Karnataka Times
Trending Stories, Viral News, Gossips & Everything in Kannada

5 Seater Car: 35KMPL ಮೈಲೇಜ್ ನೀಡಬಲ್ಲ 5 ಆಸನದ ಕಾರನ್ನು ಖರೀದಿಸಿ ಕೇವಲ 4 ಲಕ್ಷ ರೂ ಗಳಿಗೆ! ಬಡವರ ರಥವಿದು!

advertisement

ಇಂಧನದ ಬೆಲೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ ಎಂದು ತಲೆ ಕೆಡಿಸಿಕೊಳ್ಳುತ್ತಿರುವ ಜನರಿಗೆ ಮಾರುತಿ ಸುಜುಕಿ ಒಂದು ಉತ್ತಮ ಪರಿಹಾರವನ್ನು ತಂದಿದೆ. ಅದುವೇ ಮಾರುತಿ ಸುಜುಕಿ ಸೆಲೆರಿಯೊ ಸಿ ಎನ್ ಜಿ ಮಾದರಿ! ಪೆಟ್ರೋಲ್ ಇಂಧನಕ್ಕಿಂತ ಕಡಿಮೆ ನಿರ್ವಹಣಾ ವೆಚ್ಚದಲ್ಲಿ ನೀವು ಸಿಎನ್ಜಿ ಮಾದರಿಯ ಕಾರಿನಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲ ಇದು ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ.

Celerio CNG Mileage:

ಸಿ ಎನ್ ಜಿ (Celerio CNG) ಮಾದರಿಯಲ್ಲಿ ಪೆಟ್ರೋಲ್ ಗಿಂತಲೂ ಉತ್ತಮ ಮೈಲೇಜ್ ಅನ್ನು ಪಡೆದುಕೊಳ್ಳಬಹುದು ಹಾಗಾಗಿ ಮಾರುತಿ ಸುಜುಕಿ (Maruti Suzuki) ತನ್ನ ಸೆಲರಿಯೋದ ಸಿ ಎನ್ ಜಿ ಮಾದರಿ 34.43km/kg ಮೈಲೇಜ್ ನೀಡುತ್ತದೆ ಎಂದು ಹೇಳಿಕೊಂಡಿದೆ.

Celerio CNG Features:

 

 

ಮಾರುತಿ ಸುಜುಕಿ ಎಲ್ಲರಿಗೂ ಇಂಧನ ಮಾದರಿಯಲ್ಲಿಯೂ ಉತ್ತಮ ಎಂಜಿನ್ ಅಳವಡಿಸಲಾಗಿತ್ತು. ಅದೇ ರೀತಿ ಸಿಎನ್ಜಿ (Celerio CNG) ಯಲ್ಲಿಯೂ ಶಕ್ತಿಯುತ ಎಂಜಿನ್ ಅಳವಡಿಸಲಾಗಿದೆ. 1.0 ಲೀಟರ್ K10B ಎಂಜಿನ್ ಹೊಂದಿದ್ದು 55.92 bhp ಪವರ್ ಮತ್ತು 82.1 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

advertisement

ಈ ಕಾರಿನಲ್ಲಿ ಮಾನ್ಯುಯಲ್ ಟ್ರಾನ್ಸ್ಮಿಷನ್ ಅಳವಡಿಸಲಾಗಿದೆ. ಇನ್ನು ಸುರಕ್ಷತೆಯ ದೃಷ್ಟಿಯಿಂದ ABS, EBD, ಏರ್ ಬ್ಯಾಗ್ ಗಳು, ಸೀಟ್ ಬೆಲ್ಟ್ ರಿಮೈಂಡರ್, ವೇಗ ಹೆಚ್ಚಿಸಿದರೆ ನಿಯಂತ್ರಿಸಲು ರಿಮೈಂಡರ್ ಮೊದಲಾದ ವೈಶಿಷ್ಟ್ಯತೆಗಳನ್ನು ಈ ಕಾರಿನಲ್ಲಿ ಕಾಣಬಹುದು.

 

Image Source: Autovista

 

ಸಿ ಎನ್ ಜಿ ಸೆಲರಿಯೋ (Celerio CNG) ಕಾರಿನ ಒಳಭಾಗದಲ್ಲಿ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಪವರ್ ವಿಂಡೋ ಗಳು, ಸೆಂಟ್ರಲ್ ಲಾಕಿಂಗ್ ಮೊದಲಾದ ವೈಶಿಷ್ಟತೆಗಳನ್ನು ಕೂಡ ಅಳವಡಿಸಲಾಗಿದೆ. ಒಟ್ಟಿನಲ್ಲಿ ಎಲ್ಲರಿಗೂ ಒಳಾಂಗಣ ವಿನ್ಯಾಸವನ್ನು ಕೂಡ ಉತ್ತಮಗೊಳಿಸಲಾಗಿದೆ.

Celerio CNG Price:

ನೀವು ದೈನಂದಿನ ಬಳಕೆಗಾಗಿ ಅತಿ ಕಡಿಮೆ ಬೆಲೆಯ ಹಾಗೂ ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಕಾರನ್ನು ಹುಡುಕುತ್ತಿದ್ದರೆ ಮಾರುತಿ ಸುಜುಕಿ ಬಿಡುಗಡೆ ಮಾಡಿರುವ ಸಲರಿಯೋ ಸಿ ಎನ್ ಜಿ ಮಾದರಿ ಅತ್ಯುತ್ತಮ ಆಯ್ಕೆ ಎನ್ನಬಹುದು. ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಇರುವ ಕಡೆ ಕೂಡ ಉತ್ತಮ ಮೈಲೇಜ್ ನೀಡಬಲ್ಲ ಕಾರು ಇದಾಗಿದೆ.

ನೀವು ದೈನಂದಿನ ಬಳಕೆಗೆ ಸುಲಭವಾಗಿ ಈ ಕಾರನ್ನು ಉಪಯೋಗಿಸಬಹುದು. ಇನ್ನು ಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿಯೇ ಈ ಕಾರು ಲಭ್ಯವಿದ್ದು, ಇದರ ಎಕ್ಸ್ ಶೋರೂಮ್ ಬೆಲೆ ಕೇವಲ 4 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಹಾಗಾಗಿ ಸಿ ಎನ್ ಜಿ ಸೆಲರಿಯೋ ಆರ್ಥಿಕವಾಗಿ ಮತ್ತು ಇಂಧನ ಸಮರ್ಥ ಕಾರನ್ನು ಹುಡುಕುತ್ತಿರುವವರಿಗೆ ಅತ್ಯುತ್ತಮ ಆಯ್ಕೆ ಎನ್ನಬಹುದು.

advertisement

Leave A Reply

Your email address will not be published.