ಹೂಡಿಕೆ ಅಂದ ತಕ್ಷಣ ದೀರ್ಘಾವಧಿಯ ಹೂಡಿಕೆಯನ್ನೇ ಮಾಡಬೇಕು ಎಂದೇನೂ ಇಲ್ಲ. ಕೆಲವು ಅಲ್ಪಾವಧಿಯ ಹೂಡಿಕೆಗಳು ಕೂಡ ಉತ್ತಮ ರಿಟರ್ನ್ ನೀಡಬಹುದು. ಅಂತಹ ಬೆಸ್ಟ್ ಪ್ಲಾನ್ ನೀವು ಹುಡುಕುತ್ತಿದ್ದರೆ, ಎಸ್ಬಿಐನ ಅಮೃತ ವೃಷ್ಟಿ (SBI Amrit Vrishti) ಅತ್ಯುತ್ತಮ ಆಯ್ಕೆಯಾಗಲಿದೆ.
ಎಸ್ ಬಿ ಐ ಅಮೃತ್ ವೃಷ್ಟಿ ಎಫ್ ಡಿ ಯೋಜನೆ!
ಈ ಯೋಜನೆಯಲ್ಲಿ 444 ದಿನಗಳಿಗೆ ಎಫ್ ಡಿ (FD) ಹೂಡಿಕೆ ಮಾಡಿದರೆ ಉತ್ತಮ ಬಡ್ಡಿ ಜೊತೆಗೆ ಉತ್ತಮ ರಿಟರ್ನ್ ಪಡೆಯಬಹುದು. ಇಲ್ಲಿ ಸಾಮಾನ್ಯ ನಾಗರಿಕರಿಗೆ 7.25% ಬಡ್ಡಿ ಹಾಗೂ ಹಿರಿಯ ನಾಗರಿಕರಿಗೆ 7.75% ಬಡ್ಡಿ ವಿತರಣೆ ಮಾಡಲಾಗುತ್ತದೆ. ಈ ಯೋಜನೆಯಲ್ಲಿ ಒಂದು ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಪಡೆಯಬಹುದು ಎನ್ನುವುದನ್ನು ನೋಡೋಣ.
1 ಲಕ್ಷ ಹೂಡಿಕೆ ಮಾಡಿದರೆ ಎಷ್ಟು ರಿಟರ್ನ್ ಸಿಗುತ್ತೆ?
1 ಲಕ್ಷಗಳನ್ನು 444 ದಿನಗಳವರೆಗೆ ಹೂಡಿಕೆ ಮಾಡಿದರೆ 9,630 ರೂಪಾಯಿಯನ್ನು ಬಡ್ಡಿಯಾಗಿ 1,09,630 ರೂಪಾಯಿಗಳನ್ನು ಒಟ್ಟಾರೆ ರಿಟರ್ನ್ ಆಗಿ ಹಿರಿಯ ನಾಗರಿಕರು ಪಡೆದುಕೊಳ್ಳಬಹುದು. ಇದೇ ಹೂಡಿಕೆಯನ್ನು ಸಾಮಾನ್ಯ ಗ್ರಾಹಕರು ಮಾಡಿದರೆ 9,280 ರೂಪಾಯಿಗಳ ಬಡ್ಡಿ ಹಾಗೂ ಮೆಚುರಿಟಿ ಅವಧಿಯಲ್ಲಿ 1,09,280 ರೂಪಾಯಿಗಳನ್ನು ಹಿಂಪಡೆಯಬಹುದು.
2 ಲಕ್ಷ ರೂಪಾಯಿಗೆ ಹೂಡಿಕೆಯ ಮೇಲೆ ಎಷ್ಟು ರಿಟರ್ನ್ ಸಿಗುತ್ತೆ?
- ಹಿರಿಯ ನಾಗರಿಕರು – ಬಡ್ಡಿ 19,574.08 ರೂಪಾಯಿಗಳು ಹಾಗೂ ಮೆಚುರಿಟಿ ರಿಟರ್ನ್ 2,195,74.08 ರೂಪಾಯಿಗಳು.
- ಸಾಮಾನ್ಯ ಗ್ರಾಹಕರು – ಬಡ್ಡಿ 18,267.08 ರೂ. ಮೆಚುರಿಟಿ ರಿಟರ್ನ್ 2,18,267.08 ರೂಪಾಯಿಗಳು.
ಮೂರು ಲಕ್ಷ ರೂಪಾಯಿಗಳಿಗೆ ಎಷ್ಟು ರಿಟರ್ನ್ಸ್ ಸಿಗುತ್ತೆ?
- ಹಿರಿಯ ನಾಗರಿಕರು – ಬಡ್ಡಿ 29,361.13 ರೂಪಾಯಿ ಮೆಚುರಿಟಿ ರಿಟರ್ನ್ 3,29,361.13 ರೂಪಾಯಿಗಳು.
- ಸಾಮಾನ್ಯ ನಾಗರಿಕರು – ಬಡ್ಡಿ 27,400.62 ರೂಪಾಯಿಗಳು ಮತ್ತು ಮೆಚುರಿಟಿ ರಿಟರ್ನ್ 3,27,400.62 ರೂಪಾಯಿಗಳು.
ನಾಲ್ಕು ಲಕ್ಷ ರೂಪಾಯಿಗಳಿಗೆ ಎಷ್ಟು ರಿಟರ್ನ್ ಸಿಗುತ್ತೆ?
- ಹಿರಿಯ ನಾಗರಿಕರು – ಬಡ್ಡಿ 39,148.17 ರೂಪಾಯಿಗಳು, ಅವಧಿಯ ರಿಟರ್ನ್ – 4,39,148.17 ರೂಪಾಯಿಗಳು.
- ಸಾಮಾನ್ಯ ನಾಗರಿಕರು – ಪಡೆಯುವ ಬಡ್ಡಿ -36,534.15 ರೂಪಾಯಿಗಳು, ಮೆಚುರಿಟಿ ರಿಟರ್ನ್ 4,36,534.15 ರೂಪಾಯಿಗಳಾಗಿರುತ್ತವೆ.
5 ಲಕ್ಷ ಹೂಡಿಕೆ ಮಾಡಿದರೆ ಸಿಗುವ ರಿಟರ್ನ್ ಎಷ್ಟು?
ಹಿರಿಯ ನಾಗರಿಕರು ಐದು ಲಕ್ಷ ಹೂಡಿಕೆ ಮಾಡಿದರೆ 7.75% ಬಡ್ಡಿ ಆಧಾರದ ಮೇಲೆ, 48935.21 ರೂ. ಬಡ್ಡಿ ಸಿಗುತ್ತದೆ. ಒಟ್ಟಾರೆಯಾಗಿ ಮೆಚುರಿಟಿ ಅವಧಿಯಲ್ಲಿ 548935.21 ರೂಪಾಯಿಗಳನ್ನು ಹಿಂಪಡೆಯಬಹುದು. ಅದೇ ರೀತಿ ಸಾಮಾನ್ಯ ಗ್ರಾಹಕರಿಗೆ 7.25% ಬಡ್ಡಿ ದರದ ಆಧಾರದ ಮೇಲೆ 45,667.69 ರೂಪಾಯಿ ಬಡ್ಡಿ ಹಾಗೂ ಮೆಚುರಿಟಿ ಅವಧಿಯಲ್ಲಿ 5,45,667.69 ರೂಪಾಯಿಗಳನ್ನು ಹಿಂಪಡೆಯಬಹುದು.