ಭಾರತದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಕಾನೂನುಗಳು ಇವೆ. ಕಾನೂನಿನ ಪ್ರಕಾರ ಖಾಸಗಿ ಜಮೀನು ಮತ್ತು ಸರ್ಕಾರಿ ಜಮೀನಿಗೆ ಸಂಬಂಧಪಟ್ಟ ಹಾಗೆ ಪ್ರತ್ಯೇಕ ನಿಯಮಗಳನ್ನು ಹೇಳಲಾಗುತ್ತದೆ. ಇದೀಗ ಸುಪ್ರೀಂ ಕೋರ್ಟ್ (Supreme Court) ಮಾಲೀಕತ್ವದ ಹಕ್ಕಿನ ಬಗ್ಗೆ ತೀರ್ಮಾನವನ್ನು ನೀಡಿದ್ದು ಖಾಸಗಿ ಆಸ್ತಿ (Private Property) ವಶಪಡಿಸಿಕೊಳ್ಳುವುದರ ಬಗ್ಗೆ ಈ ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಬಿಲ್ಡರ್ ಗಳು ಅಥವಾ ಆಸ್ತಿ ಹೊಂದಿರುವವರು ತಮ್ಮ ಆಸ್ತಿಯನ್ನು ಮನೆ ಅಂಗಡಿ ಸಾಗುವಳಿ ಭೂಮಿ ಹೀಗೆ ಬೇರೆ ಬೇರೆ ರೀತಿಯಾಗಿ ಪರಿವರ್ತಿಸಿ ಅದನ್ನು ಬಾಡಿಗೆ ಕೊಡುತ್ತಾರೆ. ಬಾಡಿಗೆ ಹಣದಿಂದ ಇನ್ನಷ್ಟು ಆಸ್ತಿ ಗಳಿಸುತ್ತಾರೆ. ಎಷ್ಟು ಸಾರಿ ದೇಶದಲ್ಲಿ ತಮ್ಮ ಆಸ್ತಿಯನ್ನು ಬಾಡಿಗೆ ಕೊಟ್ಟು ವಿದೇಶಕ್ಕೆ ಹೋಗಿ ವಾಸಿಸುವವರು ಇದ್ದಾರೆ ಅಂತಹ ಸಂದರ್ಭದಲ್ಲಿ ಬಾಡಿಗೆ ಹಣ ನೇರವಾಗಿ ಅವರ ಖಾತೆಗೆ ಸಲ್ಲುತ್ತದೆ.
ಆದರೆ ಇಲ್ಲಿ ಆಸ್ತಿ ಮಾಲೀಕರು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ನಿಮ್ಮ ಆಸ್ತಿಗೆ ಸಂಬಂಧಪಟ್ಟ ಹಾಗೆ ಸರಿಯಾದ ತಿಳುವಳಿಕೆ ಹೊಂದಿಲ್ಲದೆ ಇದ್ದರೆ ನಿಮ್ಮ ಬಾಡಿಗೆದಾರರು ಆ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಸಾಧ್ಯತೆ ಇದೆ ಈ ಬಗ್ಗೆ ಕಾನೂನು ಏನು ಹೇಳುತ್ತೆ ನೋಡೋಣ.
ಮಾಲಿಕತ್ವದ ಹಕ್ಕು!
ಯಾವುದೇ ವ್ಯಕ್ತಿ ಹನ್ನೆರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಒಂದು ಮನೆಯಲ್ಲಿ ಅಥವಾ ಖಾಸಗಿ ಜಾಗ (Private Property) ದಲ್ಲಿ ವಾಸಿಸುತ್ತಿದ್ದರೆ, ಆತ ಆ ಮನೆ ಅಥವಾ ಜಾಗವನ್ನು ತನ್ನದಾಗಿಸಿಕೊಳ್ಳಬಹುದು. ಆದರೆ ಇದಕ್ಕೂ ಅದರದ್ದೇ ಆದ ನಿಯಮಗಳು ಇವೆ.
ಆಸ್ತಿ ಸ್ವಾಧೀನ ಪಡಿಸಿಕೊಳ್ಳಲು ಪಾಲಿಸಬೇಕಾದ ಶರತ್ತುಗಳು!
- 12 ವರ್ಷಕ್ಕೂ ಹೆಚ್ಚಿನ ಅವಧಿ ಒಂದೇ ಜಾಗದಲ್ಲಿ ವಾಸಿಸುತ್ತಿರುವುದಕ್ಕೆ ದಾಖಲೆ ಕೊಡಬೇಕು
- ವಿದ್ಯುತ್ ಬಿಲ್, ಕರೆಂಟ್ ಬಿಲ್ ಮತ್ತು ಇತರ ಬಿಲ್ ಗಳನ್ನು ಹೊಂದಿರಬೇಕು
- ನಿರಂತರವಾಗಿ ಅದೇ ಜಾಗದಲ್ಲಿ ವಾಸಿಸುತ್ತಿರಬೇಕು ಅವಧಿ ಬ್ರೇಕ್ ಆದರೆ ಸ್ವಾದೀನ ಪಡಿಸಿಕೊಳ್ಳಲು ಸಾಧ್ಯವಿಲ್ಲ.
- 12 ವರ್ಷಗಳಿಂದ ಯಾರು ಆ ಭೂಮಿಯ ಮೇಲೆ ಮಾಲೀಕತ್ವದ ಹಕ್ಕು ಪಡೆದುಕೊಂಡಿಲ್ಲವಾದರೆ ಆ ಭೂಮಿಯಲ್ಲಿ ವಾಸಿಸುವವರೇ ಅದನ್ನು ಸ್ವಾದಿನ ಪಡಿಸಿಕೊಳ್ಳಬಹುದು.
ಆಸ್ತಿ ಮಾಲಿಕತ್ವದ ಮೇಲೆ ಇರುವ ಸೆಕ್ಷನ್ಗಳು!
ಸೆಕ್ಷನ್ 406 – ಆಸ್ತಿ ವಿಚಾರ ಬಂದಾಗ ಸಾಕಷ್ಟು ಸಂದರ್ಭದಲ್ಲಿ ನಂಬಿಕೆಯ ಮೇಲೆ ಆಸ್ತಿ ವಿಚಾರ ನಿಂತಿರುತ್ತದೆ. ಅಂದರೆ ಒಬ್ಬರನ್ನ ಒಬ್ಬರು ನಂಬಿ ಅವರಿಗೆ ಆಸ್ತಿಯನ್ನು ಬಿಟ್ಟು ಕೊಟ್ಟಿರಬಹುದು ಆದರೆ ಆ ವ್ಯಕ್ತಿ ನಂಬಿಕೆ ದ್ರೋಹ ಮಾಡಿ ಆಸ್ತಿಯನ್ನು ತನ್ನದೇ ಎಂದು ಹೇಳುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ 406 ರ ದೂರು ದಾಖಲಿಸಬಹುದು.
ಸೆಕ್ಷನ್ 467- ಯಾವುದೇ ವ್ಯಕ್ತಿ ನಗಲು ದಾಖಲೆಗಳನ್ನು ಮಾಡಿ ಯಾವುದೇ ಆಸ್ತಿಯನ್ನು ಸ್ವಾಧೀನ ಪಡಿಸಿಕೊಂಡಿದ್ದರೆ ಅಂತಹ ವ್ಯಕ್ತಿಯ ವಿರುದ್ಧ ಸೆಕ್ಷನ್ 467ರ ಅಡಿಯಲ್ಲಿ ದೂರು ದಾಖಲಿಸಬಹುದು.