Karnataka Times
Trending Stories, Viral News, Gossips & Everything in Kannada

Tax Rules: ವರ್ಷಕ್ಕೆ 7 ಲಕ್ಷದವರೆಗೆ ದುಡಿಮೆ ಮಾಡುವವರಿಗೆ ಹೊಸ ನ್ಯೂಸ್! ಆದಾಯ ಇಲಾಖೆ ಘೋಷಣೆ

advertisement

ಪ್ರತಿ ವರ್ಷ ಕೂಡ ಆದಾಯ ತೆರಿಗೆ ಇಲಾಖೆಯ (Income Tax Department) ನಿಯಮದಂತೆ ಅಧಿಕ ಆದಾಯ ಇದ್ದವರು ತೆರಿಗೆ ಕಟ್ಟುವುದು ಕಡ್ಡಾಯವಾಗಿದೆ ಎನ್ನಬಹುದು. ಆದಾಯ ತೆರಿಗೆಯ ಮಿತಿ ಒಳಪಡದಿದ್ದರೆ ITR ಸಲ್ಲಿಕೆ ಮಾಡಬೇಕು. ಅದೇ ರೀತಿ ಕಂಪೆನಿಗಳು TDS ಎಂದು ಹಣ ಕಡಿತ ಮಾಡಿದರೂ ಅದಕ್ಕೆ ಕೂಡ ಅಪ್ಲೇ ಮಾಡಲು ಇದೇ ತಿಂಗಳಿನಿಂದ ಅವಕಾಶ ಇದ್ದು ಆದಾಯ ತೆರಿಗೆ ಇಲಾಖೆಯ ಅಡಿಯಲ್ಲಿ ಕಡಿಮೆ ಆದಾಯ ಹೊಂದಿದ್ದವರಿಗೆ TDS ರಿಫಂಡ್ ಆಗಲಿದೆ. ಆದಾಯ ತೆರಿಗೆ ಇಲಾಖೆಯಲ್ಲಿ ITR ಸಲ್ಲಿಕೆಗೆ ಇರುವ ತೆರಿಗೆ ವಿಧಿಸಲು ಇರುವ ಆದಾಯ ಮಿತಿ ಎಷ್ಟು ಎಂಬ ಇತ್ಯಾದಿ ಮಾಹಿತಿಯನ್ನು ಇಂದು ನಾವು ಈ ಲೇಖನದ ಮೂಲಕ ತಿಳಿಸಲಿದ್ದೇವೆ.

WhatsApp Join Now
Telegram Join Now

ಇಂದು ದೊಡ್ಡ ದೊಡ್ಡ ಉದ್ದಿಮೆ ಕೆಲಸಕ್ಕೆ ಹಾಗೂ ದೊಡ್ಡ ಹುದ್ದೆಯಲ್ಲಿ ಇರುವ ಎಲ್ಲರಿಗೂ ತೆರಿಗೆ ನಿಯಮ ಇದ್ದೇ ಇರಲಿದೆ. ಅಧಿಕ ಆದಾಯ ಇದ್ದು ಕೂಡ ಯಾರು ತೆರಿಗೆ ಕಟ್ಟಲು ಹಿಂದೇಟ ಹಾಕುತ್ತಾರೆ ಅಂತವರ ವಿರುದ್ಧ ಸರಕಾರ ಕಾನೂನು ಬದ್ಧ ಕ್ರಮ ಕೈಗೊಳ್ಳಲಿದೆ. ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದ್ದ ಸಂದರ್ಭದಲ್ಲಿ ಬೇಕೆಂದೆ ತೆರಿಗೆ ಪಾವತಿ ಮಾಡದಿರುವುದು ಶಿಕ್ಷಾರ್ಹ ಅಪರಾಧ ಆಗಿದೆ ಅದಕ್ಕೆ ದಂಡ ತಪ್ಪಿದರೆ ಜೈಲು ಶಿಕ್ಷೆ ಕೂಡ ವಿಧಿಸುವ ಸಾಧ್ಯತೆ ಇದೆ.

ಎಲ್ಲಿವರೆಗೂ ತೆರಿಗೆ ವಿನಾಯಿತಿ ಇದೆ?

 

Image Source: Avalara

 

advertisement

ಆದಾಯ ತೆರಿಗೆ ಇಲಾಖೆಯು (Income Tax Department) ಬದಲಾದ ಕಾಲಘಟ್ಟದಲ್ಲಿ ಜನರ ಅಗತ್ಯಕ್ಕೆ ತಕ್ಕಂತೆ ಆದಾಯದ ಹರಿವು ಹೆಚ್ಚಾದಂತೆ ಮೂಲ ವೇತನ (Salary) ಕೂಡ ಹೆಚ್ಚುವುದು ಮನಗಂಡು ತೆರಿಗೆ ವಿಧಿಸುವ ನಿಯಮದಲ್ಲಿ ಅನೇಕ ಮಹತ್ತರ ಬದಲಾವಣೆ ಜಾರಿಗೆ ತಂದಿದೆ. ಅದರ ಪ್ರಕಾರ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 87 A ಅಡಿಯಲ್ಲಿ ತೆರಿಗೆ ರಿಯಾಯಿತಿ ಇರುವುದರಿಂದ ನೀವು ಕೂಡ ಆದಾಯ ತೆರಿಗೆ ಈ ವಿಶೇಷ ರಿಯಾಯಿತಿ ಪಡೆಯಬಹುದು.

ಹಳೆ ತೆರಿಗೆ ಪದ್ಧತಿಯ ಪ್ರಕಾರ ನಿವ್ವಳ ತೆರಿಗೆ (Tax) ಆದಾಯವು 5 ಲಕ್ಷ ರೂಪಾಯಿ ಮೀರಿದ್ದರೆ ಆಗ ತೆರಿಗೆ ನಿಯಮ ಅನ್ವಯವಾಗಲಿದೆ. ಹೊಸ ತೆರಿಗೆ ಪದ್ಧತಿಯಂತೆ 7 ಲಕ್ಷ ರೂಪಾಯಿ ಮೀರದೇ ಇದ್ದರೆ ನೀವು ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಲಿದ್ದೀರಿ. ಹಳೆ ತೆರಿಗೆ ಪದ್ಧತಿಯಲ್ಲಿ ಗರಿಷ್ಠ ತೆರಿಗೆ ವಿನಾಯಿತಿ 12,500 ರೂಪಾಯಿ ವಿನಾಯಿತಿ ಇದೆ, 25,000 ರೂಪಾಯಿ ತನಕ ರಿಯಾಯಿತಿ ಸೌಲಭ್ಯ ಪಡೆಯಬಹುದು. ಆದಾಯ ಮಟ್ಟವು ತೆರಿಗೆ ವ್ಯಾಪ್ತಿ ಮಿತಿ ಒಳಗೆ ಇದ್ದರೆ ವಿನಾಯಿತಿ ಸೌಲಭ್ಯ ಸಿಗಲಿದೆ.

ಯಾವಾಗ ಕೊನೆ ದಿನ:

 

Image Source: The Indian Express

 

ITR ಅನ್ನು ಸಲ್ಲಿಕೆ ಮಾಡಲು 2023 ರಲ್ಲಿ ಎಪ್ರಿಲ್ ನಿಂದಲೇ ಆರಂಭ ಆಗಿತ್ತು ಆದರೆ ಈ ಬಾರಿ ಲೋಕಸಭೆ ಚುನಾವಣೆ ಫಲಿತಾಂಶ ಇತರ ಕಾರಣಕ್ಕೆ ಜುಲೈ 31 ರ ತನಕ ಕೂಡ ITR ಸಲ್ಲಿಕೆಮಾಡಬಹುದು. ತೆರಿಗೆ ವಿನಾಯಿತಿ ಮೀರಿದರೆ ITR ಸಲ್ಲಿಕೆಯಾಗಬೇಕು. ಅಷ್ಟು ಮಾತ್ರವಲ್ಲದೆ ವಯೋವೃದ್ಧರಿಗೆ ಕೂಡ 60ವರ್ಷ ಮೀರಿದರೆ 2.5ಲಕ್ಷ ರೂಪಾಯಿ, 60 ದಿಂದ 80 ವರ್ಷದವರಿಗೆ 3 ಲಕ್ಷ ರೂಪಾಯಿ ಹಾಗೂ 80 ವರ್ಷ ಮೇಲ್ಪಟ್ಟವರಿಗೆ 5 ಲಕ್ಷ ರೂಪಾಯಿ ವಿನಾಯಿತಿ ಕೂಡ ಇದೆ.

advertisement

Leave A Reply

Your email address will not be published.