾವ್ ಅವರನ್ನ ಕೇಳಿದರೆ ಅವರು ಕೊಟ್ಟ ಉತ್ತರ ಹೀಗಿದೆ!

advertisement

ನಮಗೆ ಕಸ್ಟಮರ್ ಗಳೇ ದೇವರು:

 

Image Source: Times Now

 

ನಾವು ನಮ್ಮ ಗ್ರಾಹಕರನ್ನ ದೇವರು ಎಂದೇ ಭಾವಿಸುತ್ತೇವೆ ನಮ್ಮ ಹೋಟೆಲ್ ಒಂದು ಗರ್ಭಗುಡಿ ಅದ್ರಲ್ಲಿ ಇರುವವರೆ ದೇವರು ಅಂದರೆ ದೇವಸ್ಥಾನದಲ್ಲಿ ದೇವರನ್ನ ಮೆಚ್ಚಿಸಲು ಹೇಗೆ ಪ್ರಸಾದವನ್ನು ತುಪ್ಪದಲ್ಲಿಯೇ ತಯಾರಿಸುತ್ತಾರೋ ಅದೇ ರೀತಿ ನಮ್ಮ ಹೋಟೆಲ್ ಎನ್ನುವ ದೇವಸ್ಥಾನದಲ್ಲಿ ದೇವರು ಎನ್ನುವ ಗ್ರಾಹಕರನ್ನು ಸಂತೃಪ್ತಿ ಪಡಿಸುವ ಸಲುವಾಗಿ ಯಥೇಚ್ಛವಾಗಿ ತುಪ್ಪವನ್ನು ಬಳಸುತ್ತೇವೆ. ದೇವರಿಗೆ ತುಪ್ಪವನ್ನು ಬಡಿಸುವಾಗ ಅಥವಾ ತುಪ್ಪದಲ್ಲಿ ಆಹಾರ ತಯಾರಿಸುವಾಗ ಯಾರು ಯೋಚಿಸುವುದಿಲ್ಲ. ಇಷ್ಟೇ ಇಷ್ಟು ಹಾಕಬೇಕು ಎಂದು ಪ್ರಮಾಣ ಇಟ್ಟು ತಿಂಡಿ ತಯಾರಿಸುವುದಿಲ್ಲ. ದೇವರಿಗೆ ಎಷ್ಟು ಬೇಕು ಅಷ್ಟು ತುಪ್ಪವನ್ನು ಹಾಕಿ ಆಹಾರ ತಯಾರಿಸುತ್ತಾರೆ. ಅದೇ ರೀತಿ ರಾಮೇಶ್ವರಂ ಕೂಡ ನಮ್ಮ ಗ್ರಾಹಕರಿಗೆ ತುಪ್ಪದಲ್ಲಿ ಆಹಾರ ತಯಾರಿಸಿ ಕೊಡುವ ಉದ್ದೇಶ ಹೊಂದಿದೆ ಎಂದು ರಾಘವೇಂದ್ರ ರಾವ್ ತಿಳಿಸುತ್ತಾರೆ.

 

Image Source: Whats Hot

 

“ತುಪ್ಪದಲ್ಲಿ ಸಾಕಷ್ಟು ವಿಟಮಿನ್ ಗಳು ಇವೆ. ನೀವು ತುಪ್ಪದಿಂದ ತಯಾರಿಸಿದ ಆಹಾರ ತಿಂದರೆ ಕೆಲವೇ ಸಮಯದಲ್ಲಿ ಅದು ಸರಿಯಾಗಿ ಜೀರ್ಣ ಆಗುತ್ತದೆ. ಗರ್ಭಿಣಿಯರಿಗೆ ತುಪ್ಪದ ಆಹಾರ ಸೇವಿಸಲು ಹೇಳಲಾಗುತ್ತೆ. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವನೆ ಮಾಡಿದರೆ ಜೀರ್ಣಕ್ರಿಯೆ ಸರಿಯಾಗಿ ಆಗುತ್ತೆ ಆದರೆ ಅದು ಯಾಕೋ ಗೊತ್ತಿಲ್ಲ ಇತ್ತೀಚಿಗೆ ಈಗಿನ ಜನರೇಶನ್ ತುಪ್ಪವನ್ನ ಬೇರೆದೇ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ತುಪ್ಪ Unhealthy ಎನ್ನುವಂತಹ ಮೆಂಟಾಲಿಟಿ ಬೆಳೆಸಿಕೊಂಡಿದ್ದಾರೆ. ತುಪ್ಪ ಬಹಳ ಆರೋಗ್ಯಕರವಾಗಿರುವಂತಹ ವಸ್ತು. ನಾವು ಚಿಕ್ಕ ವಯಸ್ಸಿನಿಂದಲೂ ಕೂಡ ತುಪ್ಪವನ್ನು ಸೇವಿಸಿಕೊಂಡೆ ಬೆಳೆದಿದ್ದೇವೆ. ಮನೆಯಲ್ಲಿ ಯಾವುದೇ ಅಡುಗೆ ಪದಾರ್ಥ ಮಾಡಿದರು ತುಪ್ಪವನ್ನು ಹಾಕಿ ಮಾಡುತ್ತಾರೆ. ಬಿಸಿ ಬಿಸಿ ಸಾಂಬಾರ್ ಗೆ ತುಪ್ಪದ ಒಗ್ಗರಣೆ ಕೊಟ್ಟು ಬರುವ ಫ್ಲೇವರ್ ಬಹಳ ಚೆನ್ನಾಗಿರುತ್ತೆ ಅದನ್ನ ಸವಿಯುವುದೇ ಒಂದು ಚೆಂದ.

ಇಂತಹ ಆರೋಗ್ಯಕರ ಆಹಾರವನ್ನು ಕೊಡುವುದು ನಮ್ಮ ಉದ್ದೇಶ. ನಾವು ದುಡ್ಡಿನ ಹಿಂದೆ ಹೋಗುವುದಿಲ್ಲ ನಮ್ಮ ಸರ್ವಿಂಗ್ ಚೆನ್ನಾಗಿ ಇದ್ರೆ ದುಡ್ಡು ತಾನಾಗಿಯೇ ಬರುತ್ತೆ ಎಂದು ರಾಘವೇಂದ್ರ ರಾವ್ ಅವರು ತಮ್ಮ ಹೋಟೆಲ್ ಆಹಾರದ ರುಚಿಯ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

advertisement

Leave A Reply

Your email address will not be published.