Karnataka Times
Trending Stories, Viral News, Gossips & Everything in Kannada

Property Rights: ತಾಯಿ ತವರಿನ ಆಸ್ತಿಯಲ್ಲಿ ಮಕ್ಕಳ ಪಾಲಿನ ಬಗ್ಗೆ ಬಂತು ಹೊಸ ಸೂಚನೆ!

advertisement

ಇಂದು ಆಸ್ತಿ ಪಾಸ್ತಿ ಬೇಡ ಎ‌ಂದು ಹೇಳುವವರು ತುಂಬಾ ವಿರಳ ಎಂದು ಹೇಳಬಹುದು. ಆಸ್ತಿ ಎಷ್ಟು ಇದ್ದರೂ ಮತ್ತಷ್ಟು ಬೇಕು ಎಂಬ ಹಂಬಲ ಆಗುವುದು ಇದೆ. ಮಕ್ಕಳಿಗೆ ಆಸ್ತಿ (Property) ಪಾಲು ನೀಡುವಾಗ ಅಥವಾ ಆಸ್ತಿಯಿಂದ ಪಾಲು ಪಡೆಯುವಾಗ ಕೆಲವು ಸಾಮಾನ್ಯ ನಿಯಮ ಪಾಲಿಸಲಾಗುತ್ತದೆ. ತಾಯಿಯ ತವರು ಆಸ್ತಿಯಲ್ಲಿ ಮಕ್ಕಳಿಗೆ ನೇರ ಪಾಲು ಸಿಗುತ್ತದಾ ಎಂಬ ಬಗ್ಗೆ ನಾವು ಇಂದು ನಿಮಗೆ ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ. ಪಿತ್ರಾರ್ಜಿತ ಆಸ್ತಿ (Inherited Property) ಯಂತೆ ತಾಯಿ ಕಡೆಯಿಂದ ಆಸ್ತಿ ಹಕ್ಕು ಇದೆಯೇ ಈ ಬಗ್ಗೆ ಕಾನೂನಿನಲ್ಲಿ ಯಾವ ಚೌಕಟ್ಟು ಇದೆ ಎಂಬ ಇತ್ಯಾದಿ ಮಹತ್ವದ ಮಹಿತಿಯನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ ಹಾಗಾಗಿ ಮಾಹಿತಿಯನ್ನು ಕೊನೆ ತನಕ ಓದಿ.

WhatsApp Join Now
Telegram Join Now

ಹೆಣ್ಣು ಮಗಳು ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸ್ತವ್ಯ ಮಾಡಿದರು ಆಕೆಗೆ ಆಕೆಯ ತಂದೆಯ ಆಸ್ತಿ (Property) ಪಾಲು ಮಾಡುವಾಗ ನಿಗಧಿತ ಭಾಗ ನೀಡಿಯೇ ನೀಡುತ್ತಾರೆ. ಇಂತಹ ಆಸ್ತಿಗೆ ಕಾನೂನಿನಲ್ಲಿ ಸ್ತ್ರೀ ಧನ ಆಸ್ತಿ ಎಂದು ಕರೆಯುತ್ತಾರೆ. ಅಂದರೆ ತಾಯಿ ಯಾದವಳು ಆಕೆಯ ತವರು ಮನೆಯಲ್ಲಿ ತಂದೆಯಿಂದ ದಾನವಾಗಿ, ಭಕ್ಷಿಸ್ ರೂಪದಲ್ಲಿ ಉಡುಗೊರೆಯಾಗಿ ಆಸ್ತಿ ಪಡೆದಿದ್ದರೆ ಅದನ್ನು ಸ್ತ್ರೀ ಧನ ಆಸ್ತಿ ಎಂದು ಕರೆಯುತ್ತೇವೆ ಇಂತಹ ಆಸ್ತಿಯಲ್ಲಿ ಆಕೆಯ ಮಕ್ಕಳಿಗೆ ಎಷ್ಟರ ಮಟ್ಟಿಗೆ ಅಧಿಕಾರ ಇರುತ್ತದೆ ಎಂದು ನೀವು ಕೂಡ ಓದಿ ತಿಳಿಯಿರಿ.

ತವರಿನ ಆಸ್ತಿ ಪಾಲು ಇದೆಯೇ?

 

Image Source: Aura LLP

 

advertisement

ಹೆಣ್ಣು ಮಗಳಿಗೆ ತವರು ಮನೆಯಿಂದ ಆಸ್ತಿ ಸಿಕ್ಕರೆ ಅಂತಹ ಆಸ್ತಿಗೆ ಆಕೆ ನೇರ ವಾರಸುದಾರರಾಗಲಿದ್ದಾಳೆ. ಆಕೆಗೆ ಆ ಆಸ್ತಿ (Property) ಸ್ವಂತ ಆಗಲಿದ್ದು ಅದನ್ನು ಆಕೆ ಇಚ್ಛಿಸಿದಂತೆ ಅನುಭೋಗ ಮಾಡಬಹುದು. ಅದೇ ರೀತಿ ಅವಳು ಆ ಆಸ್ತಿಯನ್ನು ತನ್ನ ಜೀವಿತ ಅವಧಿಯಲ್ಲಿ ಮಾರುವ, ಗಂಡ ಅಥವಾ ಮಕ್ಕಳ ಹೆಸರಿಗೆ ವಿಲ್ ಮಾಡಿ ವರ್ಗಾವಣೆ ಮಾಡಲು ಸಹ ಅಧಿಕಾರ ಸಿಗಲಿದೆ. ಆದರೆ ತಂದೆಯಿಂದ ಪಡೆದ ಆಸ್ತಿಗೆ ತಂದೆ ಈ ಮೊದಲೇ ವಿಲ್ ಮಾಡಿಟ್ಟರೆ ಮಗಳ ಕಾಲದ ನಂತರ ಮಕ್ಕಳು ಮೊಮ್ಮಕ್ಕಳಿಗೆ ಎಂದು ಇದ್ದರೆ ಅಂತವರಿಗೆ ನೇರವಾಗಿ ಆಸ್ತಿ ಅಧಿಕಾರ ಸಿಗುತ್ತದೆ.

ಮಹಿಳೆ ಮೃತ ಪಟ್ಟರೆ:

ಮಹಿಳೆ ಅಕಾಲಿಕ ಅಥವಾ ವಯೋವೃದ್ಧರಾಗಿ ಮರಣ ಹೊಂದಿದ್ದ ಸಂದರ್ಭದಲ್ಲಿ ಆಕೆ ತನಗೆ ಸಿಕ್ಕ ತವರಿನ ಆಸ್ತಿ ಪಾಲು ಮಾಡದೇ ಹೋದರೆ ಆಗ ಮಹಿಳೆ ಮೃತಪಟ್ಟ ಕಾರಣಕ್ಕೆ ಆಕೆ ನಂತರ ನೇರ ವಾರಸುದಾರರಿಗೆ ಅಧಿಕಾರ ಸಿಗುತ್ತದೆ. ಅಂದರೆ ಗಂಡ, ಮಕ್ಕಳು ಇತರರಿಗೆ ಸಿಗುವ ಸಾಧ್ಯತೆ ಇದೆ.

ಅಷ್ಟು ಮಾತ್ರವಲ್ಲದೆ ಸೊಸೆ, ಮೊಮ್ಮಕ್ಕಳಿಗೂ ಕೆಲವು ಸಂದರ್ಭಗಳಲ್ಲಿ ಆಸ್ತಿ (Property) ಪಾಲು ಪಡೆಯಬಹುದು. ಅದೇ ರೀತಿ ಆಸ್ತಿಯನ್ನು ಬಲವಂತವಾಗಿ ಪಡೆಯುವಂತಿಲ್ಲ, ವಂಚನೆ ಕೂಡ ಮಾಡಬಾರದು ಎಂಬ ನಿಯಮ ಇದೆ‌. ವಂಚಿಸಿ ಆಸ್ತಿ ಬರೆಸಿಕೊಂಡು ಅದಕ್ಕೆ ಸೂಕ್ತ ಕಾರಣ ಇದ್ದರೆ ಆಗ ಸಾಕ್ಷಿ ನಿಖರವಾಗಿ ಇದ್ದರೆ ಕಾನೂನಾತ್ಮಕ ರೀತಿಯಲ್ಲಿ ಆಸ್ತಿ ಮರು ಪಡೆಯುವ ಅಧಿಕಾರ ಕೂಡ ಇದೆ.

advertisement

Leave A Reply

Your email address will not be published.