Karnataka Times
Trending Stories, Viral News, Gossips & Everything in Kannada

Rajahamsa Bus: ರಾಜಹಂಸ ಬಸ್ ಹತ್ತುವವರಿಗೆ ಗುಡ್ ನ್ಯೂಸ್! ಕರ್ನಾಟಕ ಸರ್ಕಾರದ ಮಹತ್ವದ ಘೋಷಣೆ

advertisement

ಇಂದು ಸಾರಿಗೆ ಇಲಾಖೆಯು ಜನರ ಪ್ರಯಾಣ ಕ್ಕಾಗಿ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ರಾಜ್ಯ ಸರಕಾರದಿಂದ ಮಹಿಳೆಯರಿಗಾಗಿ ಉಚಿತ ಪ್ರಯಾಣ (Free Bus Travel) ವನ್ನು ನೀಡ್ತಾ ಇದ್ದು ಉಚಿತ ಟಿಕೆಟ್ ಪಡೆಯುವ ಮೂಲಕ ಕರ್ನಾಟಕದಲ್ಲಿ ಪ್ರಯಾಣ ಮಾಡ್ತಾ ಇದ್ದಾರೆ. ಅದೇ ರೀತಿ ಹಿರಿಯ ನಾಗರಿಕರು ಕೂಡ ಪಾಸ್ ಪಡೆಯುವ ಮೂಲಕ ಸೌಲಭ್ಯ ಪಡೆಯುತ್ತಾ ಇದ್ದಾರೆ.

ಇಂದು ಬಸ್ ಕೊರತೆ ಇದ್ದ ಕಡೆ ಹೊಸ ಬಸ್ ಗಳನ್ನು ಜಾರಿಗೆ ತರುವುದಾಗಿ ಈಗಾಗಲೇ ಸಾರಿಗೆ‌ ಇಲಾಖೆಯು ತಿಳಿಸಿದೆ.‌ ಹೌದು ಇಂದು ಉಚಿತ ಬಸ್ ಪ್ರಯಾಣ (Free Bus Travel) ದಿಂದ ದಿನ ನಿತ್ಯ ಪ್ರಯಾಣ ‌ಮಾಡುವ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಸಮಸ್ಯೆ ಯಾಗ್ತಾ ಇದ್ದು ಇದಕ್ಕೆ‌ಪರಿಹಾರ ವಾಗಿ ಬಸ್ ‌ಇಲ್ಲದೆ ಕಡೆ ಹೊಸ ಬಸ್ ಸದ್ಯದಲ್ಲೇ ಬಿಡುಗಡೆ ಮಾಡುದಾಗಿ ತಿಳಿಸಿದೆ.

ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯು (KSRTC) ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ರೀತಿಯ ಸೇವೆಗಳನ್ನು ನೀಡ್ತಾ ಇದೆ.‌ ಅದೇ ರೀತಿ ಪ್ರಯಾಣಿಕರನ್ನು ಮತ್ತಷ್ಟೂ ಆಕರ್ಷಣೆ ಮಾಡಲು ಮತ್ತಷ್ಟು ಹೊಸ ಯೋಜನೆಗಳನ್ನು ನೀಡುತ್ತಿದೆ. ಕೆಲವೊಂದು ಸ್ಥಳದಲ್ಲಿ ತನ್ನ ಬಸ್‌ಗಳ ಸಂಖ್ಯೆ ಹೆಚ್ಚು ಮಾಡುದರ ಜೊತೆಗೆ ಇತರ ಕಡೆಯು ವಿಸ್ತರಣೆ ಮಾಡುತ್ತಿದೆ. ಇದೀಗ ಎರಡು ರಾಜಹಂಸ ಬಸ್‌ಗಳನ್ನು (Rajahamsa Bus) ಬಿಡುಗಡೆ ಮಾಡುತ್ತಿದೆ.

 

Image Source: Star of Mysore

 

advertisement

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗ ವತಿಯಿಂದ ಬಳ್ಳಾರಿಯಿಂದ ಹುಬ್ಬಳ್ಳಿಗೆ ಜೂ.27 ರಿಂದ 2 ರಾಜಹಂಸ ಸಾರಿಗೆ ಬಸ್ (Rajahamsa Bus) ಬರಲಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ (Inayat Baghban) ಅವರು ಮಾಹಿತಿ ನೀಡಿದ್ದು ಇಲ್ಲಿನ ಜನತೆಗೆ ಈ ವಿಚಾರ ಖುಷಿ ಸಿಕ್ಕಂತೆ ಆಗಿದೆ.

ಈ ಬಸ್ ಗಳು ಬಳ್ಳಾರಿಯಿಂದ ಬೆಳಿಗ್ಗೆ 5.30 ಮತ್ತು 07 ಗಂಟೆಗೆ ಹೊರಟು, ಹುಬ್ಬಳ್ಳಿಗೆ ಬೆಳಿಗ್ಗೆ 10.30 ಮತ್ತು ಮಧ್ಯಾಹ್ನ 12 ಗಂಟೆಗೆ ಬರಲಿದ್ದು, ಹುಬ್ಬಳ್ಳಿಯಿಂದ ಬೆಳಿಗ್ಗೆ 11 ಮತ್ತು 01 ಗಂಟೆಗೆ ಹೊರಟು, ಬಳ್ಳಾರಿಗೆ ಸಂಜೆ 04 ಮತ್ತು 06 ಗಂಟೆಗೆ ತಲುಪಲಿದೆ ಎನ್ನಲಾಗಿದೆ. ಇದರ ಟಿಕೆಟ್ ಮೊತ್ತವು ರೂ.430 ಆಗಲಿದ್ದು ಮುಂಗಡ ಆಸನಗಳನ್ನು ತೆರೆದಿಡ ಬೇಕಾದರೆ ಪ್ರಯಾಣಿಕರು www.ksrtc.in ಗೆ ಭೇಟಿ ನೀಡಬಹುದು ಎನ್ನಲಾಗಿದೆ.

 

Image Source: The Hindu

ಇದಕ್ಕಾಗಿ ಬಳ್ಳಾರಿ-ಹುಬ್ಬಳ್ಳಿ ಮಾರ್ಗದಲ್ಲಿ ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ ಮಾರ್ಗದಲ್ಲಿ ನಿಲುಗಡೆ ಕಲ್ಪಿಸಲಾಗಿದೆ, ಹೊಸ ರಾಜಹಂಸ ಬಸ್ (Rajahamsa Bus) ಸೇವೆಯನ್ನು‌ ಪ್ರಯಾಣಿಕರು ಉಪಯೋಗ ಪಡೆದುಕೊಳ್ಳಬೇಕು ಎಂದು ಈಗಾಗಲೇ ಕರೆ ನೀಡಲಾಗಿದೆ.

advertisement

Leave A Reply

Your email address will not be published.