Karnataka Times
Trending Stories, Viral News, Gossips & Everything in Kannada

Property Rules: ತವರಿನ ಆಸ್ತಿ ಕೇಳುವ ಮಹಿಳೆಯರಿಗೆ ಹೊಸ ರೂಲ್ಸ್! ಸರ್ಕಾರದ ಸುತ್ತೋಲೆ

advertisement

ಇತ್ತೀಚೆಗೆ ಭೂಮಿ ಖರೀದಿ ಮಾಡಬೇಕು ಎಂದರೆ ಅದಕ್ಕೆ ಲಕ್ಷಾಂತರ ರೂಪಾಯಿ ನೀಡಬೇಕು. ಇನ್ನು ಕೆಲವರು ತಮ್ಮ ಪೂರ್ವಜರ ಆಸ್ತಿ (Inherited Property) ಯಲ್ಲಿ ಪಾಲು ಪಡೆಯಬೇಕು ಎಂದು ಕಾಯುತ್ತಿರುವವರು ಇದ್ದಾರೆ. ಹಿಂದೆಲ್ಲ ಪುರುಷರಿಗೆ ಆಸ್ತಿ ಹಕ್ಕು ಇತ್ತು ಆದರೆ ಕಾಲ ಕ್ರಮೇಣ ಮಹಿಳೆ ಪುರುಷರಷ್ಟೆ ಆಸ್ತಿ ಪಡೆಯಲು ಹಕ್ಕುದಾರಳು ಅವಳಿಗೆ ಆಸ್ತಿ (Property) ನೀಡಲೇ ಬೇಕು ಎಂಬ ನಿಯಮ ಇದೆ. ಹೀಗಾಗಿ ಆಸ್ತಿಯಲ್ಲಿ ಮಹಿಳೆಗೂ ಸಮಪಾಲು ನೀಡಲೇ ಬೇಕು ಹಾಗಿದ್ದರೂ ಆಸ್ತಿ ವಿಚಾರದಲ್ಲಿ ಮಹಿಳೆಯರು ಯಾವೆಲ್ಲ ಸಂದರ್ಭದಲ್ಲಿ ಹಕ್ಕು ಪಡೆಯಲಾರರು ಯಾವ ಸಂದರ್ಭದಲ್ಲಿ ಆಸ್ತಿ ಕೇಳುವ ಹಕ್ಕು ಮಹಿಳೆಗೆ ಇರಲಾರದು ಎಂಬ ಬಗ್ಗೆ ಇಲ್ಲಿ ನಾವು ಮಾಹಿತಿ ನೀಡಿದ್ದೇವೆ.

WhatsApp Join Now
Telegram Join Now

ಹೆಣ್ಣುಮಕ್ಕಳಿಗೂ ಆಸ್ತಿ (Property) ಯಲ್ಲಿ ಸಮಪಾಲು ನೀಡಲೇ ಬೇಕು ಎಂಬ ನಿಯಮ ಇದೆ ಅದರ ಪ್ರಕಾರವೇ ನೈತಿಕವಾಗಿ ಕಾನೂನಾತ್ಮಕ ರೀತಿಯಲ್ಲಿ ಹೆಣ್ಣು ಮಕ್ಕಳು ತಂದೆ ಅಥವಾ ತಮ್ಮ ಪೂರ್ವಜರ ಆಸ್ತಿ (Inherited Property) ಯಲ್ಲಿ ಪಾಲು ಪಡೆಯುವ ಹಕ್ಕು ಪಡೆದಿದ್ದಾಳೆ. ಹಿಂದೂ ಅರ್ಹತಾ ಅಧಿನಿಯಮದ ಪ್ರಕಾರ ಕೆಲವೊಂದು ಸಂದರ್ಭಗಳಲ್ಲಿ ಹೆಣ್ಣು ಮಕ್ಕಳು ಆಸ್ತಿ ಕೇಳುವ ಹಕ್ಕು ಹೊಂದಿರಲಾರರು ಹಾಗಾದರೆ ಅದು ಯಾವ ಸಂದರ್ಭ ಈ ಬಗ್ಗೆ ಕಾನೂನಿನಲ್ಲಿ ಉಲ್ಲೇಖ ಏನು ಇದೆ ಎಂಬ ಇತ್ಯಾದಿ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳಿ.

ಮಹಿಳೆಗೆ ಆಸ್ತಿ ಕೇಳುವ ಹಕ್ಕು ಇರಲಾರದು?

 

advertisement

Image Source: Makaan.com

 

  • ತಂದೆ ಬದುಕಿದ್ದ ಸಂದರ್ಭದಲ್ಲಿ ಅದು ಆತನ ಸ್ವಯಾರ್ಜಿತ ಆಸ್ತಿ (Property) ಆಗಿದ್ದರೆ ಆಗ ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಆಸ್ತಿ ಪಾಲು ಕೇಳುವ ಅಧಿಕಾರ ಹೊಂದಿರಲಾರರು.
  • ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಆಸ್ತಿ ಪಾಲು ಮಾಡುವುದು ಬಿಡುವುದು, ಸಂಪೂರ್ಣ ಹಕ್ಕು ನೀಡುವುದು ತಂದೆಗೆ ಬಿಟ್ಟ ವಿಚಾರ ಅದರಲ್ಲಿ ಭಾಗ ಕೇಳುವ ಅಧಿಕಾರ ಮಕ್ಕಳಿಗರ ಇರಲಾರದು.
  • ತಂದೆ ಮರಣ ಹೊಂದಿದ್ದು ತನ್ನ ಸ್ವಯಾರ್ಜಿತ ಆಸ್ತಿಗೆ ವಿಲ್ ಮಾಡಿಟ್ಟರೆ, ಯಾರಿಗಾದರೂ ಮಾರಿದ್ದರೆ, ದಾನವಾಗಿ ನೀಡಿದ್ದರೆ ಅಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಪಾಲು ಪಡೆಯಲು ಸಾಧ್ಯವಿಲ್ಲ.
  • ತಂದೆಯ ಸ್ವಯಾರ್ಜಿತ ಆಸ್ತಿ ಯಾವುದೇ ವಿಧವಾಗಿ ವರ್ಗಾವಣೆ ಆಗಿದ್ದರೆ ಅದರಲ್ಲಿ ಪಾಲು ಕೇಳುವ ಹಕ್ಕು ಇರಲಾರದು.
  • ರಿಲೀಸ್ ಡೀಡ್ ಅದರೆ ಹಕ್ಕು ಬಿಡುಗಡೆ ಪತ್ರ ಸಹಿ ಮಾಡಿದ್ದರೆ ಅಂತಹ ಆಸ್ತಿಯನ್ನು ಕೇಳುವ ಅಧಿಕಾರ ಮಹಿಳೆಗೆ ಇರಲಾರದು. ಅಂದರೆ ಆಸ್ತಿ ಪಾಲು ಆಗುವ ಸಂದರ್ಭದಲ್ಲಿ ನನಗೆ ಆಸ್ತಿ ಬೇಡ ಹಣ ಪಡೆಯುತ್ತೇವೆ ಎಂದು ಒಪ್ಪಿಗೆಯಿಂದಲೇ ಹಕ್ಕು ಬಿಡುಗಡೆ ಪತ್ರಕ್ಕೆ ಸಹಿ ಹಾಕಿದ್ದರೆ ಬಳಿಕ ಆಸ್ತಿ ಪಾಲು ಕೇಳುವ ಅಧಿಕಾರ ಇರಲಾರದು.
  • ಬಾಯಿ ಮಾತಿನಲ್ಲಿ ಆಸ್ತಿ ಬೇಡ ಎಂದು ಹೇಳಿ ಅನೇಕ ವರ್ಷದ ಬಳಿಕ ಆ ಜಾಗಕ್ಕೆ ಉತ್ತಮ ಬೆಲೆ ಬಂದಿದೆ ಎಂದು ಆಸ್ತಿ ನೀಡುವಂತೆ ಕೇಳುವ ಹಾಗೆ ಇರಲಾರದು. ಆಸ್ತಿಯಲ್ಲಿ ಬೇಕೆಂದೆ ಪಾಲು ನೀಡದಿದ್ದಾಗ ಪಾಲು ಪಡೆಯಲು ಕಾನೂನಾತ್ಮಕ ಹೋರಾಟ ಮಾಡಬಹುದು.
  • ಹಿಂದು ವಾರಸುದಾರರ ಕಾಯ್ದೆ ಅನ್ವಯ 2005ಕ್ಕೂ ಮೊದಲೇ ಆಸ್ತಿ ಹಂಚಿಕೆಯಾಗಿದ್ದು ಅದನ್ನು ಬೇರೆ ಅವರು ಅನುಭವಿಸುತ್ತಾ ಇದ್ದರೆ ಅಂತಹ ಭೂಮಿ ಮತ್ತೆ ನೀಡಿ ಎಂದು ಕೇಳುವ ಯಾವುದೇ ಹಕ್ಕು ಇರಲಾರದು ಎಂದು ಹೇಳಬಹುದು.
  • ಅದೆ ರೀತಿ ಮಹಿಳೆಯು ಗಂಡನ ಆಸ್ತಿಯನ್ನು ಆತ ಬದುಕಿದ್ದಾಗ ಪಾಲು ಪಡೆಯುವ ಅಧಿಕಾರ ಹೊಂದಿರಲಾರಳು. ಆತ ಮರಣ ಹೊಂದಿದ್ದ ಪಕ್ಷದಲ್ಲಿ ಆತನ ಭಾಗವನ್ನು ಪತ್ನಿ ಹಾಗೂ ಮಕ್ಕಳಿಗೆ ಆಸ್ತಿ ಪಾಲು ಎಂದು ನೀಡುತ್ತಾರೆ.

ಒಟ್ಟಾರೆಯಾಗಿ ಆಸ್ತಿಗಿಂತ ಹೆಚ್ಚು ನಿಮ್ಮ ಸಹೋದರರು ನಿಮ್ಮ ಮದುವೆ ಇತರ ಖರ್ಚು ಮಾಡಿದ್ದರೆ ಆಗ ಆಸ್ತಿ ಪಾಲು ಕೇಳುವುದು ಉತ್ತಮವಲ್ಲ. ನಿಮಗೆ ಸಂಬಂಧ ಉಳಿಯುವ ಮನೋಭಾವ ಇದ್ದರೆ ಸೌಹಾರ್ದಯುತವಾಗಿ ಆಸ್ತಿ ಪಾಲು ಪಡೆಯಬಹುದು. ಕಾನೂನನ್ನು ಉತ್ತಮ ವ್ಯವಸ್ಥೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಉತ್ತಮ ಯೋಚನೆಗಳು ನಮ್ಮಲ್ಲಿ ಇದ್ದಾಗ ಈ ಸಮಾಜದಲ್ಲಿ ಅನಗತ್ಯ ವಿಚಾರಕ್ಕೆಲ್ಲ ವ್ಯಜ್ಯಗಳು ಕೂಡ ಉಂಟಾಗಲಾರದು ಎನ್ನಬಹುದು.

advertisement

Leave A Reply

Your email address will not be published.