Karnataka Times
Trending Stories, Viral News, Gossips & Everything in Kannada

Gold Price: ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ತಜ್ಞರು! ಯಾವ ತಿಂಗಳಲ್ಲಿ ಕುಸಿಯಲಿದೆ ಗೊತ್ತಾ ದರ.

advertisement

Gold Price: ಚಿನ್ನ ಅನ್ನೋದು ನಿಜಕ್ಕೂ ಕೂಡ ಪ್ರಪಂಚದ ಯಾವುದೇ ಮೂಲೆಗೆ ಹೋಗಿ ನೀವು ಅದರ ವ್ಯಾಲ್ಯೂ ಖಂಡಿತವಾಗಿ ಕಡಿಮೆಯಾಗುವುದಿಲ್ಲ. ನಿಜಕ್ಕೂ ಕೂಡ ಒಂದಲ್ಲ ಒಂದು ಸಮಯದಲ್ಲಿ ಇದರ ಬೆಲೆ ಕಡಿಮೆ ಆಗಬಹುದು ಆದರೆ ಕೊನೆಗೆ ಹೋಗಿ ಇದರ ಬೆಲೆ ಏರಿಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಹಳದಿ ಲೋಹವನ್ನು ಖರೀದಿ ಮಾಡುವುದಕ್ಕೆ ಪ್ರತಿಯೊಬ್ಬರೂ ಕೂಡ ಇಷ್ಟಪಡುತ್ತಾರೆ ಹಾಗೂ ಖರೀದಿಸುವಂತಹ ಜನರಲ್ಲಿ ಕೂಡ ಇದರ ಬಗ್ಗೆ ಅಭಿಪ್ರಾಯ ಬೇರೆ ಬೇರೆ ಆಗಿರುತ್ತೆ.

WhatsApp Join Now
Telegram Join Now

ಶ್ರೀಮಂತ ಹಾಗೂ ಹಣ ಇರುವಂತಹ ವರ್ಗದ ಜನರು ಇದನ್ನ ತಮ್ಮ ಅಲಂಕಾರಿಕ ವಸ್ತುವಿನ ರೂಪದಲ್ಲಿ ಖರೀದಿ ಮಾಡ್ತಾರೆ ಹಾಗೂ ಇದು ಕೇವಲ ಅವರ ಪ್ರತಿಷ್ಠೆಗೆ ಒಂದು ತೋರಿಕೆಯ ವಸ್ತುವಾಗಿರುತ್ತದೆ ಅನ್ನೋದನ್ನ ಈ ಮೂಲಕ ನಾವು ತಿಳಿದುಕೊಳ್ಳಬಹುದು. ಆದರೆ ಮಧ್ಯಮ ಹಾಗೂ ಬುದ್ಧಿವಂತ ವರ್ಗದ ಜನರು ಮಾತ್ರ ಒಂದಲ್ಲ ಒಂದು ಸಮಯದಲ್ಲಿ ತಾವು ಖರೀದಿಸಿರುವಂತಹ ಹಣಕ್ಕಿಂತ ಚಿನ್ನದ ಬೆಲೆ ಜಾಸ್ತಿ ಹೋದಾಗ ಅವುಗಳನ್ನು ಮಾರಾಟ ಮಾಡಬಹುದು ಅಂತ ಅಥವಾ ಕಷ್ಟದ ಸಂದರ್ಭದಲ್ಲಿ ನಮಗೆ ಸಹಾಯಕ ಆಗಲಿ ಅನ್ನುವ ಕಾರಣಕ್ಕಾಗಿ ಚಿನ್ನದ ಮೇಲೆ ಹಣವನ್ನು ಹೂಡಿಕೆ ಮಾಡಿದ್ರೆ ಅದನ್ನ ಮಾರಾಟ ಮಾಡಿ ಆ ಸಂದರ್ಭದಲ್ಲಿ ಕಂಡುಬರುವಂತಹ ಆರ್ಥಿಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು ಎನ್ನವಂತಹ ಆಸೆ ಅವರಲ್ಲಿ ಇರುತ್ತೆ.

In which month is gold price lowest
Image Source: Moneycontrol

advertisement

ಸದ್ಯದ ಮಟ್ಟಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಂಡು ಬರುತ್ತಿರುವಂತಹ ಕೆಲವೊಂದು ಬೆಳವಣಿಗೆಗಳು ಭಾರತದಲ್ಲಿ ಕೂಡ ಚಿನ್ನದ ಬೆಲೆ ಇಳಿಕೆ ಆಗೋದಕ್ಕೆ ಕಾರಣವಾಗುತ್ತದೆ ಎನ್ನುವಂತಹ ಮಾತು ಕೇಳಿ ಬರುತ್ತಿದೆ. ಸಾಮಾನ್ಯವಾಗಿ ಜಗತ್ತಿನಲ್ಲಿ ಯಾರ ಬಳಿ ಹೆಚ್ಚು ಚಿನ್ನ ಇರುತ್ತೋ ಜಗತ್ತಿನಲ್ಲಿ ಚಿನ್ನದ ಬೆಲೆಯನ್ನು ಕಂಟ್ರೋಲ್ ಮಾಡುವಂತಹ ಅಧಿಕಾರ ಕೂಡ ಅವರ ಬಳಿನೆ ಇರುತ್ತೆ ಅನ್ನೋದನ್ನ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇನ್ನು ಈ ಸನ್ನಿವೇಶದಲ್ಲಿ ನಮಗೆ ಎದುರು ಕಂಡುಬರುವುದು ಅಮೆರಿಕ ಹಾಗೂ ಚೀನಾ ದೇಶಗಳು ಎಂದು ಹೇಳಬಹುದು. ಇನ್ನು ಜುಲೈ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಆಗಲಿದೆ ಎನ್ನುವಂತಹ ಮಾತು ಕೇಳಿ ಬರ್ತಾ ಇತ್ತು ಅದರ ಸಾಧ್ಯತೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಜುಲೈ ತಿಂಗಳ ಅಂತ್ಯಕ್ಕೆ ಕಡಿಮೆಯಾಗಲಿದೆ ಚಿನ್ನದ ಬೆಲೆ!

ಸದ್ಯಕ್ಕೆ ಭಾರತ ದೇಶದಲ್ಲಿರುವಂತಹ ಚಿನ್ನದ ಬೆಲೆಯ ಬಗ್ಗೆ ಮಾತನಾಡುವುದಾದರೆ 22 ಕ್ಯಾರೆಟ್ ಒಂದು ಗ್ರಾಮ ಚಿನ್ನದ ಬೆಲೆ 6625 ರೂಪಾಯಿ ಆಗಿದೆ ಹಾಗೂ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 7228 ರೂಪಾಯಿ ಆಗಿದೆ. ಇನ್ನು ಸದ್ಯದ ಮಟ್ಟಿಗೆ ಕಂಡುಬರುತ್ತಿರುವಂತಹ ಚಿನ್ನದ ಬೆಲೆಯ ಇಳಿಕೆಯ ಟ್ರೆಂಡ್ ಅನ್ನು ನೋಡಿದರೆ ಜುಲೈ ತಿಂಗಳ ಅಂತ್ಯಕ್ಕೆ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 6500 ರೂಪಾಯಿಗಳ ಆಸು ಪಾಸಿನಲ್ಲಿ ಹಾಗೂ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 7100 ರೂಪಾಯಿ ಗಳ ಬೆಲೆಯ ಆಸುಪಾಸಿನಲ್ಲಿ ಕಂಡುಬರುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಹೇಳಬಹುದಾಗಿದೆ. ಆದರೆ ಭವಿಷ್ಯದಲ್ಲಿ ಅಂದರೆ ಒಂದೆರಡು ತಿಂಗಳುಗಳಲ್ಲಿ ಮತ್ತೆ ಚಿನ್ನದ ಬೆಲೆಯಲ್ಲಿ ಮತ್ತೆ ಚೇತರಿಕೆ ಕಂಡು ಬರುವಂತಹ ಸಾಧ್ಯತೆ ಹೆಚ್ಚಾಗಿದೆ.

In which month is gold price lowest
Image Source: Business Standard

advertisement

Leave A Reply

Your email address will not be published.