Karnataka Times
Trending Stories, Viral News, Gossips & Everything in Kannada

Electric Scooters: OLA, Ather ಅಲ್ಲ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮುಗಿಬಿದ್ದು ಖರೀದಿ ಮಾಡುತ್ತಿರುವ ಜನ! ಬೆಸ್ಟ್ ಮೈಲೇಜ್

advertisement

TVS iQube Electric Scooter Surpasses 2 Lakh Units Sales : ಭಾರತದ ದ್ವಿಚಕ್ರ ವಾಹನ ತಯಾರಿಕ ಕಂಪನಿಗಳಲ್ಲಿ ಟಿವಿಎಸ್ ಅತ್ಯಂತ ಬೇಡಿಕೆಯಲ್ಲಿರುವಂತಹ ಸಂಸ್ಥೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯರ ಮನಸ್ಸನ್ನು ಗೆದ್ದುಕೊಂಡು ಬಂದಿರುವಂತಹ ಹಾಗೂ ಅವರ ಆಯ್ಕೆಗೆ ತಕ್ಕ ರೀತಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿರ್ಮಾಣ ಮಾಡಿಕೊಂಡು ಬಂದಿರುವಂತಹ ಕಂಪನಿ ಟಿವಿಎಸ್ ಆಗಿದೆ. ಇನ್ನು ಇತ್ತೀಚಿಗೆ ಅಷ್ಟೇ 2024ರ ಮಾರಾಟದ ಪಟ್ಟಿಯನ್ನು ಕೂಡ ಸಂಸ್ಥೆ ಅಧಿಕೃತವಾಗಿ ಹೊರಹಾಕಿದೆ.

WhatsApp Join Now
Telegram Join Now

2024ರ ಜೂನ್ ತಿಂಗಳಿನಲ್ಲಿ 3.33 ಲಕ್ಷಕ್ಕಿಂತಲೂ ಅಧಿಕ ಯೂನಿಟ್ ಗಳನ್ನು ಮಾರಾಟ ಮಾಡಿದೆ ಎಂಬುದಾಗಿ ಟಿವಿಎಸ್ ಹೇಳಿಕೊಂಡಿದೆ. ಕಳೆದ ಅಂದ್ರೆ 2023ರ ಜೂನ್ ತಿಂಗಳಿನಲ್ಲಿ ಟಿವಿಎಸ್ 3.22 ಲಕ್ಷ ಯೂನಿಟ್ ಗಳನ್ನು ಮಾರಾಟ ಮಾಡಿದ್ದು ಕಳೆದ ವರ್ಷದ ಜೂನ್ ಗಿಂತ ಈ ಬಾರಿಯ ಜೂನ್ ನಲ್ಲಿ ಮಾರಾಟದಲ್ಲಿ ಆರು ಪ್ರತಿಶತ ಹೆಚ್ಚಳ ಕಂಡು ಬಂದಿದೆ ಅನ್ನೋದು ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಹೊರತಾಗಿ ಕೂಡ ಭಾರತದ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಟಿವಿಎಸ್ ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. TVS iQube Electric Scooter Surpasses 2 Lakh Units Sales

ತ್ರಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ ಮಾರಾಟದಲ್ಲಿ ಟಿವಿಎಸ್ ಸಂಸ್ಥೆ ಹಿಂದೆ ಬಿದ್ದಿದೆ ಎಂದು ಹೇಳಬಹುದಾಗಿದೆ. ಇನ್ನು ವಿದೇಶಿ ಮಾರುಕಟ್ಟೆಗಳಿಗೆ ರಫ್ತು ಮಾಡುವಂತಹ ವಾಹನಗಳ ವಿಚಾರದಲ್ಲಿ ಈ ಬಾರಿಯ ಜೂನ್ ತಿಂಗಳಿನಲ್ಲಿ 76,074 ಯೂನಿಟ್ ಗಳನ್ನು ರಫ್ತು ಮಾಡಿತ್ತು ಆದರೆ ಕಳೆದ ವರ್ಷದ ಜೂನ್ ತಿಂಗಳಲ್ಲಿ ಟಿವಿಎಸ್ ಸಂಸ್ಥೆ 79,144 ಯೂನಿಟ್ಗಳನ್ನ ರಫ್ತು ಮಾಡಿತು ಅನ್ನೋದನ್ನ ನಾವಿಲ್ಲಿ ತಿಳಿದುಕೊಳ್ಳಬೇಕಾಗಿದೆ.

advertisement

TVS iQube ಬೇಡಿಕೆ ಗಣನೀಯವಾಗಿ ಹೆಚ್ಚಾಗುತ್ತಿದೆ

TVS iQubeಗೆ ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದು ಎಲೆಕ್ಟ್ರಿಕ್ ರೂಪಾಂತರ ಸೇರಿದಂತೆ ಒಟ್ಟಾರೆಯಾಗಿ ಮೂರು ವೇರಿಯಂಟ್ ಗಳಲ್ಲಿ ಕಾಣಿಸಿಕೊಳ್ಳುತ್ತದೆ. 94999 ರೂಪಾಯಿಗಳಿಂದ ಪ್ರಾರಂಭಿಸಿ 1.85 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಈ ಮೂರು ವೇರಿಯಂಟ್ಗಳು ಕಾಣಿಸಿಕೊಳ್ಳುತ್ತವೆ. 2.2, 3.4 ಹಾಗು 5.1 ಕಿಲೋ ವ್ಯಾಟ್ ಸಾಮರ್ಥ್ಯದ ಬ್ಯಾಟರಿಗಳನ್ನ ಇದರಲ್ಲಿ ಅಳವಡಿಸಲಾಗಿದ್ದು 75ರಿಂದ 150 ಕಿಲೋಮೀಟರ್ಗಳ ಮೈಲೇಜ್ ಅನ್ನು ಸಿಂಗಲ್ ಚಾರ್ಜ್ ನಲ್ಲಿ ಇವುಗಳನ್ನು ನೀಡುತ್ತವೆ. ಇದರಲ್ಲಿ 7 ಇಂಚಿನ ಟಿ ಎಫ್ ಟಿ ಕಲರ್ ಸ್ಕ್ರೀನ್ ಕೂಡ ಇದೆ, ವಾಯ್ಸ್ ಅಸಿಸ್ಟೆಂಟ್ ಹಾಗೂ ಟಿಪಿಎಂಎಸ್ ಕೂಡ ಇದರಲ್ಲಿ ಕಾಣಬಹುದಾಗಿದೆ. 75ರಿಂದ 82km ಗಳ ಪ್ರತಿ ಗಂಟೆಯ ಟಾಪ್ ಸ್ಪೀಡ್ ಅನ್ನು ಕೂಡ ನಾವು ಇದರಲ್ಲಿ ಕಾಣಬಹುದಾಗಿದೆ.

TVS iQube Electric Scooter Surpasses 2 Lakh Units Sales
Image Source: Jansatta

advertisement

Leave A Reply

Your email address will not be published.