Karnataka Times
Trending Stories, Viral News, Gossips & Everything in Kannada

KSRTC: KSRTC ಯಲ್ಲಿ ಪ್ರಯಾಣಿಸುವ ಎಲ್ಲಾ ಗಂಡಸರಿಗೆ ಕಾಂಗ್ರೆಸ್ ಸರಕಾರದಿಂದ ಗುಡ್ ನ್ಯೂಸ್

advertisement

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಅಧಿಕಾರ ಪಡೆದು ಒಂದು ವರ್ಷ ಕಳೆಯುತ್ತಿದೆ. ಈ ಒಂದು ವರ್ಷದ ಅವಧಿಯಲ್ಲಿ ಅವರು ನೀಡಿದ್ದ ಅಷ್ಟು ಭರವಸೆಯನ್ನು ಒಂದೊಂದಾಗಿಯೇ ಈಡೇರಿಸುತ್ತಾ ಬಂದಿದ್ದಾರೆ. ಅಂತಹ ಭರವಸೆಯಲ್ಲಿ ಬಹುತೇಕ ಎಲ್ಲವೂ ಜನರಿಗೆ ಉಪಯೋಗ ಆಗಿದೆ ಎಂದು ಹೇಳಬಹುದು. ಹಾಗಾಗಿ ಇಂದಿಗೂ ಜನ ಕಾಂಗ್ರೆಸ್ ಸರಕಾರವನ್ನು ನಿತ್ಯ ಕೊಂಡಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಈಗ ಕಾಂಗ್ರೆಸ್ ಸರಕಾರವು ಗಂಡಸರಿಗೆ ಒಂದು ಬೊಂಪರ್ ಶುಭ ಸುದ್ದಿ ನೀಡುತ್ತಿದ್ದು  ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮೀ (Gruha Lakshmi), ಅನ್ನಭಾಗ್ಯ ಯೋಜನೆ (Anna Bhagya Yojana), ಯುವನಿಧಿ (Yuva Nidhi), ಶಕ್ತಿ ಯೋಜನೆ (Shakti Yojana) ಯನ್ನು ಪರಿಚಯಿಸಿದ್ದು ಇದರಿಂದಾಗಿ ಇಡೀ ಸಮಾಜಕ್ಕೆ ಬಹಳ ದೊಡ್ಡ ಕೊಡುಗೆ ಸಿಕ್ಕಿದೆ ಎಂದು ಹೇಳಬಹುದು. ಇದೀಗ ಶಕ್ತಿ ಯೋಜನೆ ಅಡಿಯಲ್ಲಿ ಪುರುಷರಿಗೆ ಒಂದು ಬೊಂಪರ್ ಗಿಫ್ಟ್ ನೀಡಲಾಗುತ್ತಿದೆ. ಹಾಗಾಗಿ ರಾಜ್ಯದ ಜನತೆಗೆ ಇದೊಂದು ಶುಭ ಸುದ್ದಿ ಎಂದು ಹೇಳಬಹುದು.

ಯಾವುದು ಆ ಶುಭ ಸುದ್ದಿ:

 

Image Source: The Federal News

 

advertisement

ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದ ಮೇಲೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುತ್ತಿದ್ದು ಇದು ಮಹಿಳೆಯರ ಓಡಾಟಕ್ಕೆ ಸಿಕ್ಕ ಬೆಂಬಲ ಎನ್ನಬಹುದು. ಆದರೆ ಪುರುಷರಿಗೆ ಉಚಿತ ಪ್ರಯಾಣ ನೀಡಬೇಕು. ವಯೋವೃದ್ಧರಿಗೆ ಹಾಗೂ ಮಕ್ಕಳಿಗೂ ಸೇರಿ ಸಾರ್ವತ್ರಿಕವಾಗಿ ಶಕ್ತಿ ಯೋಜನೆ ಜಾರಿಗೆ ತರಬೇಕು ಎಂದು ಅನೇಕ ಕಡೆ ವಿಪಕ್ಷ ಹಾಗೂ ಇತರ ಕಡೆ ಸಾಮಾನ್ಯ ಜನರು ತಿಳಿಸುತ್ತಿದ್ದಾರೆ. ಈಗ ಈ ಎಲ್ಲ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಕೆಲವು ಪ್ರಮುಖ ವಿಚಾರ ತಿಳಿಸಲಾಗಿದೆ.

ಲಕ್ಶೂರಿ, ಎಸಿ ಬಸ್ ಅನ್ನು ಹೊರತು ಪಡಿಸಿ ಶಕ್ತಿ ಯೋಜನೆ (Shakti Yojana)ಯ ಅಡಿಯಲ್ಲಿ ಬಹುತೇಕ ಎಲ್ಲ ಮಹಿಳೆಯರಿಗೆ ಸರಕಾರದ ಬಸ್ ನಲ್ಲಿ ಫ್ರೀ ಸೇವೆ ನೀಡಲಾಗುತ್ತಿದೆ. ಇದರಿಂದ ಬಸ್ ಯಾವಾಗಲೂ ರಶ್ ಇರುತ್ತದೆ ಟಿಕೇಟ್ ಹಣ ಕೊಟ್ಟು ಪಡೆದು ಕೂಡ ನಿಂತುಕೊಂಡೆ ಪ್ರಯಾಣ ಮಾಡಬೇಕು ಎಂದು ಅನೇಕ ಪುರುಷರು ಈ ಬಗ್ಗೆ ದೂರುತ್ತಿದ್ದರೆ ಇದಕ್ಕೊಂದು ಪರಿಹಾರವನ್ನು ಸಿಎಂ (CM Siddaramaiah) ಅವರು ತಿಳಿಸಿದ್ದಾರೆ. ಬಸ್ ನಲ್ಲಿ ಪುರುಷರಿಗೆ 50% ನಷ್ಟು ಮೀಸಲಾತಿ ಇದೆ. ಉಳಿದ 50% ಮಹಿಳೆಯರಿಗೆ ಇರಲಿದೆ‌ ಎಂದಿದ್ದು ಪುರುಷರಿಗೆ ಸಿಕ್ಕ ಬೆಂಬಲದಂತಾಗಿದೆ ಎನ್ನಬಹುದು.

 

Image Source: Star of Mysore

ಅದರೊಂದಿಗೆ ಹಿರಿಯನಾಗರಿಕರು ಉಚಿತ ಪ್ರಯಾಣ ರಿಯಾಯಿತಿ ಪ್ರಯಾಣ ಮಾಡಲು ಬಯಸಿದರೆ ಕಡ್ಡಾಯವಾಗಿ ಹಿರಿಯನಾಗರಿಕರ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಹಾಗಾಗಿ ಮುಂದಿನ ದಿನದಲ್ಲಿ ಪುರುಷರಿಗೆ ಟಿಕೇಟ್ ರಿಯಾಯಿತಿ ನೀಡುವ ಬಗ್ಗೆ ಹಾಗೂ ಕಡಿಮೆ ಟಿಕೆಟ್ ಪ್ರಯಾಣಕ್ಕೆ ಅವಕಾಶ ನೀಡುವ ಪ್ರಸ್ತಾವನೆ ಕೂಡ ಸರಕಾರದ ಮುಂದಿದ್ದು ಇದಕ್ಕೆ ಸರಕಾರ ಸಮ್ಮತಿ ನೀಡುತ್ತಾ ಎಂದು ಕೂಡ ಕಾದು ನೋಡಬೇಕು.

advertisement

Leave A Reply

Your email address will not be published.