Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ರದ್ದತಿಗೆ ಮತ್ತೊಂದು ನಿಯಮ ಸೇರ್ಪಡೆ! ಆಹಾರ ಇಲಾಖೆ ಆದೇಶ

advertisement

ಭಾರತ ಸರ್ಕಾರ ಪ್ರತಿ ಬಾರಿ ಕೂಡ ತನ್ನ ದೇಶದಲ್ಲಿರುವಂತಹ ಮಧ್ಯಮ ಹಾಗೂ ಬಡವರ್ಗದ ಕುಟುಂಬಗಳ ಜೀವನ ಶೈಲಿಯನ್ನು ಯಾವ ರೀತಿಯಲ್ಲಿ ಉದ್ಧಾರ ಮಾಡಬೇಕು ಎನ್ನುವಂತಹ ಕಾರಣಕ್ಕಾಗಿ ಪ್ರತಿಯೊಂದು ಯೋಚನೆ ಹಾಗೂ ಯೋಜನೆಗಳನ್ನು ಮಾಡುತ್ತದೆ. ಇನ್ನು ಭಾರತ ಸರ್ಕಾರ ಜಾರಿಗೆ ತರುವಂತಹ ನಿಯಮ ಅಥವಾ ಯೋಜನೆಗಳಲ್ಲಿ ತಮ್ಮನ್ನು ತಾವು ಭಾರತೀಯರು ತೊಡಗಿಸಿಕೊಳ್ಳುವುದಕ್ಕಿಂತ ಮುಂಚೆ ಆ ನಿಯಮ ಬದ್ಧರಾಗಿ ತಾವು ಇದ್ದೇವು ಇಲ್ಲವೋ ಎನ್ನುವುದನ್ನು ಪರಿಶೀಲಿಸುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.

WhatsApp Join Now
Telegram Join Now

ಸರ್ಕಾರ ಜಾರಿಗೆ ತರುವಂತಹ ನಿಯಮಗಳಿಗೆ ನಾವು ಬದ್ಧರಾದರೆ ಮಾತ್ರ ನಮ್ಮ ದೇಶ ಮುಂದುವರಿಯೋದಕ್ಕೆ ಸಾಧ್ಯ ಹಾಗೂ ಪ್ರತಿಯೊಬ್ಬರು ಕೂಡ ಅಭಿವೃದ್ಧಿಯ ಕಡೆಗೆ ಸಾಗುವುದಕ್ಕೆ ಸಾಧ್ಯ ಅನ್ನೋದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿದೆ.

ಈ ರೀತಿ ಮಾಡಿದ್ರೆ ನಿಮ್ಮ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ ಹುಷಾರ್!

 

Image Source: The Economic Times

 

advertisement

ನಮ್ಮ ದೇಶದಲ್ಲಿ ಜನರು ಎಷ್ಟರಮಟ್ಟಿಗೆ ನಿಯಮಗಳನ್ನು ಮೀರುತ್ತಿದ್ದಾರೆ ಎಂದರೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಸಾಮಾನ್ಯವಾಗಿ ಬಡತನದ ರೇಖೆಗಿಂತ ಕೆಳಗಿರುವಂತಹ ಜನರಿಗಾಗಿ ಸರ್ಕಾರ ಜಾರಿಗೆ ತಂದಿದ್ದರೆ ಅದನ್ನು ನಕಲಿ ದಾಖಲೆ ಪತ್ರಗಳನ್ನು (Fake Documents) ನೀಡುವ ಮೂಲಕ ಪಡೆದುಕೊಳ್ಳುವಂತಹ ಕೆಲಸವನ್ನು ಕೆಲವು ಲಜ್ಜೆಗೆಟ್ಟ ಜನರು ಮಾಡುತ್ತಿದ್ದಾರೆ. ಅವರನ್ನು ಹುಡುಕಿ, ಅವರಿಂದ ರೇಷನ್ ಕಾರ್ಡ್ ರದ್ದು ಮಾಡುವಂತಹ ಕೆಲಸವನ್ನು ಅಧಿಕಾರಿಗಳು ಈಗಾಗಲೇ ಪ್ರಾರಂಭ ಮಾಡಿದ್ದು ಲಕ್ಷಾಂತರ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಗಳು ಇದರ ಅಡಿಯಲ್ಲಿ ಈಗಾಗಲೇ ಕ್ಯಾನ್ಸಲ್ ಆಗಿದೆ.

ಅದಕ್ಕಿಂತಲೂ ಪ್ರಮುಖವಾಗಿ ಈಗ ಮತ್ತೊಂದು ಕೆಲಸ ಕೂಡ ಬೆಳಕಿಗೆ ಬಂದಿದ್ದು ಒಂದು ವೇಳೆ ನೀವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಇದನ್ನ ಮಾಡಿದ್ರೆ ತಪ್ಪದೇ ಈಗಲೇ ಇದನ್ನ ಸರಿಪಡಿಸಿಕೊಳ್ಳಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನೀವು ಕೂಡ ನಿಮ್ಮ ರೇಷನ್ ಕಾರ್ಡ್ (Ration Card) ರದ್ದತಿಯನ್ನು ಕಾಣಬೇಕಾಗುತ್ತದೆ ಅನ್ನೋದನ್ನ ಮರೆಯಬೇಡಿ.

ಅದೇನೆಂದರೆ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ ಗಳನ್ನ ಒಂದು ಕುಟುಂಬ ಹೊಂದುವುದು ಅಥವಾ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ರೇಷನ್ ಕಾರ್ಡ್ (Ration Card) ನಲ್ಲಿ ಇರುವುದು ಕಂಡು ಬಂದರೆ ಅಂತವರ ರೇಷನ್ ಕಾರ್ಡ್ ಅರ್ಹತೆಯನ್ನು ರದ್ದುಗೊಳಿಸಲಾಗುತ್ತದೆ ಅಥವಾ ರೇಷನ್ ಕಾರ್ಡ್ ರದ್ದುಗೊಳಿಸಲಾಗುತ್ತದೆ ಎಂದು ಹೇಳಬಹುದಾಗಿದೆ.

ಇದು ಕೆಲವೊಮ್ಮೆ ಗೊತ್ತಿಲ್ಲದೇ ಕೂಡ ಆಗಿರಬಹುದು ಅಥವಾ ಒಬ್ಬರು ಮದುವೆಯಾಗಿ ಇನ್ನೊಂದು ಕುಟುಂಬಕ್ಕೆ ಹೋದಾಗ ಅಲ್ಲಿ ಕೂಡ ರೇಷನ್ ಕಾರ್ಡ್ (Ration Card) ನಲ್ಲಿ ಅವರನ್ನು ಸೇರಿಸುವುದು ಕೂಡ ಇದಕ್ಕೆ ಕಾರಣವಾಗಿರಬಹುದು. ಹೀಗಾಗಿ ಅಧಿಕಾರಿಗಳು ಇದನ್ನ ನೋಡಿ ನಿಮಗೆ ತಕ್ಕನಾಗಿರುವಂತಹ ಶಿಕ್ಷೆಯನ್ನು ನೀಡುವುದಕ್ಕಿಂತ ಮುಂಚೆ ನೀವೇ ಇದನ್ನು ಸರಿಪಡಿಸಿಕೊಳ್ಳುವುದು ಒಳ್ಳೆಯದು ಎಂದು ಹೇಳಬಹುದು.

advertisement

Leave A Reply

Your email address will not be published.