Karnataka Times
Trending Stories, Viral News, Gossips & Everything in Kannada

PM Modi: ಮೋದಿ ಹೇಳಿದ್ದಕ್ಕೆ ಕರ್ನಾಟಕದಿಂದಲೇ 10 ಲಕ್ಷ ಜನ ಈ ಯೋಜನೆಗೆ ಅರ್ಜಿ! ಸಾಲುಗಟ್ಟಿ ನಿಂತ ಜನ

advertisement

PM Surya Ghar Muft Bijli Yojana: ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅಡಿಯಲ್ಲಿ ಕರ್ನಾಟಕದಲ್ಲಿ ಈಗಾಗಲೇ ಕೇವಲ ಮೂರು ತಿಂಗಳ ಸಮಯಾವಧಿಯ ಒಳಗೆ ಹತ್ತು ಲಕ್ಷಕ್ಕೂ ಹೆಚ್ಚಿನ ಕುಟುಂಬಗಳು ಸೋಲಾರ್ ರೂಫ್ ಟಾಪ್ ಪ್ಯಾನೆಲ್ ಅನ್ನು ಅಳವಡಿಸಿಕೊಳ್ಳುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬಂತಹ ಮಾಹಿತಿ ಸಿಕ್ಕಿದೆ. ಸೋಲಾರ್ ಬಳಕೆಯ ಮೂಲಕ ವಿದ್ಯುತ್ ಅನ್ನು ಪಡೆದುಕೊಳ್ಳುವಂತಹ ಈ ಯೋಜನೆ ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ ಎನ್ನುವುದಕ್ಕೆ ಇದೇ ಜೀವಂತ ಉದಾಹರಣೆ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

1 ಕಿಲೋ ವ್ಯಾಟ್ ನಿಂದ 2 ಕಿಲೋ ವ್ಯಾಟ್ ಸೋಲಾರ್ ಅಳವಡಿಕೆಯ ಮೇಲೆ 30 ರಿಂದ 60,000 ಸಬ್ಸಿಡಿ, 2 ರಿಂದ 3 ಕಿಲೋ ವ್ಯಾಟ್ ಸೋಲಾರ್ ಅಳವಡಿಕೆಯ ಮೇಲೆ 60 ರಿಂದ 78 ಸಾವಿರ ರೂಪಾಯಿಗಳ ಸಬ್ಸಿಡಿಯನ್ನು ನೀಡಲಾಗುತ್ತದೆ ಹಾಗೂ 3 ಕಿಲೋ ವ್ಯಾಟ್ ಗಿಂತ ಮೇಲಿನ ಸೋಲಾರ್ ಅಳವಡಿಕೆಯ ಮೇಲೆ ನಿಮಗೆ 78,000ಗಳ ಸಬ್ಸಿಡಿ ದೊರಕುತ್ತದೆ.

Interest-Free Loan! Check Eligibility, Required Documents
Image Source: informalnewz

ಸೂರ್ಯ ಗರ್ ಯೋಜನೆಯನ್ನು ಈಗಾಗಲೇ ಅಧಿಕೃತವಾಗಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿದೆ. ಸದ್ಯದ ಮಟ್ಟಿಗೆ ರಾಜ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಗೃಹಜ್ಯೋತಿ ಯೋಜನೆ ಕೂಡ ಜಾರಿಯಲ್ಲಿದೆ. ಅವರನ್ನು ಹೊರತುಪಡಿಸಿ ಸಾಮಾನ್ಯ ವಿದ್ಯುತ್ ಬಳಕೆ ಮಾಡುತ್ತಿರುವಂತಹ ಗ್ರಾಹಕರಿಗೆ ಇಂತಹ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಕೂಡ ಇಲಾಖೆ ಸಾಕಷ್ಟು ಪ್ರಯತ್ನ ಪಡುತ್ತಿದೆ ಎನ್ನುವುದು ಪ್ರಮುಖವಾಗಿ ತಿಳಿದು ಬರುತ್ತದೆ.

advertisement

ಇದನ್ನ ಪ್ರಧಾನಮಂತ್ರಿ ಸೋಲಾರ್ ಯೋಜನೆಯ ಎಂಬುದಾಗಿ ಕೂಡ ಕರೆಯಲಾಗುತ್ತದೆ. ಇನ್ನು ರಾಜ್ಯದಲ್ಲಿ ಸೋಲಾರ್ ಯೋಜನೆಯ ಇನ್ನಷ್ಟು ಎಲ್ಲಾ ಕಡೆಗೆ ತಲುಪಿಸುವ ನಿಟ್ಟಿನಲ್ಲಿ ಖಾಸಗಿ ಮಾರಾಟಗಾರರನ್ನು ಕೂಡ ಈ ಯೋಜನೆಯ ಭಾಗವಾಗಿ ಪರಿಗಣಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. 229 ಖಾಸಗಿ ಮಾರಾಟಗಾರರು ಈ ಯೋಜನೆ ಅಡಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Image Source: MagicBricks

ರಾಜ್ಯದಲ್ಲಿ ಒಟ್ಟಾರೆಯಾಗಿ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಅನ್ನು ಉತ್ಪಾದನೆ ಮಾಡಿ ಬಳಸುವಂತಹ ಯೋಜನೆಯ ಇನ್ನಷ್ಟು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿದೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದಾಗಿದ್ದು, ಈಗಾಗಲೇ ರಾಜ್ಯದಲ್ಲಿ ಈ ಯೋಜನೆ ಅಡಿಯಲ್ಲಿ ತಮ್ಮನ್ನು ತಾವು ರಿಜಿಸ್ಟರ್ ಮಾಡಿಕೊಂಡಿರುವಂತಹ ಕುಟುಂಬಗಳ ಸಂಖ್ಯೆಯನ್ನು ನೋಡ್ತಾ ಇದ್ರೆ ಇದು ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೆಳೆದು ಸಾಧ್ಯತೆ ಇದೆ.

ಸೋಲಾರ್ ಖಂಡಿತವಾಗಿ ಯಾವುದೇ ಅನುಮಾನವಿಲ್ಲದೆ ಸರಿಯಾದ ಸಮಯದಲ್ಲಿ ಬೇಕಾಗಿರುವಂತಹ ವಿದ್ಯುತ್ ಬಳಕೆ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವುದರಿಂದಾಗಿ ಅಪರಿಮಿತ ಆಗಿರುವಂತಹ ಸೌರಶಕ್ತಿಯನ್ನು ಬಳಸಿಕೊಂಡು ಒಂದು ಒಳ್ಳೆ ಪರಿಸರಸ್ನೇಹಿ ವಿದ್ಯುತ್ ಅನ್ನು ಬಳಕೆ ಮಾಡುವ ವಿಚಾರದಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಿದೆ.

advertisement

Leave A Reply

Your email address will not be published.