Karnataka Times
Trending Stories, Viral News, Gossips & Everything in Kannada

Senior Citizens: ದೇವಸ್ಥಾನ ತೀರ್ಥಯಾತ್ರೆಗೆ ಹೋಗುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್

advertisement

ಇಂದು ಹಿರಿಯ ನಾಗರಿಕರ (Senior Citizens) ಜೀವನ ಸುಧಾರಣೆ ಮಾಡಲು ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಿದೆ. ಈಗಾಗಲೇ ಬಸ್ ರೈಲು ಪ್ರಯಾಣ, ಇತ್ಯಾದಿಯಲ್ಲಿ ರಿಯಾಯಿತಿ ಕೂಡ ಘೋಷಣೆ ಮಾಡ್ತಾ ಇದೆ. ಅದೇ ರೀತಿ ವೃದ್ಧಾಪ್ಯದಲ್ಲಿ ಮಕ್ಕಳು ಮತ್ತು ಇತರೆ ಕುಟುಂಬದ ಸದಸ್ಯರಿಂದ ನಿರ್ಲಕ್ಷ ಉಂಟಾದ ಹಿರಿಯ ನಾಗರಿಕರಿಗೆ ‌ 60 ವರ್ಷ ಮೇಲ್ಪಟ್ಟ ವೃದ್ಧರಿಗೆ 400 ರೂ. ಮಾಸಾಶನವನ್ನು ಕೂಡ ನೀಡ್ತಾ ಇದೆ. ಹಾಗೆಯೇ ವಯೋವೃದ್ಧರು ತಮಗಾಗಿರುವ ತೊಂದರೆ, ಶೋಷಣೆ ಇತ್ಯಾದಿಗಳಿಂದ ಹೊರಬರುವಂತೆ ಮಾಡಲು ಜಿಲ್ಲಾ ಕೇಂದ್ರದಲ್ಲಿ ಪೊಲೀಸ್‌ ಕಮೀಷನರ್‌ ಅವರ ಸಹಯೋಗದೊಂದಿಗೆ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಕೂಡ ಸ್ಥಾಪಿಸಲಾಗಿದೆ.

WhatsApp Join Now
Telegram Join Now

ಇದೀಗ ಹಿರಿಯ ನಾಗರಿಕರಿಗೆ (Senior Citizens) ಮಹಾರಾಷ್ಟ್ರ ಸರಕಾರವು ನೂತನ ಯೋಜನೆ ಯೊಂದನ್ನು ಘೋಷಣೆ ಮಾಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ, ಹೌದು ಹಿರಿಯ ನಾಗರಿಕರಿಗೆ ತೀರ್ಥಯಾತ್ರೆ ಯನ್ನು ಘೋಷನೆ ಮಾಡುವ ಮೂಲಕ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಹಿರಿಯ ನಾಗರಿಕರಿಗೆ ವಯಸ್ಸಾದ ಸಂದರ್ಭದಲ್ಲಿ ಜೀವನ ನಿಭಾಯಿಸುವುದು ಕಷ್ಟ, ಮನೆಯಲ್ಲಿ ಇತರರ ಹಣಕ್ಕೂ ಅವಲಂಭಿತ ರಾಗಿ ಇರಲು ಸಾಧ್ಯ ಆಗೋದಿಲ್ಲ‌ ಹಾಗಾಗಿ ಹಿರಿಯ ನಾಗರಿಕರ ತೀರ್ಥ ಯೋಜನೆ ಯನ್ನು ಪೂರೈಸಲು ಅಲ್ಲಿನ ಸರಕಾರ ಮುಂದಾಗಿದೆ.

ಮಹಾರಾಷ್ಟ್ರ ಸರಕಾರವು ಈ ಯೋಜನೆ ಜಾರಿ ಮಾಡಿದೆ:

 

advertisement

Image Source: The Daily Guardian

 

ವಿಧಾನಸಭೆಯಲ್ಲಿ ಈ ಯೋಜನೆ ಬಗ್ಗೆ ಚರ್ಚೆ ಮಾಡಿದ್ದು ಯಾತ್ರ ಸ್ಥಳಗಳಿಗೆ ಭೇಟಿ ನೀಡಿ ನೀಡಲು ಸಾಧ್ಯವಾಗದ ವೃದ್ಧರಿಗೆ, ಈ ಯೋಜನೆ ನೆರವಾಗಲಿದೆ. ಎಲ್ಲ ಧರ್ಮದ ಹಿರಿಯ ನಾಗರಿಕರು (Senior Citizens) ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಸಿಗುವಂತೆ ಹಾಗೂ ಅವರಿಗೆ ಇದರ ಅನುಕೂಲ ಮಾಡಿಕೊಡುವ ಸಲುವಾಗಿ ‌ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂದೆ (Maharashtra CM Eknath Shinde) ಅವರು ಮುಖ್ಯಮಂತ್ರಿ ತೀರ್ಥ ದರ್ಶನ್‌ ಈ ಯೋಜನೆ ಯನ್ನು ಘೋಷಣೆ ಮಾಡಿದರು.

 

Image Source: Samayam Malayalam

 

ಹಣಕಾಸಿನ ಸಮಸ್ಯೆಯಿಂದ ಹಿರಿಯ ನಾಗರಿಕರು (Senior Citizens) ತೀರ್ಥಯಾತ್ರೆ ಮಾಡುವ ಆಸೆ ಇದ್ದರೂ ಇದು ನೆರವೆರುವುದಿಲ್ಲ. ಹಾಗಾಗಿ ಹಿರಿಯ ನಾಗರಿಕರ ಕನಸನ್ನು ನನಸು ಮಾಡಲು ಈ ಯೋಜನೆ ಸಹಕಾರಿ ಯಾಗಲಿದೆ. ಜೊತೆಗೆ ತೀರ್ಥಯಾತ್ರೆಗೆ ಹೇಗೆ ಹೋಗಬೇಕು ಎಂಬುದರ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಇರುವುದಿಲ್ಲ. ಇಂಥವರಿಗೆ ತೀರ್ಥ ದರ್ಶನ ಯೋಜನೆ ಉಪಯೋಗವಾಗಲಿದೆ. ಇದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರಚಿಸಿ, ತೀರ್ಥಕ್ಷೇತ್ರಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗುವುದು ಎಂದು ಅಲ್ಲಿನ ಮುಖ್ಯಮಂತ್ರಿ ತಿಳಿಸಿದರು. ಹಾಗಾಗಿ ಈ ಸೌಲಭ್ಯ ಕರ್ನಾಟಕದಲ್ಲೂ ಜಾರಿ ಯಾಗಲಿ ಎಂದು ಹೆಚ್ಚಿನ ಹಿರಿಯ ನಾಗರಿಕರು ಕಾಯ್ತಾ ‌ಇದ್ದಾರೆ.ಹಾಗಾಗಿ ಕರ್ನಾಟಕ ದಲ್ಲಿಯು ಈ ಯೋಜನೆ ಜಾರಿ ಆಗುವ ಸಾಧ್ಯ ತೆ ಕೂಡ ಇರಲಿದೆ.

advertisement

Leave A Reply

Your email address will not be published.