Karnataka Times
Trending Stories, Viral News, Gossips & Everything in Kannada

HSRP ಬಗ್ಗೆ ಜನರ ನಿರಾಸಕ್ತಿ, ಈಗಾಗಲೇ ಹಾಕಿಸಿದವರಿಗೂ ಬೀಳುತ್ತೆ ದಂಡ RTO ಹೊಸ ರೂಲ್ಸ್

advertisement

What are the rules for HSRP number plate?: ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಬೇಕಾಗಿರುವಂತಹ ದಿನಾಂಕವನ್ನು ಸೆಪ್ಟೆಂಬರ್ ತಿಂಗಳಿಗೆ ಮುಂದುವರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದನ್ನ ಈ ಹಿಂದೆ ಮೇ 31ಕ್ಕೆ ಕೊನೆಯ ದಿನಾಂಕವಾಗಿ ಆಯ್ಕೆ ಮಾಡಲಾಗಿತ್ತು ಅನ್ನೋದನ್ನ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಇದಕ್ಕಿಂತಲೂ ಮುಂಚೆ ಸಾರಿಗೆ ಇಲಾಖೆ ಮೂರು ಬಾರಿ ಈ ದಿನಾಂಕವನ್ನು ಬದಲು ಮಾಡುವಂತಹ ಕೆಲಸವನ್ನು ಕೂಡ ಮಾಡಿತ್ತು ಇದಕ್ಕೆ ಪ್ರಮುಖ ಕಾರಣ ಜನರ ನಿರ್ಲಕ್ಷ್ಯ ಎಂದು ಹೇಳಬಹುದಾಗಿದೆ.
WhatsApp Join Now
Telegram Join Now
ಯಾವುದೇ ರೀತಿಯ ನಿಯಮಗಳನ್ನು ಸರ್ಕಾರ ಅಥವಾ ಸರ್ಕಾರಿ ಇಲಾಖೆಗಳು ಜಾರಿಗೆ ತಂದರು ಕೂಡ ಜನರು ಅದರ ಬಗ್ಗೆ ಗಂಭೀರವಾಗಿ ಯಾವುದೇ ರೀತಿಯ ಕ್ರಮವನ್ನು ಕೈ ತೆಗೆದುಕೊಳ್ಳುವುದಿಲ್ಲ ಅನ್ನೋದೇ ನಮ್ಮ ಭಾರತೀಯರ ಹಣೆಬರಹ ಎನ್ನುವ ರೀತಿಯಲ್ಲಿ ಆಗಿಬಿಟ್ಟಿದೆ.

ಇನ್ನು ಈಗ ನೀಡಿರುವಂತಹ ಗಡುವಿನ ದಿನಾಂಕ ಮುಗಿದ ನಂತರ ಒಂದು ವೇಳೆ ನೀವು ನಿಮ್ಮ ವಾಹನದ ಮೇಲೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಸಾಮಾನ್ಯವಾಗಿ ಖಂಡಿತವಾಗಿ 500 ರಿಂದ ಸಾವಿರ ರೂಪಾಯಿಗಳ ಫೈನ್ ಅನ್ನು ಕಟ್ಟಬೇಕಾಗಿ ಬರುತ್ತದೆ ಅದರಲ್ಲಿ ಯಾವುದು ಅನುಮಾನವಿಲ್ಲ.

advertisement

What are the rules for HSRP number plate?
Image Source: informalnewz

ಕರ್ನಾಟಕ ರಾಜ್ಯದಲ್ಲಿರುವಂತಹ ಎರಡು ಕೋಟಿಗೂ ಹೆಚ್ಚಿನ ವಾಹನಗಳಲ್ಲಿ HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ವಾಹನಗಳ ಸಂಖ್ಯೆ ಕೇವಲ 35 ರಿಂದ 45 ಲಕ್ಷ ವಾಹನಗಳ ಆಸುಪಾಸಿನಲ್ಲಿ ಮಾತ್ರ ಅನ್ನೋದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ ಯಾಕೆಂದರೆ ಈ ನಿಯಮವನ್ನ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಸಾರಿಗೆ ಇಲಾಖೆ ಹೇಳಿಕೊಂಡು ಬರುತ್ತಿದೆ ಆದರೆ ಅರ್ಧಕ್ಕೆ ಅರ್ಧದಷ್ಟು ಜನ ಈ ಕೆಲಸವನ್ನು ಮಾಡಿಯೇ ಇಲ್ಲ ಅನ್ನೋದು ಜನರು ಎಷ್ಟರ ಮಟ್ಟಿಗೆ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎಂದು ಸಾಬೀತುಪಡಿಸುವ ರೀತಿಯಲ್ಲಿ ಕಂಡು ಬರುತ್ತದೆ.

HSRP ನಂಬರ್ ಪ್ಲೇಟ್ ಹಾಕೊಂಡ್ರು ಕೂಡ ಬೀಳುತ್ತೆ ಫೈನ್ ಯಾಕೆ ಗೊತ್ತಾ?

HSRP ನಂಬರ್ ಪ್ಲೇಟ್ ಹಾಕಿಕೊಂಡ ನಂತರ ಕೂಡ ಯಾಕೆ ಫೈನ್ ಬೀಳುತ್ತೆ ಅನ್ನೋದಾಗಿ ಖಂಡಿತವಾಗಿ ನೀವು ಕೂಡ ಅನುಮಾನದ ದೃಷ್ಟಿಯಿಂದ ನೋಡುವುದರಲ್ಲಿ ಯಾವುದೇ ತಪ್ಪಿಲ್ಲ. ಯಾಕೆಂದ್ರೆ ನಾವು ಹೇಳೋಕೆ ಹೊರಟಿರೋದು ನಂಬರ್ ಪ್ಲೇಟ್ ಮಿಸ್ಟೇಕ್ ಅಲ್ಲ ಬದಲಾಗಿ ನಂಬರ್ ಪ್ಲೇಟ್ ಮೇಲೆ ನೀವು ಒಂದು ವೇಳೆ ನಿಮ್ಮ ನೆಚ್ಚಿನ ನಾಯಕ ನಟನ ಫೋಟೋ ಅಥವಾ ನಿಮ್ಮ ಜಾತಿ ಅಥವಾ ಧರ್ಮದ ಬಗ್ಗೆ ಬರಹವನ್ನು ಬರೆದಿದ್ರೆ ಅದರ ಮೇಲೆ ಫೈನ್ ಬೀಳುತ್ತೆ ಅನ್ನೋದನ್ನ ಹೇಳುವುದಕ್ಕೆ ಹೊರಟಿದ್ದೇವೆ. ಭಾರತೀಯ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಈ ರೀತಿ ಬೇರೆ ಬೇರೆ ಜಾತಿ ಧರ್ಮ ಅಥವಾ ಯಾವುದೇ ರೀತಿಯ ಬರಹಗಳನ್ನು ಅನಧಿಕೃತವಾಗಿ ನಂಬರ್ ಪ್ಲೇಟ್ ಮೇಲೆ ಬಳಸಿಕೊಳ್ಳುವುದು ಕಾನೂನು ರೀತಿಯಲ್ಲಿ ಅಪರಾಧ ಎಂಬುದಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಮೇಲೆ ಕೂಡ ದೊಡ್ಡ ಮಟ್ಟದ ಫೈನ್ ಬೀಳುತ್ತೆ ಅನ್ನೋದನ್ನ ನೆನಪಿನಲ್ಲಿ ಇಟ್ಟುಕೊಳ್ಳಿ.

What are the rules for HSRP number plate?
Image Source: Spinny

advertisement

Leave A Reply

Your email address will not be published.