Karnataka Times
Trending Stories, Viral News, Gossips & Everything in Kannada

Fixed Deposit: ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಬಿಟ್ಟುಇಲ್ಲಿ FD ಇಡಲು ಮುಗಿಬಿದ್ದ ಜನ! ಭರ್ಜರಿ ಬಡ್ಡಿ

advertisement

ಹೂಡಿಕೆ ಮಾಡುವುದಕ್ಕೆ ನಮ್ಮ ಬಳಿ ಸಾಕಷ್ಟು ಆಯ್ಕೆಗಳು ಇರಬಹುದು ಆದರೆ ಹೆಚ್ಚಿನ ಜನರು ಹೂಡಿಕೆಯ ವಿಚಾರಕ್ಕೆ ಬಂದರೆ ಫಿಕ್ಸೆಡ್ ಡೆಪಾಸಿಟ್ ಮೇಲೆ ತಮ್ಮ ನಂಬಿಕೆ ಇಡ್ತಾರೆ. ಅದರಲ್ಲಿ ವಿಶೇಷವಾಗಿ ದೀರ್ಘಕಾಲಿಕ ಹೂಡಿಕೆಯ ವಿಚಾರಕ್ಕೆ ಬಂದರೆ ಫಿಕ್ಸೆಡ್ ಡಿಪಾಸಿಟ್ (Fixed Deposit) ಪ್ರತಿಯೊಬ್ಬರ ಏಕೈಕ ಆಯ್ಕೆ ಆಗಿರುತ್ತದೆ. ಅದರಲ್ಲಿ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ (Post Office) ಡೆಪಾಸಿಟ್ಗಿಂತ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ (Corporate Fixed Deposit) ನಿಮಗೆ ಕೈ ತುಂಬಾ ಲಾಭವನ್ನು ನೀಡುವಂತಹ ಯೋಜನೆಯಾಗಿದೆ ಎಂಬುದನ್ನು ಹೇಳೋದಕ್ಕೆ. ಹಾಗಿದ್ರೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

Corporate Fixed Deposit:

 

Image Source: Wint Wealth

 

ಇದು ಕಾರ್ಪೊರೇಟ್ ಕಂಪನಿಗಳು ಬ್ಯಾಂಕಿನ ರೀತಿಯಲ್ಲಿ ಗ್ರಾಹಕರಿಂದ ಫಿಕ್ಸೆಡ್ ಡೆಪಾಸಿಟ್ (Fixed Deposit) ರೂಪದಲ್ಲಿ ಹಣವನ್ನು ಒಟ್ಟುಗೂಡಿಸುತ್ತದೆ. ನಿಶ್ಚಿತ ಸಮಯ ಆದ ನಂತರ ಅದಕ್ಕೆ ಇನ್ನಷ್ಟು ಹೆಚ್ಚಿನ ಹಣವನ್ನು ಸೇರಿಸಿ ಗ್ರಾಹಕರಿಗೆ ವಾಪಸ್ ನೀಡುವಂತಹ ಕೆಲಸವನ್ನು ಕಂಪನಿಗಳು ಮಾಡುತ್ತವೆ. ಇದನ್ನೇ ಕಾರ್ಪೊರೇಷನ್ ಡೆಪಾಸಿಟ್ ಎಂಬುದಾಗಿ ಕರೆಯಲಾಗುತ್ತದೆ. ಆದರೆ ಇದರಲ್ಲಿ ಇರುವಂತಹ ಆಕರ್ಷಕ ಗುಣ ಅಂದ್ರೆ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ (Post Office) ಕಿಂತ ಹೆಚ್ಚಿನ ಬಡ್ಡಿದರವನ್ನು ಕಾರ್ಪೊರೇಟ್ ಫಿಕ್ಸಿಡ್ ಡೆಪಾಸಿಟ್ ಮೇಲೆ ನೀವು ಪಡೆದುಕೊಳ್ಳಬಹುದಾಗಿದೆ.

advertisement

ಎಷ್ಟು ಲಾಭ ಸಿಗುತ್ತೆ ಗೊತ್ತಾ?

 

Image Source: The New Indian Express

 

ಬ್ಯಾಂಕಿನ ಫಿಕ್ಸ್ಡ್ ಡೆಪಾಸಿಟ್ (Fixed Deposit) ನಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ ಹೆಚ್ಚೆಂದರೆ ಐದರಿಂದ ಏಳು ಅಥವಾ 7.5 ಪ್ರತಿಶತ ಬಡ್ಡಿದರವನ್ನು ನೀವು ಪಡೆದುಕೊಳ್ಳಬಹುದಾಗಿದೆ ಆದರೆ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ನಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದರಿಂದ 8 ರಿಂದ 10 ಪ್ರತಿಶತ ಬಡ್ಡಿಯನ್ನು ರಿಟರ್ನ್ ರೂಪದಲ್ಲಿ ಪಡೆದುಕೊಳ್ಳಲಿದ್ದೀರಿ. ಇನ್ನು ಇದರ ಮೆಚುರಿಟಿ ಅವಧಿ ಒಂದರಿಂದ ಐದು ವರ್ಷಗಳವರೆಗೆ ಇರುತ್ತದೆ. ಇನ್ನು ಬ್ಯಾಂಕುಗಳ ರೀತಿಯಲ್ಲಿ ಕಾರ್ಪೊರೇಟ್ ಫಿಕ್ಸಿಡ್ ಡೆಪಾಸಿಟ್ (Corporate Fixed Deposit) ನಲ್ಲಿ ಕಂಪನಿಗಳು ಕೂಡ ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಒಂದು ವೇಳೆ ನೀವು ರಿಸ್ಕ್ ತೆಗೆದುಕೊಳ್ಳಲು ರೆಡಿಯಾಗಿದ್ರೆ ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ ಯೋಜನೆ ನಿಮಗೆ ಹೇಳಿ ಮಾಡಿಸಿದ ಫಿಕ್ಸೆಡ್ ಡೆಪಾಸಿಟ್ ಯೋಜನೆಯಾಗಿದೆ.

ಕಾರ್ಪೊರೇಟ್ ಫಿಕ್ಸೆಡ್ ಡೆಪಾಸಿಟ್ (Corporate Fixed Deposit) ನಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಮನಸ್ಸು ಮಾಡಿದರೆ ಹೆಚ್ಚು ಕ್ರೆಡಿಟ್ ರೇಟಿಂಗ್ ಅನ್ನು ಹೊಂದಿರುವಂತಹ ಕಂಪನಿಗಳ ಮೇಲೆ ಹಣವನ್ನು ಹೂಡಿಕೆ ಮಾಡುವುದನ್ನು ನೀವು ಪ್ರಾರಂಭಿಸಬೇಕು. ಆ ಕಂಪನಿಗಳ ಹತ್ತಿರದಿಂದ 20 ವರ್ಷಗಳ ರೆಕಾರ್ಡ್ ಅನ್ನು ಗಮನಿಸಿ ಚೆಕ್ ಮಾಡಿದ ನಂತರ ಅದರಲ್ಲಿ ಹಣವನ್ನು ಹೂಡಿಕೆ ಮಾಡಿ. ಒಂದು ವೇಳೆ ಕಂಪನಿಗಳಲ್ಲಿ AAA / AA ರೇಟಿಂಗ್ ಇದ್ರೆ ನೀವು ಆ ಕಂಪನಿಯಲ್ಲಿ ಈ ಹಣವನ್ನು ಹೂಡಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.