Karnataka Times
Trending Stories, Viral News, Gossips & Everything in Kannada

BPL Card: ಇಂತಹವರಿಗೆ ಎಲ್ಲರಿಗಿಂತ ಮೊದಲು ಸಿಗುತ್ತೆ BPL ಕಾರ್ಡ್! ರಾಜ್ಯ ಸರ್ಕಾರದ ಅಧಿಕೃತ ಘೋಷಣೆ

advertisement

ರಾಜ್ಯದಲ್ಲಿ ಬಡ ವರ್ಗದ ಜನತೆಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಾ ಬಂದಿದೆ.ಅದರಲ್ಲಿ ಆಹಾರ ಇಲಾಖೆ ವಿತರಣೆ ಮಾಡುವ ಆಹಾರ ಧಾನ್ಯಗಳು ಕೂಡ ಒಂದಾಗಿದ್ದು ಬಡ ವರ್ಗದ ಜನತೆ ಇದರ ನೆರವನ್ನು ಪಡೆಯುತ್ತಿದೆ.ಇದರ ಜೊತೆ ಅನ್ನ ಭಾಗ್ಯದ ಹಣ (Anna Bhagya Money) ಕೂಡ ಖಾತೆಗೆ ಜಮೆ ಯಾಗ್ತಾ ಇದೆ.ಆದರೆ ಸರಕಾರದ ಯಾವುದೇ ಸೌಲಭ್ಯ ಸಿಗಬೇಕಾದರೂ ರೇಷನ್ ಕಾರ್ಡ್ (Ration Card) ಕಡ್ಡಾಯ ವಾಗಿದ್ದು ಇದೀಗ ಹೊಸ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸರಕಾರ ಅಪ್ಡೇಟ್ ಮಾಹಿತಿ ಯನ್ನು ನೀಡಿದೆ.

WhatsApp Join Now
Telegram Join Now

ಅನುಮೋದನೆ ಸಿಕ್ಕಿದೆ:

ಸರಕಾರದ ಯಾವುದೇ ಸೌಲಭ್ಯ ಸಿಗಬೇಕಾದರೂ ಈ ರೇಷನ್ ಕಾರ್ಡ್ ಕಡ್ಡಾಯ ವಾಗಿ ಬೇಕಿದ್ದು ಇದೀಗ ಆರೋಗ್ಯ ಸಮಸ್ಯೆ ಇದ್ದಲ್ಲಿ ಇಂತವರಿಗೆ ಬೇಗನೆ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸೂಚನೆ ನೀಡಿದೆ. ಕ್ಯಾನ್ಸರ್, ಕಿಡ್ನಿ, ಹೃದಯ ಸೇರಿ ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹೊಸ ಬಿಪಿಎಲ್​ (New BPL Card) ನೀಡಲು ಆಹಾರ ಇಲಾಖೆ ಮುಂದಾಗಿದ್ದು ಜತೆಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉದ್ದೇಶದಿಂದ 3 ವರ್ಷದ ಹಿಂದೆ ಸಲ್ಲಿಕೆಯಾದ ಅರ್ಜಿಗಳನ್ನು ವಿಶೇಷ ವೈದ್ಯಕಿಯ ಎಂದು ಪರಿಗಣಿಸಿ ವಿಲೇ ಮಾಡುವುದಕ್ಕೆ ಸೂಚನೆ ಕೂಡ ನೀಡಿದೆ.

ಹೀಗೆ ಮಾಡಿ:

 

advertisement

Image Source: informalnewz

 

  • ಆರೋಗ್ಯ ಸಮಸ್ಯೆ ಯಿಂದ ಬಳಲುತ್ತಿದ್ದವರು ಆಧಾರ್​ ಕಾರ್ಡ್​, ಆದಾಯ ದೃಢೀಕರಣ ಪತ್ರ, ಮನೆ ಬಾಡಿಗೆ ದಾಖಲೆ ಜತೆಗೆ ಕಡ್ಡಾಯವಾಗಿ ವೈದ್ಯರಿಂದ ಆರೋಗ್ಯ ಸಂಬಂಧಿಸಿದ ಪ್ರಮಾಣಪತ್ರ ಸಲ್ಲಿಸಬೇಕು.
  • ರೇಷನ್ ಕಾರ್ಡ್​ ಅಗತ್ಯ ಬೇಕು ಎಂದು ಇದ್ದವರು ಸ್ಥಳಿಯ ಫುಡ್​ ಇನ್​ಸ್ಪೆಕ್ಟರ್​ ಭೇಟಿ ಮಾಡಿ ಮಾಹಿತಿ ಪಡೆಯಬಹುದು.
  • ಆಹಾರ ಇಲಾಖೆಯ ಅಧಿಕಾರಿ ದಾಖಲೆ ಪರಿಶೀಲಿಸಿ ಆಹಾರ ಇಲಾಖೆಯ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸುತ್ತಾರೆ.
  • ಆರೋಗ್ಯ ಸಮಸ್ಯೆಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ಖಾತ್ರಿ ಮಾಡಿಕೊಂಡ ಬಳಿಕ ಫುಡ್​ ಇನ್​ಸ್ಪೆಕ್ಟರ್​, ಅರ್ಜಿ ಅನುಮೋದನೆಗೆ ಉಪನಿರ್ದೇಶಕರಿಗೆ ಕಳುಹಿಸುತ್ತಾರೆ. ಬಳಿಕ ಉಪನಿರ್ದೇಶಕರು ಆಯುಕ್ತಾಲಯಕ್ಕೆ ಕಳುಹಿಸಿ ಅನುಮತಿ ದೊರೆಯಲಿದೆ
  • ತುರ್ತು ಚಿಕಿತ್ಸೆಗೆ ಒಳಗಾಗುವವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ಇಲ್ಲಿ ಮಾತ್ರ ಅರ್ಜಿ ಸಲ್ಲಿಸಿ:

ಹೊಸ ರೇಷನ್ ಕಾರ್ಡ್ (New Ration Card) ಗೆ ಅರ್ಜಿ ಹಾಕಲು ಖಾಸಗಿ ಸೈಬರ್​ ಸೆಂಟರ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಬೆಂಗಳೂರು ಒನ್​, ಕರ್ನಾಟಕ ಒನ್​, ಗ್ರಾಮ ಒನ್​ನಲ್ಲಿ,ಇತ್ಯಾದಿ ಸೇವಾಕೇಂದ್ರ ದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಆದರೆ ಸುಳ್ಳು ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.

advertisement

Leave A Reply

Your email address will not be published.