Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್‌ ಪ್ಲೇಟ್‌ ಅಳವಡಿಕೆಗೆ 2 ದಿನ ಬಾಕಿ ಇರುವಾಗಲೇ ಬಂತು ಹೊಸ ಆದೇಶ

advertisement

ಇಂದು ವಾಹನಗಳ ಸಂಖ್ಯೆ ಯಂತು ದಿನದಿಂದ ದಿನಕ್ಕೆ ಹೆಚ್ಚಳ ವಾಗಿದೆ. ವಾಹನ ಸವಾರರಿಗೆ ಎಷ್ಟೇ ಕಟ್ಟು‌ನಿಟ್ಟಿನ‌ ನಿಯಮ ಜಾರಿಗೆ ತಂದರೂ ಕೂಡ ಇಂದು ಅಪಘಾತದ ಸಂಖ್ಯೆ ಹೆಚ್ಚಾಗಿದೆ.‌ ಅದರ ಜೊತೆ ಹೆಚ್ಚಿನ‌ ವಾಹನ ಸವಾರರು ನಿಯಮ‌ ಉಲ್ಲಂಘನೆ ಕೂಡ ಮಾಡುತ್ತಿ ದ್ದಾರೆ.ಇದಕ್ಕೆ ಟ್ರಾಫಿಕ್ ನಿಯಮ ಕೂಡ ಬಿಗಿ ಗೊಳಿಸಿದ್ದು ವಾಹನ ಸವಾರರಿಗೆ ಸೂಚನೆ ನೀಡುತ್ತಲೇ ಬಂದಿದೆ. ಅದೇ ರೀತಿ ವಾಹನಗಳಿಗೆ ಎಚ್ ಎಸ್ ಅರ್ ಪಿ (HSRP) ಕೂಡ ಕಡ್ಡಾಯ ವಾಗಿದ್ದು ಈ ಬಗ್ಗೆ ಅಪ್ಡೇಟ್ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಕಡ್ಡಾಯ ಅಳವಡಿಕೆ:

 

Image Source: Spinny

 

2019ರ ಏಪ್ರಿಲ್ 1ರ ಮೊದಲು ನೋಂದಾಯಿಸಲಾದ ವಾಹನಗಳಿಗೆ ಹೈ-ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (HSRP Number Plate) ಕಡ್ಡಾಯ ಅಳವಡಿಸಬೇಕು ಎಂದು ಸಾರಿಗೆ ಇಲಾಖೆಯು ತಿಳಿಸಿದೆ. ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಈಗಾಗಲೇ ಸಾರಿಗೆ ಇಲಾಖೆ ಹಲವು ಭಾರಿ ಅವಕಾಶ ಕೂಡ ನೀಡಿದೆ.‌

ಇದೀಗ ನೀಡಿದ ಸಮಯ ಇನ್ನು ಎರಡೇ ದಿನದಲ್ಲಿ ಅವಧಿ ಮುಗಿಯಲಿದೆ. ಹೈಕೋರ್ಟ್‌ ಆದೇಶದ ಅನ್ವಯ ಜೂನ್‌ 12ರವರೆಗೆ ಅವಕಾಶ ಇತ್ತು. ಅದರ ಒಳಗೆ ಎಲ್ಲಾ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಮಾಹಿತಿ ನೀಡಿತ್ತು.

ಇದನ್ನು ಓದಿ: ಕಡಿಮೆ ಸೀಟ್ ಗೆದ್ದರೂ ಸಾಲ ಮಾಡಿಕೊಂಡಿದ್ದ ಎಲ್ಲಾ ರೈತರಿಗೆ ಸಿಹಿಸುದ್ದಿ ಕೊಟ್ಟ ಮೋದಿ, ಹೊಸ ಅಪ್ಡೇಟ್

advertisement

ಈ ವಾಹನ ಗಳಿಗೆ ಕಡ್ಡಾಯ:

 

Image Source: YouTube

 

ಏಪ್ರಿಲ್​ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಕೂಡ ಆಗಿದೆ. ಈಗಾಗಲೇ ಅವಧಿ ಮುಗಿದರೂ ಹೆಚ್​ಎಸ್​ಆರ್​​ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸಿಕೊಳ್ಳದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಈಗಾಗಲೇ ಮಾಹಿತಿ ಕೂಡ ನೀಡಿದೆ, ಎಚ್‌ಎಸ್‌ಆರ್‌ಪಿ (HSRP) ಅಳವಡಿಸದವರಿಗೆ ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು. ನಂತರವೂ ಅವರು ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ, ಅಳವಡಿಸು ವವರೆಗೆ 1,000 ರೂ. ದಂಡ ವಿಧಿಸಲಾಗುವುದು.

ಇದನ್ನು ಓದಿ: ಅನಿತಾ VS ಭವಾನಿ ರೇವಣ್ಣ! ಯಾರ ಬಳಿ ಹೆಚ್ಚು ಬಂಗಾರ ಇದೆ ಗೊತ್ತಾ? ಡಿಟೇಲ್ಸ್ ಇಲ್ಲಿದೆ

ನಕಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಡಿ:

ವಾಹನ ಸವಾರರು https://transport.karnataka.gov.in ಅಥವಾ www.siam.in ಮೂಲಕ ಮಾತ್ರ HSRP ಅಳವಡಿಕೆ ಮಾಡಿಕೊಳ್ಳಬೇಕು. ಯಾವುದೇ ತೆರೆದ ಮಾರುಕಟ್ಟೆಯಲ್ಲಿ‌ ನಕಲಿ ಹಾಲೋಗ್ರಾಮ್ ಕೆತ್ತಲಾದ ಅಥವಾ ಕೆತ್ತಿದಂತಹ ಅನುಕರಣೆಯ HSRP ಪ್ಲೇಟ್‌ಗಳನ್ನು ಅಳವಡಿಸುವಂತಿಲ್ಲ. ಸಾರ್ವಜನಿಕರು ಆನ್ ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ದೂರವಾಣಿ ಸಂಖ್ಯೆ 94498 63429/94498 63426 ಗಳಿಗೆ ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದಾಗಿದೆ

*ನಿಮ್ಮ ವಾಹನದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟನ್ನು ಅಧಿಕೃತ ವೆಬ್ ಸೈಟ್ ಗಳಲ್ಲಿ ಮಾತ್ರವೇ ಬುಕ್ ಮಾಡಿ. ನಕಲಿ ಕ್ಯೂಆರ್‌ ಕೋಡ್‌ ಹಾಗೂ ಲಿಂಕ್‌ಗಳ ಮೂಲಕ ಮಾಡಿ ಮೋಸ ಹೊಗಬೇಡಿ

advertisement

Leave A Reply

Your email address will not be published.