Karnataka Times
Trending Stories, Viral News, Gossips & Everything in Kannada

Electricity Meter: ತಂದೆ ತಾಯಿ ತಾತನ ಹೆಸರಲ್ಲಿ ವಿದ್ಯುತ್ ಮೀಟರ್ ಇದ್ದವರಿಗೆ ಹೊಸ ಸೂಚನೆ

advertisement

ಇಂದು ಆಸ್ತಿ , ಮನೆ ಇತ್ಯಾದಿಗಳು ಮನೆಯ ಹಿರಿಯ ಹೆಸರಲ್ಲಿ ಇರುವುದು ಕಾಣಬಹುದು ಅದರಲ್ಲಿಯೂ ಹಳೆ ಮನೆ ಆಗಿದ್ದರೆ ಅದರಲ್ಲಿ ಮನೆಯ ತಾತ ಮುತ್ತಾತನ ಹೆಸರಿಗೂ ಕೂಡ ಇರಲಿದೆ ಇದು ಮುಂದಿನ ದಿನದಲ್ಲಿ ಸಮಸ್ಯೆ ಆಗಲಿದೆ. ಕರೆಂಟ್ ಮೀಟರ್ ಬೋರ್ಡ್ (Electricity Meter Board) ನಲ್ಲಿ ತಾತ , ಅಥವಾ ತಂದೆಯ ಹೆಸರಿದ್ದು ಅದನ್ನು ನೀವು ವರ್ಗಾವಣೆ ಮಾಡಲು ಬಯಸಿದರೆ ಅದು ಸಾಮಾನ್ಯ ವಿಚಾರ ಆಗಿರಲಾರದು ಹಾಗಾಗಿ ನೀವು ಹೇಗೆ ಅದನ್ನು ನಿಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬೇಕು ಎಂಬ ಕಡೆ ಗಮನಿಸಬೇಕು ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ರಾಜ್ಯದಲ್ಲಿ ಗೃಹಜ್ಯೋತಿ ಸೌಲಭ್ಯ ಪಡೆಯುವಾಗ ಯಾರ ಹೆಸರಲ್ಲಿ ಮೀಟರ್ ಬೋರ್ಡ್ (Electricity Meter Board) ಇದೆ ಎಂಬುದನ್ನು ಕೂಡ ನೋಡುತ್ತಾರೆ. ಕರೆಂಟ್ ಬಿಲ್ ನಲ್ಲಿ ಅಕೌಂಟ್ ಐಡಿ ಜೊತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೂಡ ಸೂಚನೆ ನೀಡಲಾಗುತ್ತಿದ್ದು ಅನೇಕ ಕಡೆ ಲಿಂಕ್ ಮಾಡಲಾಗುತ್ತಿದೆ ಎಂದು ಹೇಳಬಹುದು. ಮೀಟರ್ ಬೋರ್ಡ್ ತಂದೆ ಅಥವಾ ತಾತನ ಹೆಸರಲ್ಲಿ ಇದ್ದರೆ ಅವರು ಅಸುನೀಗಿದರೆ ಸಮಸ್ಯೆ ಆಗಲಿದೆ ಹಾಗಾಗಿ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಇಲ್ಲಿ ನಾವು ಸರಳ‌ಮಾರ್ಗ ತಿಳಿಸಲಿದ್ದೇವೆ.

ದಾಖಲೆ ಅಗತ್ಯ:

ಇದಕ್ಕಾಗಿ ಆಧಾರ್ ಕಾರ್ಡ್ ಅನ್ನು ಹೊಂದಿದ್ದು ನೀವು ಅರ್ಜಿ ಸಲ್ಲಿಸಬೇಕು. 200 ರೂಪಾಯಿ ಸ್ಟ್ಯಾಂಪ್ ಪೇಪರ್ ಮೇಲೆ ಒಪ್ಪಿಗೆ ಸೂಚಿಸಿ ಲಿಖಿತ ಅಂಶ ಇರಬೇಕು.ಅದರಲ್ಲಿ ವಿದ್ಯುತ್ ಖಾತೆ ಸಂಖ್ಯೆ , ಅರ್ಜಿ ನಮೂನೆಯಲ್ಲಿ ಸಹಿ ಇರಬೇಕು. ಒಂದು ವೇಳೆ ವಿದ್ಯುತ್ ಮೀಟರ್ (Electricity Meter) ಹೊಂದಿದ್ದವರು ಮರಣ ಹೊಂದಿದ್ದರೆ ಆಗ ಅವರ ಮರಣ ಪತ್ರ ಸಲ್ಲಿಕೆ ಮಾಡಬೇಕು ಹಾಗೇ ಅವರು ಜೀವಂತವಾಗಿ ಇದ್ದರೆ ಒಪ್ಪಿಗೆಯ ಸಹಿ ಮಾಡಿಸಿಕೊಳ್ಳಬೇಕು. ಋಣ ರಹಿತ ರಶಿತಿ, ಹೆಸರು ಬದಲಾವಣೆಯ ಅರ್ಜಿ ಹೊಂದಿದ್ದು ಅರ್ಜಿ ಹಾಕುವ ಮೂಲಕ ವಿದ್ಯುತ್ ಮೀಟರ್ ಹೆಸರು ಬದಲಾವಣೆ ಮಾಡಬಹುದು.

advertisement

ಬಾಕಿ ಮೊತ್ತ ಪಾವತಿಗೆ ಸೂಚನೆ:

 

Image Source: Deccan Herald

 

ಅನೇಕ ಕಡೆ ಗೃಹಜ್ಯೋತಿ ಯೋಜನೆ (Gruha Jyothi Yojana) ಸೌಲಭ್ಯ ಪಡೆಯಲು ಕಷ್ಟಕರ ಆಗುತ್ತಿದೆ ಹಾಗಾಗಿ ಅರ್ಜಿ ಸಲ್ಲಿಸಿ ಆ ಬಳಿಕ ವಿದ್ಯುತ್ ಮೀಟರ್ ಬೋರ್ಡ್ (Electricity Meter Board) ನಲ್ಲಿ ನಿಮ್ಮ ತಾತ ಅಥವಾ ದೆಯ ಹೆಸರು ಇದ್ದರೆ ಅವರ ಆಧಾರ್ ಕಾರ್ಡ್ ನೀಡಬೇಕಾಗಲಿದೆ. ಸಾಲ ಅಥವಾ ಇತರ ಪ್ರಕ್ರಿಯೆಗೆ ಇದು ಪ್ರಮುಖ ದಾಖಲೆ ಆಗುವ ಕಾರಣ ಹೆಸರು ಶೀಘ್ರ ಬದಲಾಯಿಸುವುದು ಅಗತ್ಯವಾಗಿದೆ. ಹಾಗಾಗಿ ಹಳೆ ಬಾಕಿ ಮೊತ್ತ ಪಾವತಿ ಮಾಡಿ ಆ ಬಳಿಕ ಮೀಟರ್ ನಲ್ಲಿ ಇರುವ ಹೆಸರು ಬದಲಾಯಿಸಿ ಅನಂತರ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಸರಕಾರ ಸೂಚನೆ ನೀಡಿದೆ.

ಈ ಪ್ರಕ್ರಿಯೆ ಅನುಸರಿಸಿ:

ನೀವು ಎಲ್ಲ ದಾಖಲೆಯ ಸಮೇತ ವಿದ್ಯುತ್ ಇಲಾಖೆಯ ಇನ್ವಾರ್ಡ್ ವಿಭಾಗಕ್ಕೆ ಅರ್ಜಿ ಸಲ್ಲಿಸಬೇಕು. ಅದೇ ರೀತಿ ನಿಮ್ಮ ತಾಲೂಕಿನಲ್ಲಿ ಕೂಡ AWD ಕಚೇರಿಯಲ್ಲಿ ಈ ಸಂಬಂಧಿತ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಪಡೆದು ಅದನ್ನು ಸರಿಯಾಗಿ ಪರಿಶೀಲನೆ ಮಾಡಿದ್ದ ಬಳಿಕ ಸರಿ ಇದ್ದರೆ ಅನುಮೋದನೆ ದೊರೆತು ಆ ಕೂಡಲೇ ನಿಮ್ಮ ತಾತ ಅಥವಾ ತಂದೆಯ ಹೆಸರಲ್ಲಿ ಇದ್ದ ವಿದ್ಯುತ್ ಮೀಟರ್ ನಲ್ಲಿ ಇರುವ ಹೆಸರು ಕೂಡ ವರ್ಗಾವಣೆ ಮಾಡಲಾಗುವುದು.

advertisement

Leave A Reply

Your email address will not be published.