Karnataka Times
Trending Stories, Viral News, Gossips & Everything in Kannada

CM Siddaramaiah: ಸ್ಪೆಷಲ್ ಮೀಟಿಂಗ್ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ! ಗ್ಯಾರಂಟಿ ಯೋಜನೆ ಬಗ್ಗೆ ಹೊಸ ನಿರ್ಧಾರ

advertisement

ಈಗಾಗಲೇ ಸಿದ್ದರಾಮಯ್ಯ ಈ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದು ಹೋಗಿದೆ. ಅಧಿಕಾರಕ್ಕೆ ಬಂದ ಕೂಡಲೇ ಐದು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ನೀಡುವ ವಿಚಾರದ ಬಗ್ಗೆ ವಾಗ್ದಾನವನ್ನು ಮಾಡಿದ್ದ ಸಿದ್ದರಾಮಯ್ಯ (CM Siddaramaiah) ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಕಳೆದ ಒಂದು ವರ್ಷಗಳಿಂದಲೂ ಕೂಡ ಸರಿಯಾದ ರೀತಿಯಲ್ಲಿ ಅದನ್ನ ಜನರಿಗೆ ಪೂರೈಸುವಂತಹ ಕೆಲಸವನ್ನು ಕೂಡ ಮಾಡಿಕೊಂಡು ಬರ್ತಾ ಇದೆ.

WhatsApp Join Now
Telegram Join Now

ಒಂದು ಕಡೆಯಲ್ಲಿ ಇದರಿಂದಾಗಿ ಸರ್ಕಾರದ ಸಾಲ (Loan) ಹೆಚ್ಚಾಗುತ್ತಿದೆ ಎನ್ನುವಂತಹ ವಿರೋಧದ ಮಾತುಗಳು ಕೇಳಿ ಬರ್ತಾ ಇದ್ರು ಕೂಡ ಇದರ ಫಲಾನುಭವಿಗಳು ಮಾತ್ರ ನಮಗೆ ಇದರಿಂದ ಸಾಕಷ್ಟು ಲಾಭ ಸಿಗುತ್ತದೆ ಅದು ನಮಗೆ ಪ್ರಮುಖ ಎಂಬ ರೀತಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಈ ಯೋಜನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ.

ಇನ್ನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸೀಟ್ ಗಳನ್ನ ಗೆಲ್ಲೋದಕ್ಕೆ ವಿಫಲವಾದ ಸಂದರ್ಭದಲ್ಲಿ ಕೂಡ ಸಾಕಷ್ಟು ಬಾರಿ ಆ ಪಕ್ಷದ ಶಾಸಕರೇ ಗ್ಯಾರಂಟಿ ಯೋಜನೆಗಳಿಂದಾಗಿ (Guarantee Scheme) ನಾವು ಸೋತೆವೋ ಎನ್ನುವ ರೀತಿಯಲ್ಲಿ ಮಾತನಾಡಿದರು ಕೂಡ ಸಿದ್ದರಾಮಯ್ಯ (CM Siddaramaiah) ಅವರು ಏನೇ ಆಗಲಿ ನಾವು ಅಧಿಕಾರದಲ್ಲಿ ಇರುವವರೆಗೂ ಕೂಡ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳನ್ನು ನೀಡುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವ ರೀತಿಯಲ್ಲಿ ಮಾತನಾಡಿದರು. ಹೀಗಾಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಇದ್ದ ಅನುಮಾನ ಸಂಪೂರ್ಣವಾಗಿ ಪರಿಹಾರವಾಗಿದೆ ಎಂದು ಹೇಳಬಹುದಾಗಿದೆ.

ಇತ್ತೀಚಿಗಷ್ಟೇ ಮೀಟಿಂಗ್ ಕರೆದು ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

 

advertisement

Image Source: Moneycontrol

 

ಈಗಾಗಲೇ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನ (Guarantee Schemes) ರಾಜ್ಯ ಸರ್ಕಾರ ಜಾರಿಗೆ ತಂದಿರುವಂತಹ ವಿಚಾರ ನಿಮಗೆ ತಿಳಿದಿದ್ದು ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಶ್ರೀ ಸಿದ್ದರಾಮಯ್ಯ (CM Siddaramaiah) ಅವರು ಈ ಎಲ್ಲಾ ಯೋಜನೆಗಳಿಗೆ ಸಂಬಂಧಪಟ್ಟಂತಹ ಇಲಾಖೆಯ ಪ್ರಮುಖ ಅಧಿಕಾರಿಗಳ ಮೀಟಿಂಗ್ ಕರೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

 

Image Source: Vistara News

 

ಈ ಮೀಟಿಂಗಲ್ಲಿ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಜನರಿಗೆ ಸರಿಯಾದ ಸಮಯಕ್ಕೆ ಪ್ರಮುಖವಾಗಿ ತಲುಪಿಸುವಂತಹ ಕೆಲಸವನ್ನು ಚುರುಕುಗೊಳಿಸುವಂತಹ ವಿಚಾರದ ಬಗ್ಗೆ ಮಾಹಿತಿಯನ್ನು ನೀಡಿದ್ದಾರಂತೆ. ಇವುಗಳಲ್ಲಿ ಸಾಕಷ್ಟು ಯೋಜನೆಗಳನ್ನು ಸರಿಯಾದ ಸಮಯದಲ್ಲಿ ಜನರಿಗೆ ತಲುಪಿಸುತ್ತಿಲ್ಲ ಎನ್ನುವಂತಹ ಆರೋಪ ಕೇಳಿ ಬಂದಲ್ಲಿ ಸಿದ್ದರಾಮಯ್ಯ ಈ ಮೀಟಿಂಗ್ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಈ ಮೀಟಿಂಗ್ ನಂತರದಿಂದ ಯೋಜನೆಗಳು ಸರಿಯಾದ ಸಮಯಕ್ಕೆ ಫಲಾನುಭವಿಗಳನ್ನು ತಲುಪುವಂತಹ ಸಾಧ್ಯತೆ ಹೆಚ್ಚಾಗಬಹುದು ಎಂದು ಹೇಳಬಹುದು.

ಮುಖ್ಯಮಂತ್ರಿಗಳೇ ಈ ರೀತಿಯ ವಿಚಾರಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಆದೇಶವನ್ನು ಹೊರಡಿಸಿದರೆ ಖಂಡಿತವಾಗಿ ಅಧಿಕಾರಿಗಳು ಕೂಡ ಸರಿಯಾದ ಸಮಯಕ್ಕೆ ಕೆಲಸ ಮಾಡುವಂತಹ ಶಿಸ್ತನ್ನು ಬೆಳೆಸಿಕೊಳ್ಳುತ್ತಾರೆ ಎಂಬುದನ್ನ ನಾವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.